ಜಿಲ್ಲಾ ಸುದ್ದಿ

ತುಳು ಚಿತ್ರನಟ, ರಂಗಭೂಮಿ ಕಲಾವಿದ ಕೆ.ಎನ್.ಟೈಲರ್ ವಿಧಿವಶ

Rashmi Kasaragodu

ಮಂಗಳೂರು:  ಹಿರಿಯ ರಂಗಭೂಮಿ ಕಲಾವಿದ, ತುಳು ಚಲನಚಿತ್ರ ನಟ ಕೆ.ಎನ್.ಟೈಲರ್ ಮಂಗಳೂರಿನ  ಕರಂಗಲಪಾಡಿಯ ಖಾಸಗಿ ನರ್ಸಿಂಗ್ ಹೋಮ್‌ನಲ್ಲಿ ಬುಧವಾರ ಮುಂಜಾನೆ ನಿಧನರಾಗಿ ದ್ದಾರೆ. ಅವರಿಗೆ 77 ವರ್ಷ ವಯಸ್ಸಾಗಿತ್ತು.

ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅವರು, ಫೆಬ್ರವರಿ ಆರಂಭದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು.  

ತುಳು ಚಿತ್ರರಂಗದ ರಾಜ್‌ಕುಮಾರ್ ಎಂಬ ಖ್ಯಾತಿಯ ಕೆ.ಎನ್.ಟೈಲರ್, ತುಳುವಿನಲ್ಲಿ 10 ಚಲನಚಿತ್ರಗಳನ್ನು ನಿರ್ದೇಶಿಸಿ, ನಾಯಕನಾಗಿ ನಟಿಸಿದ್ದರು.

'ದಾರೆದ ಬುಡೆದಿ' ತುಳು ಚಿತ್ರದ ಮೂಲಕ ತುಳು ಸಿನಿಮಾದ ಜನಕ ಎನಿಸಿಕೊಂಡ ಟೈಲರ್, ಬಹಳಷ್ಟು ಕಲಾವಿದರು ತುಳು ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. 'ಕಾಸದಾಯೇ ಕಂಡನೆ' ಎಂಬ ಚಲನ ಚಿತ್ರದ ಮೂಲಕ ನಟಿ ಜಯಮಾಲಾರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದರು.

ದಾರೆದ ಬುಡೆದಿ, ಪಗೆತ ಪುಗೆ, ಬಿಸತ್ತಿ ಬಾಬು, ಯಾನ್ ಸನ್ಯಾಸಿ ಆಪೆ, ಕಾಸ್‌ದಾಯೆ ಕಂಡನಿ, ಏರ್ ಮಲ್ತಿನ ತಪ್ಪು, ಭಾಗ್ಯವಂತೆದಿ, ಸಾವಿರೋಡೊರ್ತಿ ಸಾವಿತ್ರಿ, ತುಳುನಾಡ ಸಿರಿ ಇತ್ಯಾದಿ ಕೆ.ಎನ್. ಟೈಲರ್‌ರವರು ನಿರ್ದೇಶಿಸಿ, ನಿರ್ಮಿಸಿದ ತುಳು ಚಲನ ಚಿತ್ರಗಳು.


ಗಣೇಶ ನಾಟಕ ಸಭಾ ತಂಡ ಕಟ್ಟಿ 50 ವರ್ಷಕ್ಕೂ ಹೆಚ್ಚು ಕಲಾ ಸೇವೆ ಮಾಡಿರುವ ಕೆ.ಎನ್.ಟೈಲರ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ, ಅಕಾಡೆಮಿ ಪ್ರಶಸ್ತಿ ಸಹಿತ ಅನೇಕ ಪುರಸ್ಕಾರಗಳು ಲಭಿಸಿವೆ.

SCROLL FOR NEXT