ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ರೈಲು ವೇಳಾಪಟ್ಟಿ ಬದಲು

ಬೆಂಗಳೂರಿನಿಂದ ಹೊರಡುವ ಹಾಗೂ ಬರುವ ರೈಲುಗಳ ವೇಳಾಪಟ್ಟಿಯಲ್ಲಿ ಬದಲಾವಣೆಯಾಗಿದೆ...

ಸಾಂದರ್ಭಿಕ ಚಿತ್ರ
Rashmi Kasaragodu
Updated On : 7 May 2015, 1:43 am

ಬೆಂಗಳೂರು: ಬೆಂಗಳೂರಿನಿಂದ ಹೊರಡುವ ಹಾಗೂ ಬರುವ ರೈಲುಗಳ ವೇಳಾಪಟ್ಟಿಯಲ್ಲಿ ಬದಲಾವಣೆಯಾಗಿದೆ.

16528 ಸಂಖ್ಯೆಯ ಕಣ್ಣೂರು- ಯಶವಂತಪುರ ಎಕ್ಸ್ ಪ್ರೆಸ್ ಯಶವಂತಪುರ ನಿಲ್ದಾಣಕ್ಕೆ ಬೆಳಗ್ಗೆ 7.40ರ ಬದಲಾಗಿ 8 ಗಂಟೆಗೆ ತಲುಪಲಿದೆ. ಮೇ. 10 ರಿಂದ ಜಾರಿಗೆ ಬರಲಿದೆ. 16574 ಸಂಖ್ಯೆಯ ಪುದುಚೇರಿ-ಯಶವಂತಪುರ ಎಕ್ಸ್ ಪ್ರೆಸ್ ವು ಯಶವಂತರಪುರ ನಿಲ್ದಾಣಕ್ಕೆ ಬೆಳಗ್ಗೆ 8 ರ ಬದಲಾಗಿ 8.20ಕ್ಕೆ ಆಗಮಿಸಲಿದ್ದು, ಮೇ 11 ರಿಂದ ಅನ್ವಯವಾಗಲಿದೆ. 16231 ಸಂಖ್ಯೆಯ ಮೈಲಾಡುತುರೈ - ಮೈಸೂರು ಎಕ್ಸ್ ಪ್ರೆಸ್ ಮೈಸೂರಿಗೆ ಬೆಳಿಗ್ಗೆ 8.50ರ ಬದಲಾಗಿ 9 ಗಂಟೆಗೆ ತಲುಪಲಿದೆ. ಮೇ 10 ರಿಂದ ಅನ್ವಯವಾಗಲಿದೆ.

16235 ಸಂಖ್ಯೆಯ ತುತುಕೂಡಿ - ಮೈಸೂರು ಎಕ್ಸ್ ಪ್ರೆಸ್ ರೈಲು 10 ಗಂಟೆ ಬದಲು 10.10 ಕ್ಕೆ ಆಗಮಿಸಲಿದ್ದು, ಮೇ 10 ರಿಂದ ಅನ್ವಯವಾಗಲಿದೆ. ಅದೇ ರೀತಿ ಜುಲೈ 1 ರಿಂದ ಅನ್ವಯವಾಗುವಂತೆ ಕೆಲವು ಕಡೆ ರೈಲು ಹೊರಡುವ ಸಮಯದಲ್ಲೂ ವ್ಯತ್ಯಾಸವಾಗಿದೆ. ರಾತ್ರಿ 10 ಗಂಟೆಗೆ ಹೊರಡುತ್ತಿದ್ದ 11021 ಸಂಖ್ಯೆಯ ದಾದರ್-ತಿರುನೆಲ್ ವೆಲಿ ಎಕ್ಸ್ ಪ್ರೆಸ್ ರೈಲು ಯಶವಂತಪುರದಿಂದ 9.50ಕ್ಕೆ ಹೊರಡಲಿದೆ. 12648 ಸಂಖ್ಯೆಯ ಎಚ್. ನಿಜಾ ಮುದ್ದೀನ್ - ಕೊಯಮತ್ತೂರ್ ಕೊಂಗು ಎಕ್ಸ್ ಪ್ರೆಸ್ ರೈಲು ಯಶವಂತಪುರದಿಂದ ಮಧ್ಯಾಹ್ನ 1.20 ರ ಬದಲಾಗಿ 1 ಗಂಟೆಗೆ ಹೊರಡಲಿದೆ.

11013 ಸಂಖ್ಯೆಯ ಲೋಕಮಾನ್ಯ ತಿಲಕ್ - ಕೊಯಮತ್ತೂರ್ ಎಕ್ಸ್ ಪ್ರೆಸ್ ಬೆಂಗಳೂರು ಸಿಟಿ ರೈಲ್ವೆ ನಿಲ್ದಾಣದಿಂದ ರಾತ್ರಿ 10.15 ರ ಬದಲಾಗಿ 10.10 ಕ್ಕೆ ಹೊರಡಲಿದೆ. 16232 ಮೈಸೂರು-ಮೈಲಾಡು ತುರೈ ಎಕ್ಸ್ ಪ್ರೆಸ್ ಬೆಂಗಳೂರು ಸಿಟಿಯಿಂದ ರಾತ್ರಿ 7.05 ರ ಬದಲಾಗಿ 7 ಗಂಟೆಗೆ ಹೊರಡಲಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement