ಸಾಂದರ್ಭಿಕ ಚಿತ್ರ 
ಜಿಲ್ಲಾ ಸುದ್ದಿ

ರು.126 ಕೋಟಿ ಮೌಲ್ಯದ ಭೂ ಒತ್ತುವರಿ ತೆರವು

ನಗರ ಜಿಲ್ಲಾಡಳಿತವು ಜಿಲ್ಲಾ„ಕಾರಿ ವಿ.ಶಂಕರ್ ಆದೇಶದಂತೆ ರು.126.25 ಕೋಟಿ ಮೊತ್ತದ 43.20 ಎಕರೆ ಭೂ ಒತ್ತುವರಿ ತೆರವುಗೊಳಿಸಿದೆ...

ಬೆಂಗಳೂರು: ನಗರ ಜಿಲ್ಲಾಡಳಿತವು ಜಿಲ್ಲಾಧಿಕಾರಿ ವಿ.ಶಂಕರ್ ಆದೇಶದಂತೆ ರು.126.25 ಕೋಟಿ ಮೊತ್ತದ 43.20 ಎಕರೆ ಭೂ ಒತ್ತುವರಿ ತೆರವುಗೊಳಿಸಿದೆ.

ಉತ್ತರ ತಾಲೂಕು, ಕಸಬಾ ಹೋಬಳಿ, ಕಾಚರಕನಹಳ್ಳಿಯ ಸರ್ವೆ ನಂ.153ರ 14 ಗುಂಟೆ, ಉತ್ತರ ತಾಲೂಕು, ಹೆಸರುಘಟ್ಟ ಹೋಬಳಿ, ಅಮಾನಿ ಮಾರಸಂದ್ರದ ಸ.ನಂ.45ರಲ್ಲಿ ಮಲ್ಲಿಕಾರ್ಜುನ, ಶಿವರುದ್ರಪ್ಪ, ಮೋಹನ್ ಎಂಬವರು ಒತ್ತುವರಿ ಮಾಡಿದ್ದ 30 ಎಕರೆ ಭೂಮಿಯನ್ನು ತಹಸೀಲ್ದಾರ್ ಶಿವಪ್ಪ ಎಚ್.ಲಮಾಣಿ ಹಾಗೂ ಬಾಳಪ್ಪ ಹಂದಿಗುಂದ ಅವರ ತಂಡ ವಶಪಡಿಸಿಕೊಂಡಿತು. ಈ ಭೂಮಿ ರು.75.26 ಕೋಟಿ ಮೌಲ್ಯ ಹೊಂದಿದೆ.

ದಕ್ಷಿಣ ತಾಲೂಕು, ತಾವರೆಕೆರೆ ಹೋಬಳಿ, ಚಿಕ್ಕನಹಳ್ಳಿಯ ಸ.ನಂ.106ರಲ್ಲಿ ರು.1 ಕೋಟಿ ಮೌಲ್ಯದ 1.37 ಎಕರೆ ಒತ್ತುವರಿಯನ್ನು ತಹಸೀಲ್ದಾರ್ ಬಿ.ಆರ್. ದಯಾನಂದ್ ತಂಡ ತೆರವುಗೊಳಿಸಿತು. ಪೂರ್ವತಾಲೂಕು, ಮೇಡಹಳ್ಳಿಯಸ.ನಂ.89ರಲ್ಲಿ20ಗುಂಟೆ, ಹಿರಂಡಹಳ್ಳಿಯ ಸ.ನಂ.26ರಲ್ಲಿ ಜಿ.ಕೃಷ್ಣಪ್ಪ ಎಂಬವರು ಒತ್ತುವರಿ ಮಾಡಿದ್ದ 2.7 ಎಕರೆ, ಖಾಜಿ ಸೊಣ್ಣೇನಹಳ್ಳಿಯ ಸ.ನಂ.122ರಲ್ಲಿ 34 ಗುಂಟೆ, ಹಂಚರಹಳ್ಳಿಯ ಸ.ನಂ.4ರಲ್ಲಿ 34 ಗುಂಟೆ, ವರ್ತೂರು ಹೋಬಳಿ, ಗುಂಜೂರು ಸ.ನಂ.209ರಲ್ಲಿ ಪ್ರೆಸ್ಟೀಜ್ ಸಮೂಹ ಹಾಗೂ ತ್ರಿಶೂಲ್ ಬಿಲ್‍ಟೆಕ್ ಸಂಸ್ಥೆಗಳು ಒತ್ತುವರಿ ಮಾಡಿದ್ದ 34 ಗುಂಟೆ, ರಾಮಗೊಂಡನಹಳ್ಳಿಯ ಸ.ನಂ.105, 106ರಲ್ಲಿ 4 ಎಕರೆ, ವಿಭೂತಿಪುರದ ಸ.ನಂ.175ರಲ್ಲಿ 20 ಗುಂಟೆ, ಹೂಡಿಯ ಸ.ನಂ.30ರಲ್ಲಿ 1.20 ಎಕರೆ ಒತ್ತುವರಿಯನ್ನು ತಹಸೀಲ್ದಾರ್ ಹರೀಶ್ ನಾಯ್ಕ್ ತಂಡ ತೆರವು ಮಾಡಿತು. ಈ ಜಾಗ ರು.50 ಕೋಟಿ ಮೌಲ್ಯ ಹೊಂದಿದೆ. ಅಪರ ಜಿಲ್ಲಾಧಿಕಾರಿ ಆರ್. ವೆಂಕಟಾಚಲಪತಿ, ಉಪವಿಭಾಗಾ„ಕಾರಿಗಳಾದಎಲ್.ಸಿ.ನಾಗರಾಜು, ಮಹೇಶ್ ಬಾಬು ಕಾರ್ಯಾಚರಣೆ ನಡೆಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!