ಕಲಬುರಗಿ: ಕೊಲೆ, ದರೋಡೆ ಸೇರಿದಂತೆ 6 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿ ಮೇಲೆ ಪೊಲೀಸರು ಭಾನುವಾರ ರಾತ್ರಿ ಗುಂಡು ಹಾರಿಸಿ ಬಂಧಿಸಿದ್ದಾರೆ.
ರೇವಣಸಿದ್ದಯ್ಯ ಹಿರೇಮಠ(22) ಬಂಧಿತ ಆರೋಪಿ. ಗುಂಡೇಟಿನಿಂದ ಗಾಯಗೊಂಡಿದ್ದಾನೆ. ಈತನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಈತ ಅಪ್ಪನ ಕೆರೆಯ ಉದ್ಯಾನದ ಬಳಿಯ ಬೈಪಾಸ್ ರಸ್ತೆಯಲ್ಲಿರುವ ಮಾಹಿತಿ ಅರಿತ ನ್ಯೂ ರಾಘವೇಂದ್ರ ಕಾಲೋನಿ ಠಾಣೆ ಪೊಲೀಸರು ಬಂಧನಕ್ಕೆ ಜಾಲ ಬೀಸಿದ್ದರು.
ಆರೋಪಿ ತಪ್ಪಿಸಿಕೊಳ್ಳಲು ಡ್ರ್ಯಾಗರ್ ನಿಂದ ಪೊಲೀಸರ ಮೇಲೆಯೇ ದಾಳಿಗೆ ಯತ್ನಿಸಿದ. ಈ ಹಂತದಲ್ಲಿ ಪೊಲೀಸ್ ಇನ್ಸ್‍ಪೆಕ್ಟರ್ ವಾಹಿದ್ ಕೋತ್ವಾಲ್ ತಮ್ಮ ಬಳಿಯ ಸರ್ವಿಸ್ ರಿವಾಲ್ವರ್ ನಿಂದ ಆತನ ಬಲ ಕಾಲಿಗೆ ಗುಂಡು ಹೊಡೆದಿದ್ದಾರೆ.