ಹೈಕೋರ್ಟ್ 
ಜಿಲ್ಲಾ ಸುದ್ದಿ

ಬಿಬಿಎಂಪಿ ಚುನಾವಣೆ ಮೇ 30 ಗಡುವು

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಪ್ರಕ್ರಿಯೆ ಮೇ 30ರ ಒಳಗಾಗಿ ಪೂರ್ಣ ಗೊಳಿಸುವಂತೆ ಹೈಕೋರ್ಟ್ ಸೋಮವಾರ...

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಪ್ರಕ್ರಿಯೆ  ಮೇ 30ರ ಒಳಗಾಗಿ ಪೂರ್ಣ ಗೊಳಿಸುವಂತೆ ಹೈಕೋರ್ಟ್ ಸೋಮವಾರ ಆದೇಶ ನೀಡಿದೆ. ಪಾಲಿಕೆ ಚುನಾ ವಣೆ ಮುಂದೂಡಲು ಎಲ್ಲಿಲ್ಲದ ಪ್ರಯತ್ನ ನಡೆಸಿದ್ದ ರಾಜ್ಯ ಸರ್ಕಾರದ ಶ್ರಮಕ್ಕೆ ಹೈಕೋರ್ಟ್ ಬ್ರೇಕ್ ಹಾಕಿದಂತಾಗಿದೆ.
ಚುನಾಯಿತ ಜನಪ್ರತಿನಿಧಿಗಳ ಅವಧಿ ಏ.22ರಂದು ಮುಕ್ತಾಯಗೊಳ್ಳಲಿದೆ. ಆದರೆ, ಸರ್ಕಾರ ಈವರೆಗೂ ಚುನಾವಣೆ ಪ್ರಕ್ರಿಯೆ  ಆರಂಭಿಸಿಲ್ಲ ಎಂದು ಪಾಲಿಕೆ ಸದಸ್ಯ ಸಿ.ಕೆ.ರಾಮಮೂರ್ತಿ ಹಾಗೂ ಬಿ.ಸೋಮಶೇಖರ್ ಹೈಕೋರ್ಟ್‍ನಲ್ಲಿತಕರಾರು ಅರ್ಜಿ ದಾಖಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾ.ಬಿ.ವಿ.ನಾಗರತ್ನ ಪೀಠ ಈ ಆದೇಶ ನೀಡಿದೆ. ಪಾಲಿಕೆ ವ್ಯಾಪ್ತಿಯ 198 ವಾರ್ಡ್ ಗಳ ಚುನಾವಣೆ ಪ್ರಕ್ರಿಯೆ  ಆರಂಭಿಸ
ಬೇಕಾದ ಅನಿವಾರ್ಯತೆ ಈಗ ಸರ್ಕಾರ ಮತ್ತು ಬಿಬಿಎಂಪಿಗೆ ಎದುರಾಗಿದೆ. ಅಲ್ಲದೇ ಈ ಆದೇಶವನ್ನು ಪ್ರಶ್ನಿಸಿ ಸರ್ಕಾರ ಮೇಲ್ಮನವಿ ಸಲ್ಲಿಸುವ ಎಲ್ಲಾ ಲಕ್ಷಣಗಳು ಸಹ ಇದೇ ವೇಳೆ ಗೋಚರಿಸುತ್ತಿದೆ. ಪಾಲಿಕೆ ವಿಭಜನೆ ಅಧ್ಯಯನಕ್ಕೆ ನೇಮಕ ಮಾ ಡಿರುವ ತಜ್ಞರ ಸಮಿತಿ 2014ರ ಡಿ.22ರಂದು ವರದಿ ಸಲ್ಲಿಸಬೇಕಿತ್ತು. ಆದರೆ ವರದಿ ಸಲ್ಲಿಸಲು ಸಮಿತಿ 6 ತಿಂಗಳ ಕಾಲಾವಕಾಶ ಕೋರಿದೆ. ಸದ್ಯ ಕ್ಷೇತ್ರ ಮರುವಿಂಗಡಣೆ, ರೊಟೇಷನ್ ಹಾಗೂ ಮೀಸಲು ಪಟ್ಟಿ ತಯಾರಿಸಲು 5 ತಿಂಗಳ ಕಾಲಾವಕಾಶ ಅಗತ್ಯವಿದೆ. 2011ರ ಸಮೀಕ್ಷೆ ಆಧಾರದ ಮೇಲೆ ಕ್ಷೇತ್ರ ಮರು ನಿಗದಿ ಕಾರ್ಯ ಈಗಾಗಲೇ ಆರಂಬಿsಸಲಾಗಿದೆ ಎಂದು ಸರ್ಕಾರ ವಾದ ಮಂಡಿಸಿತ್ತು. ಇದನ್ನು ನಯವಾಗಿ ತಿರಸ್ಕರಿಸಿದ ಪೀಠ, 2011ರ ಸಮೀಕ್ಷೆಯ ಆಧಾರದಲ್ಲಿ ಚುನಾವಣೆ ಪ್ರಕ್ರಿಯೆ  ಮೇ.30ರ ಒಳ ಗಾಗಿ ಪೂರ್ಣಗೊಳಿಸಬೇಕು. ವಾರ್ಡ್ ವ್ಯಾಪ್ತಿ ನಿಗದಿ ಮತ್ತು ಮೀಸಲು ಪಟ್ಟಿ ಏ.13ರ ಒಳಗಾಗಿ ನಿಗದಿಪಡಿಸುವಂತೆ
ಹೈಕೋರ್ಟ್ ಆದೇಶಿಸಿದೆ.

ಸಂವಿಧಾನದ ಪರಿಚ್ಛೇಧ 243(ಯು) ಮತ್ತು ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಚುನಾಯಿತ ಪ್ರತಿನಿಧಿಗಳ ಅಧಿಕಾರವಧಿ ಪೂರ್ಣಗೊಳ್ಳುವ ಮುನ್ನ ಮುಂದಿನ ಅಧಿಕಾರವಧಿಗೆ ಚುನಾ ವಣೆ ನಡೆಸಬೇಕು. ಒಂದು ವೇಳೆ ಚುನಾವಣೆ ನಡೆಸದಿದ್ದರೆ ಸಂವಿಧಾನದ ಉಲ್ಲಂಘನೆಯಾಗಲಿದೆ ಎಂದು ಪೀಠಅಭಿಪ್ರಾಯಪಟ್ಟಿದೆ.


ರಾಜ್ಯ ಚುನಾವಣಾ ಆಯೋಗಕ್ಕೆ ತರಾಟೆ: ಬಿಬಿಎಂಪಿ ಚುನಾವಣೆ ಪ್ರಕ್ರಿಯೆ  ಆರಂಭಿಸುವಂತೆ ಕೋರಿ ಸರ್ಕಾರಕ್ಕೆ ಬರೋಬ್ಬರಿ 15 ಬಾರಿ ಪತ್ರ ಬರೆದಿದ್ದರೂ ಅದರಿಂದ ಈವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ರಾಜ್ಯ ಚುನಾವಣಾ ಆಯೋಗದ ವಾದ ಮಂಡಿ ಸಿತ್ತು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ
ಏಕಸದಸ್ಯ ಪೀಠ, ಚುನಾವಣೆ ಪ್ರಕ್ರಿಯೆ ಮುಂದೂಡಲು ಇದು ಕಾರಣವಲ್ಲ. ನಿಮ್ಮ ಮನವಿಗೆ ಸರ್ಕಾರ ಸ್ಪಂದಿಸಿಲ್ಲ ಎಂದಾದರೆ ಆಯೋಗ ಕೋರ್ಟ್‍ಗೆ
ಮೊರೆ ಬರಬಹುದಿತ್ತು. ಚುನಾವಣೆ ಪ್ರಕ್ರಿಯೆ ಆರಂಭಿಸದೆ ಇರಲು ಆಯೋಗ ನೀಡುತ್ತಿರುವ ಈ ಕಾರಣ ಒಪ್ಪುವಂತದಲ್ಲ. ಕಾಲಕಾಲಕ್ಕೆ ಸರಿಯಾಗಿ ಮತದಾರರ ಪಟ್ಟಿ ಪುನಾರಾವಲೋಕಿಸ ಬೇಕಾಗಿರುವುದು ಆಯೋಗದ ಕರ್ತವ್ಯ ಎಂದು ಪೀಠ ರಾಜ್ಯ ಚುನಾವಣಾ ಆಯೋಗವನ್ನು
ತರಾಟೆಗೆ ತೆಗೆದುಕೊಂಡಿತು.
2020ಕ್ಕೆ ವಿಭಜನೆ ಮಾಡಬಹುದು: ಬಿಬಿಎಂಪಿ ವಿಭಜನೆ ವಿಚಾರಕ್ಕೆ ತಾರ್ತಿಕ ಅಂತ್ಯ ಕಾಣದೆ ಹೋದಲ್ಲಿ 2020ರ ಬಿಬಿಎಂಪಿ ಚುನಾವಣೆ ಸಂದರ್ಭದಲ್ಲಿ
ವಿಭಜನೆ ಮಾಡಬಹುದು ಎಂದು ಇದೇ ವೇಳೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸಲಹೆ ನೀಡಿದೆ. ಬಿಬಿಎಂಪಿ ಹಾಲಿ ಸದಸ್ಯರ ಅಧಿಕಾರವಧಿ ಇನ್ನೇನು
ಪೂರ್ಣಗೊಳ್ಳಲಿದೆ. ಇಷ್ಟರಲ್ಲಾಗಲೇ ರಾಜ್ಯ ಸರ್ಕಾರವು ವಿಭಜನೆ, ಮೀಸಲು ಪಟ್ಟಿ ನಿಗದಿ ಮತ್ತು ಪರಿಷ್ಕೃತ ಮತದಾರರ ಪಟ್ಟಿ ಮಾಡಬೇಕಿತ್ತು. ಈ ವರೆಗೂ
ಸರ್ಕಾರ ಹಾಗೂ ಪಾಲಿಕೆ ಆ ಕಾರ್ಯ ನಡೆಸದೆ ಚುನಾವಣೆ ಪ್ರಕ್ರಿಯೆ  ಮುಂದೂಡುವಂತೆ ಕೋರಿರುವುದು ಸರಿಯಲ್ಲ. ಅತಿ ವಿಶೇಷ ಸಂದರ್ಭದಲ್ಲಿ ಮಾತ್ರ ಚುನಾವಣೆ
ಮುಂದೂಡಬೇಕು ಎಂದು ಸುಪ್ರೀಂಕೋರ್ಟ್ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ. ಸದ್ಯ ಪಾಲಿಕೆ ಚುನಾವಣೆ ಮುಂದೂಡಲು ಸರ್ಕಾರ ನೀಡುತ್ತಿರುವ
ಕಾರಣ ಒಪ್ಪುವಂತದಲ್ಲ ಹಾಗೂ ಚುನಾವಣೆ ಮುಂದೂಡಲು ಯಾವುದೇ ವಿಶೇಷ ಸಂದರ್ಭಗಳು ಕಾಣುತ್ತಿಲ್ಲ ಎಂದು ಪೀಠ ಕಟುವಾಗಿ ಟೀಕಿಸಿದೆ.


ಆದೇಶದಲ್ಲಿ ಏನಿದೆ?
2015ರ ಏ.13ರ ಒಳಗಾಗಿ ರಾಜ್ಯ ಸರ್ಕಾರ ಚುನಾವಣಾ ಮೀಸಲು ಪಟ್ಟಿ ಪ್ರಕಟಿಸಬೇಕು. ಈ ಮೀಸಲು ಪಟ್ಟಿ ಆಧರಿಸಿ ರಾಜ್ಯಚುನಾವಣಾ ಆಯೋಗ
ವೇಳಾಪಟ್ಟಿ ಪ್ರಕಟಿಸಬೇಕು. ಮೇ 30ರ ಒಳಗಾಗಿ ಚುನಾವಣೆಯ ಎಲ್ಲಾ ಪ್ರಕ್ರಿಯೆ  ಪೂರ್ಣಗೊಳಿಸಬೇಕು. ಸರ್ಕಾರ ಮೀಸಲು ಪಟ್ಟಿ ಪ್ರಕಟಿಸದಿದ್ದಲ್ಲಿ , ಹಾಲಿ ಮೀಸಲು
ಪಟ್ಟಿ ಆಧರಿಸಿ ಚುನಾವಣೆ ನಡೆಸಬೇಕು. ಪಾಲಿಕೆಯಲ್ಲಿ ಪ್ರಸ್ತುತ ಅಸ್ತಿತ್ವದಲ್ಲಿರುವ ವಾಡ್ರ್ ಗಳ ವಿಂಗಡಣೆ ಮತ್ತು ಪರಿಷ್ಕೃತ ಮತದಾರರ ಪಟ್ಟಿ ಆಧರಿಸಿಯೇ ಈ ಚುನಾವಣೆ ನಡೆಸಬೇಕು.


ಪಾಲಿಕೆ ಚುನಾವಣೆಗೆ ಸಂಬಂಧಿಸಿದಂತೆ ನಮ್ಮ ವಾದವನ್ನು ಹೈಕೋರ್ಟ್ ಎತ್ತಿ ಹಿಡಿದಿರುವುದ ಸಂತಸ ತಂದಿದೆ. ಇದೇ ವೇಳೆ ಏಕಸದಸ್ಯ ಪೀಠದ ಪ್ರಶ್ನಿಸಿ ಸರ್ಕಾರ ಮೇಲ್ಮನವಿ ಸಲ್ಲಿಸುವ ಸಾಧ್ಯೆತೆಗಳೂ ಸಹ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಕೇವಿಯಟ್ ಅರ್ಜಿ ದಾಖಲಿಸಲು ನಿರ್ಧರಿಸಿದ್ದೇವೆ.
-ಸಿ.ಕೆ.ರಾಮಮೂರ್ತಿ, ಪಾಲಿಕೆ ಸದಸ್ಯ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

ರಿಯಾದ್ ವಿಮಾನ ನಿಲ್ದಾಣದ ಮೇಲೆ ದಾಳಿ: ರಿಯಾದ್ ಗೆ ತೆರಳಬೇಕಿದ್ದ ಭಾರತೀಯ ವಿಮಾನಗಳು ರದ್ದು

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!