ಸಾಂದರ್ಭಿಕ ಚಿತ್ರ 
ಜಿಲ್ಲಾ ಸುದ್ದಿ

೧೪ ವರ್ಷಗಳಲ್ಲೇ ಬೆಂಗಳೂರಿನಲ್ಲಿ ದಾಖಲೆ ಏಪ್ರಿಲ್ ಮಳೆ

ಏಪ್ರಿಲ್ ತಿಂಗಳಲ್ಲಿ ಬೆಂಗಳೂರಿನಲ್ಲಿ ೨೭೩ ಮಿಲಿ ಮೀಟರ್ ಮಳೆ ಸುರಿದಿದೆ. ೧೪ ವರ್ಷಗಳಲ್ಲಿ ಈ ತಿಂಗಳಲ್ಲಿ ಸುರಿದ ಅತಿ ಹೆಚ್ಚಿನ ಮಳೆಯ ಪ್ರಮಾಣ ಇದು

ಬೆಂಗಳೂರು: ಏಪ್ರಿಲ್ ತಿಂಗಳಲ್ಲಿ ಬೆಂಗಳೂರಿನಲ್ಲಿ ೨೭೩ ಮಿಲಿ ಮೀಟರ್ ಮಳೆ ಸುರಿದಿದೆ. ೧೪ ವರ್ಷಗಳಲ್ಲಿ ಈ ತಿಂಗಳಲ್ಲಿ ಸುರಿದ ಅತಿ ಹೆಚ್ಚಿನ ಮಳೆಯ ಪ್ರಮಾಣ ಇದು. ಈ ಹಿಂದೆ ಅತಿ ಹೆಚ್ಚು ಅಂತದೆ ೨೦೦೧ರಲ್ಲಿ ೩೨೯ ಮಿಮೀ ಮಳೆ ಸುರಿದಿತ್ತು. "ಈ ವರ್ಷದ ೨೭೩ ಮಿಮೀ ಮಳೆ ಏಪ್ರಿಲ್ ನ ಹವಾಮಾನ ಮುನ್ಸೂಚನೆಗೆ ವಿರುದ್ಧವಾಗಿದೆ. ಸಾಮಾನ್ಯವಾಗಿ ಈ ತಿಂಗಳಲ್ಲಿ ೪೦ ಮಿಮೀ ಮಳೆಯನ್ನು ನಿರೀಕ್ಷಿಸಲಾಗುತ್ತದೆ. ಸದ್ಯದಲ್ಲೇ ಬರುವ ಮಾನ್ಸೂನ್ ಲಲ್ಲಿ ನಗರದಲ್ಲಿ ಸಾಮಾನ್ಯ ಮಟ್ಟದ ಮಳೆಯಾದಲಿದೆ" ಎಂದು ಭಾರತೀವ ಹವಾಮಾನ ಇಲಾಖೆಯ ಉಸ್ತುವಾರಿ ನಿರ್ದೇಶಕ ಸುಂದರ್ ಮೆಟ್ರಿ ತಿಳಿಸಿದ್ದಾರೆ.

ಈ ತಿಂಗಳಿನಾದ್ಯಂತ ಇದ್ದ ಅತಿ ಹೆಚ್ಚಿನ ಉಷ್ಣಾಂಶ ಅತಿ ಹೆಚ್ಚಿನ ಮಳೆಗೆ ಕಾರಣ ಎಂದಿದ್ದಾರೆ ಅವರು. "ಅತಿ ಹೆಚ್ಚಿನ ಉಷ್ಣಾಂಶದಿಂದ ನೆಲ ಕಾಯ್ದು ವಾತಾವರಣದಲ್ಲಿ ಹೆಚ್ಚಿನ ತೇವಾಂಶ ಉಂಟಾಗುತ್ತದೆ. ಇದು ಮಳೆಗೆ ಕಾರಣವಾಗುತ್ತದೆ" ಎಂದು ಅವರು ತಿಳಿಸಿದ್ದಾರೆ.

ಗುರುವಾರ ಧಾರಾಕಾರವಾಗಿ ಸುರಿದ ಮಳೆಯಿಂದ ನಗರದಾದ್ಯಂತ ಬಿದ್ದ ಅಸಂಖ್ಯಾತ ಮರಗಳು ಮತ್ತು ಕಂಬಗಳ ಕುರಿತು ಪ್ರತಿಕ್ರಿಯಿಸಿದ ಮೆಟ್ರಿ ಹಾನಿಯಾಗಿರುವುದು ಗಾಳಿಯಿಂದ, ಮಳೆಯಿಂದಲ್ಲ ಎಂದಿದ್ದಾರೆ. "ಗುರುವಾರ ಸಂಜೆ ೪ ಘಂಟೆಗೆ ಸುಮಾರು ಅರ್ಧ ನಿಮಿಷದವರೆಗೆ ನಗರದಲ್ಲಿ ಘಂಟೆಗೆ ೭೦ ಕಿಮೀ ವೇಗವಾಗಿ ಚಲಿಸುತ್ತಿದ್ದ ಗಾಳಿ ದಾಖಲಾಗಿದೆ. ಇದು ಭಯಾನಕ ವೇಗ ಹಾಗೂ ಹೆಚ್ಚಿನ ಹಾನಿ ಉಂಟುಮಾಡಬಲ್ಲುದು" ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ಹೈಡ್ರಾಮಾ: EC ಕಚೇರಿ ಮುತ್ತಿಗೆಗೆ ಯತ್ನಿಸಿದ ರಾಹುಲ್, ಪ್ರಿಯಾಂಕಾ ಗಾಂಧಿ ಸೇರಿ INDIA ಒಕ್ಕೂಟದ ಹಲವು ಸಂಸದರು ಪೊಲೀಸ್ ವಶಕ್ಕೆ..!

ಏಷ್ಯನ್‌ ಗೇಮ್ಸ್‌ ವಿಜೇತರಿಗೆ ಸಿಎಂ ಅಭಿನಂದನೆ; ಚಿನ್ನದ ಪದಕ ವಿಜೇತರಿಗೆ 1 ಕೋಟಿ ನಗದು,ಗ್ರೂಪ್-ಬಿ ಹುದ್ದೆಗಳಿಗೆ ನೇರ ನೇಮಕಾತಿ!

'ಮತದಾರರ ಪಟ್ಟಿ ಪರಿಷ್ಕರಣೆ'ಯಲ್ಲಿ ಅಕ್ರಮ ಆರೋಪ; CEC ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ, INDIA ಒಕ್ಕೂಟದಿಂದ ‘ಪ್ರಜಾಪ್ರಭುತ್ವ ಉಳಿಸಿ’ ಪಾದಯಾತ್ರೆ ಆರಂಭ..!

ಶಾಲೆಗಳಲ್ಲಿ ಸಂವಿಧಾನದ ಪ್ರಸ್ತಾವನೆ ಪಠಣೆ: ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್!

9/11 ಮಾದರಿಯಲ್ಲೇ ಇಸ್ರೇಲ್ ಧ್ವಂಸಕ್ಕೆ ಸಂಚು..! ಫ್ಲೈದುಬೈ ಏರ್‌ಲೈನ್ಸ್ ಸೇರಿದ್ದೇ ಆ ಕ್ರೂರ ಉದ್ದೇಶಕ್ಕಾಗಿ; ಸತ್ಯ ಬಾಯಿಬಿಟ್ಟ ಕಿಲ್ಲರ್ ಪೈಲಟ್ ಹಮಾಮ್..!