ಮಾನಸೋಲ್ಲಾಸ ಗ್ರಂಥ ಲೋಕಾರ್ಪಣೆ ಮಾಡಿದ ರಾಜ್ಯಪಾಲ ವಜುಭಾಯಿ ವಾಲಾ 
ಜಿಲ್ಲಾ ಸುದ್ದಿ

ಧರ್ಮ, ಸಂಸ್ಕೃತಿ ಉಳಿವಿಗೆ ಸಂಸ್ಕೃತ ಉಳಿಸಿ

ಒಂದು ಧರ್ಮ ಉಳಿಯಬೇಕಾದರೆ, ಸಂಸ್ಕೃತಿ ಉಳಿಯಬೇಕು. ಸಂಸ್ಕೃತಿ ಉಳಿಯಬೇಕೆಂದರೆ ಸಂಸ್ಕೃತ ಉಳಿಯಬೇಕು. ಸಂಸ್ಕೃತವನ್ನು ಉಳಿಸುವ ನಿಟ್ಟಿನಲ್ಲಿ ಎಲ್ಲರ...

ಬೆಂಗಳೂರು: ಒಂದು ಧರ್ಮ ಉಳಿಯಬೇಕಾದರೆ, ಸಂಸ್ಕೃತಿ ಉಳಿಯಬೇಕು. ಸಂಸ್ಕೃತಿ ಉಳಿಯಬೇಕೆಂದರೆ ಸಂಸ್ಕೃತ ಉಳಿಯಬೇಕು. ಸಂಸ್ಕೃತವನ್ನು ಉಳಿಸುವ ನಿಟ್ಟಿನಲ್ಲಿ ಎಲ್ಲರ ಪ್ರಯತ್ನ ಅತ್ಯವಶ್ಯ ಎಂದು ರಾಜ್ಯಪಾಲ ವಜುಭಾಯಿ ವಾಲಾ ಹೇಳಿದ್ದಾರೆ.

ಯವನಿಕಾ ಸಭಾಂಗಣದಲ್ಲಿ ಬುಧವಾರ `ಮಾನಸೋಲ್ಲಾಸ' ಗ್ರಂಥವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ, ಸಂಸ್ಕೃತ ನಾಶವಾದರೆ, ಸಂಸ್ಕೃತಿಯೇ ನಾಶವಾದಂತೆ ಎಂಬುದನ್ನು ತಿಳಿಯಬೇಕು. ಸಂಸ್ಕೃತ ಭಾಷೆಯಲ್ಲಿ ಎಲ್ಲ ರಾಜ್ಯಗಳ ಇತಿಹಾಸದ ಬಗ್ಗೆ ಅದೆಷ್ಟೋ ಪುಸ್ತಕಗಳಿವೆ. ಅದರಲ್ಲಿ ಜೀವನದ ಬಗ್ಗೆ ನೀತಿ ಪಾಠವಿದೆ. ಈ ವಿಶ್ವದಲ್ಲಿ ಎಲ್ಲರೂ ಒಂದೇ ಎಂಬ ಮಂತ್ರವನ್ನು ಅದು ಹೇಳಿಕೊಡುತ್ತದೆ ಎಂದರು.

ಹಿಂದುಗಳು ಸರ್ವಧರ್ಮ  ಸಹಿಷ್ಣು ತತ್ವವನ್ನು ನಂಬಿದ್ದಾರೆ. ಇದಕ್ಕಾಗಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಾಗ ಇಲ್ಲಿರುವ ಮುಸ್ಲಿಮರು,  ಕ್ರಿಶ್ಚಿಯನ್ನರು, ಉಳಿದ ಧರ್ಮದವರನ್ನು ಭಾರತ ಬಿಟ್ಟು ನಿಮ್ಮ ನಿಮ್ಮ ದೇಶಗಳಿಗೆ ಹೋಗಿ ಎಂದು ನಾವು ಎಂದೂ ಹೇಳಿಲ್ಲ. ನಮ್ಮ ಧರ್ಮ ಅಂಥ ಸಂಸ್ಕೃತಿಯನ್ನು ಕೊಟ್ಟಿದೆ.  ಎಲ್ಲರೂ ಒಂದಾಗಿ ಸಾಗಿದರೆ ಮಾತ್ರ ಸ್ವರ್ಗ ಸುಖ ಎಂಬ ಪಾಠವನ್ನು ಸಂಸ್ಕೃತಿ ಹೇಳಿಕೊಟ್ಟಿದೆ ಎಂದು ತಿಳಿಸಿದರು. ಈ ಮಾನಸೋಲ್ಲಾಸ ಗ್ರಂಥದಲ್ಲಿಯೂ ಇಂಥ ತತ್ವಗಳೇ ಕಾಣಸಿಗುತ್ತವೆ. ಹಾಗಾಗಿ ಸಂಸ್ಕೃತದಲ್ಲಿರುವ ಇಂಥ ಅನೇಕ ಮಹಾನ್ ಕಾವ್ಯಗಳು, ಗ್ರಂಥಗಳ ಅನುವಾದ ಆಗಬೇಕು ಎಂದರು.

ಜೈನ್ ವಿವಿಯ ಮಾನವಿಕ ಹಾಗೂ ಸಮಾಜಶಾಸ್ತ್ರ ವಿಭಾಗದ ಡೀನ್ ಪ್ರೊ. ಚೂಡಾಮಣಿ ನಂದಗೋಪಾಲ್ ಮಾತನಾಡಿ, ಮಾನಸೋಲ್ಲಾಸ ವಿಶ್ವಕೋಶವು 5 ಸಂಪುಟವನ್ನೊಳಗೊಂಡಿದೆ. ಒಂದೊಂದು ಸಂಪುಟದಲ್ಲೂ 20 ಅಧ್ಯಾಯಗಳಿವೆ. 100 ಅಧ್ಯಾಯಗಳಿರುವ ಈ ವಿಶ್ವಕೋಶದಲ್ಲಿ 8022 ಶ್ಲೋಕಗಳಿವೆ ಎಂದು ತಿಳಿಸಿದರು. ಸಂಸ್ಕೃತ ವಿವಿ ವಿಶ್ರಾಂತ ಕುಲಪತಿ ಹಾಗೂ ಗ್ರಂಥದ ಸಂಪಾದಕ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಮಾತನಾಡಿ, ಕ್ರಿ.ಶ. ಹನ್ನೆರಡನೆ ಶತಮಾನದ ಪೂರ್ವಾ ರ್ಧದಲ್ಲಿ ಚಾಲುಕ್ಯ ಚಕ್ರವರ್ತಿ ಮೂರನೇ ಸೋಮೇಶ್ವರ ಈ ಗ್ರಂಥವನ್ನು ರಚಿಸಿದ್ದಾರೆ. ಅನೇಕ ವಿದ್ವಾಂಸರಿಂದ ಗ್ರಂಥ ಪರಿಷ್ಕರಣೆಯಾಗಿದೆ. ಸಾಹಿತಿ ಎಂ.ಎಂ. ಕಲಬುರ್ಗಿ ಅವರ ಪಾತ್ರ ಸಹ ಇದರಲ್ಲಿ ತುಂಬಾ ಇದೆ ಎಂದರು. ಪ್ರೊ. ಎಸ್.ಎನ್. ಬಾಲಗಂಗಾಧರ, ದರೇಸ ಪಬ್ಲಿಕೇಷನ್ ನ ಪ್ರಕಾಶಕರಾದ ಶಾಂತಲಾ ಜಿ. ಕಿರಣ್ ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!