ಉಪ್ಪಿನಂಗಡಿ: ಅಪ್ರತಿಮ ದೇಶ ಭಕ್ತಿಯ ಧ್ವನಿಗಳನ್ನಾಡುವ ಮೋದಿ ಸರ್ಕಾರ ಪಾಕಿಸ್ತಾನದ ಪ್ರಧಾನಿಯನ್ನೂ ಅದ್ದೂರಿಯಾಗಿ ಸ್ವಾಗಿತಿಸಿ, ಸನ್ಮಾನಿಸಿದ್ದರೂ ಗಡಿಯಲ್ಲಿ ಪಾಕ್ ಪ್ರಚೋದಿತ ಭಯೋತ್ಪಾದನೆ ನಿಲ್ಲುತ್ತಿಲ್ಲ. ದಿನ ನಿತ್ಯ ಭಾರತೀಯ ಸೈನಿಕರ ಹತ್ಯೆಯಾಗುತ್ತಿದೆ. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಗಡಿಯಲ್ಲಿ ಎಷ್ಟು ಭಾರತೀಯ ಸೈನಿಕರ ಹತ್ಯೆಯಾಗುತ್ತಿದೆ. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಗಡಿಯಲ್ಲಿ ಎಷ್ಟು ಮಂದಿ ಭಾರತೀಯ ಸೈನಿಕರ ಹತ್ಯೆಯಾಗಿದೆ ಎಂಬ ಬಗ್ಗೆ ದೇಶದ ಜನತೆಗೆ ಶ್ವೇತ ಪತ್ರದ ಮೂಲಕ ಮಾಹಿತಿ ನೀಡಬೇಕು ಎಂದು ಆರೋಗ್ಯ ಸಚಿವ ಯು.ಟಿಖಾದರ್ ಆಗ್ರಹಿಸಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಆಡಳಿತವಿದ್ದಾಗ ಕಂಡ ಕಂಡದ್ದಕ್ಕೆಲ್ಲಾ ಟೀಕಿಸುತ್ತಿದ್ದ ಬಿಜೆಪಿ ಇಂದು ಅಧಿಕಾರದ ಆಸೆಗಾಗಿ ದೇಶ ವಿರೋಧಿಗಳೊಂದಿಗೆ ಕೈ ಜೋಡಿಸಿದೆ. ಮುಫ್ತಿ ಮೊಹ್ಮದ್ ಸಯೀದ್ ಜೊತೆಗೂಡಿ ಕಾಶ್ಮೀರದಲ್ಲಿ ನಡೆಯುವ ದೇಶ ವಿರೋಧಿ ಕೃತ್ಯಗಳನ್ನು ಸಹಿಸಿಕೊಂಡಿದೆ. ದೇಶ ವಿರೋಧಿ ಹೇಳಿಕೆ ನೀಡಿ ಪಾಕಿಸ್ತಾನದ ಬಾವುಟ ಪ್ರದರ್ಶಿಸಿದರೂ ಮೌನವಾಗಿದೆ ಎಂದರು.