ಸಾಂದರ್ಭಿಕ ಚಿತ್ರ 
ಜಿಲ್ಲಾ ಸುದ್ದಿ

ಸೋರಿಕೆ ಸಿಲಿಂಡರ್ ಎಸೆದಿದ್ದ ಸಂಪಿನಲ್ಲಿ ಇಬ್ಬರ ದುರ್ಮರಣ!

ನೀರಿನ ತೊಟ್ಟಿಗೆ ಬಿದ್ದ ಒಬ್ಬನನ್ನು ರಕ್ಷಿಸಲು ಹೋದ ಮತ್ತೊಬ್ಬ ವ್ಯಕ್ತಿಯೂ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಬಯ್ಯಪ್ಪನಹಳ್ಳಿಯ ಸಿದ್ದಗುಂಟೆಪಾಳ್ಯದಲ್ಲಿ ಶನಿವಾರ ನಡೆದಿದೆ...

ಬೆಂಗಳೂರು: ನೀರಿನ ತೊಟ್ಟಿಗೆ ಬಿದ್ದ ಒಬ್ಬನನ್ನು ರಕ್ಷಿಸಲು ಹೋದ ಮತ್ತೊಬ್ಬ ವ್ಯಕ್ತಿಯೂ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಬಯ್ಯಪ್ಪನಹಳ್ಳಿಯ ಸಿದ್ದಗುಂಟೆಪಾಳ್ಯದಲ್ಲಿ ಶನಿವಾರ ನಡೆದಿದೆ.

ತಮಿಳುನಾಡು ಮೂಲದ ಮಹೇಂದ್ರ (47) ಅರುಣ್ (25) ಮೃತರು. ಸಿದ್ಧ ಗುಂಟೆ ಪಾಳ್ಯದಲ್ಲಿರುವ ಪ್ರದೀಪ ಎನ್ನುವವರ ಮನೆಯ ಅಡುಗೆ ಅನಿಲ ಸೋರಿಕೆಯಾಗಿ ಬೆಂಕಿ ಹತ್ತಿದ ವೇಳೆ, ಈ ಇಬ್ಬರೂ ಬೆಂಕಿ ನಂದಿಸಲು ಮುಂದಾದಾಗ ಘಟನೆ ಸಂಭವಿಸಿದೆ. ಬೆಂಕಿ ಹೊತ್ತಿಕೊಂಡಿದುದನ್ನು ಗಮನಿಸಿದ ಪ್ರದೀಪ, ಸ್ಪೌವ್ ನಿಂದ ಪೈಪನ್ನು ಕಿತ್ತು ಸಿಲಿಂಡರನ್ನು ಮನೆಯ ಹತ್ತಿರವಿರುವ ದೊಡ್ಡ ಸಂಪಿಗೆ ತಂದು ಎಸೆದು ಬೆಂಕಿ ನಂದಿಸಿದ್ದಾರೆ.

ಅವರ ಮನೆ ಸಮೀಪದಲ್ಲೇ ವಾಸವಾಗಿದ್ದ ಮಹೇಂದ್ರ ಸಾಯಂಕಾಲ ಮದ್ಯ ಸೇವಿಸಿ ಅಲ್ಲಿಗೆ ಆಗಮಿಸಿದ್ದಾನೆ. ಆಗ ಬೆಂಕಿ ವಿಷಯ ತಿಳಿದ ಆತ ಸಿಲಿಂಡರ್ ಏನಾಗಿದೆ ಎಂದು ಸಂಪ್ನಲ್ಲಿ ಬಗ್ಗೆ ನೋಡುತ್ತಿದ್ದಾಗ ಆಯತಪ್ಪಿ ಬಿದ್ದಿದ್ದಾನೆ. ಈ ವೇಳೆ ನೀರಿನಲ್ಲಿ ಮಿಶ್ರಣವಾಗಿದ್ದ ಕಾರಣ ಆತ ವಾಸನೆ ತಾಳದೆ, ಮೇಲೆ ಬರಲು ಆಗದೇ ಒದ್ದಾಡುತ್ತಿದ್ದ. ಅಷ್ಟರಲ್ಲಿ ಅಲ್ಲಿಯೇ ಇದ್ದ ಅರುಣ್ ಸಂಪಿನಲ್ಲಿ ಜಿಗಿದು ಮಹೇಂದ್ರನ ರಕ್ಷಣೆಗೆ ಮುಂದಾಗಿದ್ದಾನೆ. ಈ ವೇಳೆ ಮಹೇಂದ್ರಿ ಅರುಣ್ ನನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾನೆ. ಹಾಗಾಗಿ ಇಬ್ಬರಿಗೂ ಮೇಲೆ ಬರಲು ಸಾಧ್ಯವಾಗದೆ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ನಂತರ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

ಸ್ಥಳಕ್ಕಾಗಮಿಸಿದ ಪೊಲೀಸರು ಅವರನ್ನು ಮೇಲೆತ್ತಿದರೂ ಅಷ್ಟರಲ್ಲಾಗಲೇ ಇಬ್ಬರೂ ಮೃತಪಟ್ಟಿದ್ದರು. ಬಯ್ಯಪ್ಪನ ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್-ಪ್ರಿಯಾಂಕಾ ವಶಕ್ಕೆ ಪಡೆದ ದೆಹಲಿ ಪೊಲೀಸರು: 9 ಗಂಟೆಗಳ ಇಂಡಿಯಾ ಕೂಟದ ಧರಣಿಗೆ ಬ್ರೇಕ್!

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಚು.ಆಯೋಗದ ವಿರುದ್ಧ INDIA ಪ್ರತಿಭಟನೆ; 'ಕೈ' ನಾಯಕರು ಪೊಲೀಸ್ ವಶಕ್ಕೆ: ವ್ಯಾನ್ ನಿಂದ ಇಳಿದು ರಾಹುಲ್ ಜೊತೆ ಮರದ ಕೆಳಗೆ ಕುಳಿತ ಪ್ರಿಯಾಂಕ!

ಕಲಬುರಗಿಯಲ್ಲಿ ಶಾಕಿಂಗ್ ಘಟನೆ: ತೊಗರಿ ಹೊಲದಲ್ಲಿ ತರಬೇತಿ ವಿಮಾನ ತುರ್ತು ಭೂಸ್ಪರ್ಶ!

ಪ್ರಿಯಕರನೊಂದಿಗೆ ಸೇರಿ ಪತಿ ಹತ್ಯೆ: ಚಾಟ್​ನಿಂದ ಕೊಲೆ ರಹಸ್ಯ ಬಯಲು; ಹೃದಯಾಘಾತದ ಕಥೆ ಕಟ್ಟಿದ್ದ ಪತ್ನಿ ಬಂಧನ!