ಅನಂತಪುರ: ಕಾರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ನಾಲ್ವರ ಸಾವನ್ನಪ್ಪಿರುವ ಘಟನೆ ಬುಧವಾರ ನಡೆದಿದೆ.
ಆಂಧ್ರದ ಅನಂತಪುರ ಜಿಲ್ಲೆಯ ರಾಯದುರ್ಗ ತಾಲೂಕಿನ ಹಿರೇಹಾಳ ಬಳಿ ಸಂಭವಿಸಿದ ದುರಂತದಲ್ಲಿ ಬಳ್ಳಾರಿ ಮೂಲದ ಕುಟುಂಬ ಸಾವನ್ನಪ್ಪಿದೆ.
ಕಾರಿನಲ್ಲಿದ್ದ ರವಿಶಂಕರ್(55), ಪತ್ನಿ ಸುಗುಣ(45), ಮಕ್ಕಳಾದ ವೀರೇಶ್ (25), ಸುಮಂತ್ (20) ಮೃತಪಟ್ಟಿದ್ದಾರೆ. ರವಿಶಂಕರ್ ಬಳ್ಳಾರಿ ಖಾಸಗಿ ಕಾಲೇಜಿನ ಪ್ರಾಂಶುಪಾಲರಾಗಿದ್ದರು ಎಂದು ಮೂಲಗಳು ತಿಳಿಸಿವೆ.
ಹಿರೇಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಸಂಬಂಧಿಕರಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.