ಬೆಂಗಳೂರು: ಟಾಟಾ ಮೋಟಾರ್ಸ್ ಸಂಸ್ಥೆ ಹಾರಿಜಾನ್ ನೆಕ್ಸ್ಟ್ ಉತ್ಪನ್ನದ ಬಲವರ್ಧನೆಗಾಗಿ ರಾಷ್ಟ್ರಾದ್ಯಂತ ಮೆಗಾ ಸರ್ವಿಸ್ ಯೋಜನೆಯನ್ನು ಹಾಕಿಕೊಂಡಿದೆ.
ಟಾಟಾ ಅಧಿಕೃತ ಸೇವಾ ಕೇಂದ್ರಗಳು ಹಾಗೂ 570 ವಿತರಕರು ಪ್ರಯಾಣಿಕ ಕಾರು ಹಾಗೂ ಯುಟಿಲಿಟಿ ವಾಹನಗಳಿಗೆ ಉಚಿತ ಸೇವಾ ಪರೀಕ್ಷೆ ನೀಡಲಿದ್ದಾರೆ. ಬಿಡಿಭಾಗ, ಸರಕುಗಳ ಮೇಲೆ ಉಚಿತ ಸೇವಾ ತಪಾಸಣೆ ಹಾಗೂ ಕೊಡುಗೆಗಳನ್ನು ಆಕರ್ಷಕ ದರದಲ್ಲಿ ಪಡೆಯಬಹುದು. ಮೌಲ್ಯಾಧಾರಿತ ಸೇವೆ ಒದಗಿಸುವ 18 ಪೂರೈಕೆದಾರರೊಂದಿಗೆ ಸಂಸ್ಥೆಯು ಸಹಭಾಗಿತ್ವ ಹೊಂದಿದ್ದು ಈ ಕೇಂದ್ರಗಳಲ್ಲೂ ರಿಯಾಯಿತಿ ಸೇವೆ ದೊರೆಯಲಿದೆ.
ಈ ಕುರಿತು ಮಾಹಿತಿ ನೀಡಿದ ಸಂಸ್ಥೆಯ ವಹಿವಾಟು ವಿಭಾಗದ ಗ್ರಾಹಕ ಬೆಂಬಲ ಮುಖ್ಯಸ್ಥ ದಿನೇಶ್ ಭಾಸಿನ್, ಗ್ರಾಹಕರತ್ತ ಹೆಚ್ಚು ಗಮನಹರಿಸಿರುವ ಸಂಸ್ಥೆಯು ಹಾರಿಜನ್ ನೆಕ್ಸ್ಟ್ ಬಲವರ್ಧನೆಯ ಭಾಗವಾಗಿ ಉಚಿತ ಸೇವೆ ಘೋಷಿಸಿದೆ. ಈ ಸೇವೆಯು ತಂತ್ರಜ್ಞಾನ, ಸೇವಾಜಾಲ ಹಾಗೂ ಗ್ರಾಹಕರ ಒಳನೋಟಗಳನ್ನು ಪರಿಗಣಿಸಿದೆ. ದೇಶಾದ್ಯಂತ ಎಲ್ಲ ಮಾದರಿಯ ಗ್ರಾಹಕರಿಗೆ ರಿಯಾಯಿತಿ ಸೇವೆ ನೀಡಲಾಗುತ್ತಿದೆ ಎಂದರು.