ಮಂಗಳೂರು: ಕ್ರೈಸ್ತ ಸಮುದಾಯದ ಯುವಕನನ್ನು ಮದುವೆಯಾದ ಬಳಿಕ ಕ್ರೈಸ್ತ ಧರ್ಮವನ್ನು ಪಾಲಿಸುತ್ತಿದ್ದ ಕುಟುಂಬವೊಂದು ಮತ್ತೆ ಹಿಂದೂ ಧರ್ಮಕ್ಕೆ ಮರು ಮತಾಂತರಗೊಂಡಿದೆ.
ಮಂಗಳೂರು ನಗರದ ಉಳ್ಳಾಲದ ಮೂಲದ ಸರಸ್ವತಿ ಎಂಬುವರು ಕ್ರೈಸ್ತ ಸಮುದಾಯದ ರಾಜು ಎಂಬುವರನ್ನು ಪ್ರೇಮ ವಿವಾಹವಾಗಿದ್ದರು. ಮುಂದೆ ಕ್ರೈಸ್ತ ಧರ್ಮವನ್ನು ಪಾಲಿಸುತ್ತಾ, ಎಲ್ಯಾರ್ ನಲ್ಲಿರುವ ಚರ್ಚ್ ನಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ ಕ್ರೈಸ್ತ ಧರ್ಮದ ಸಂಪ್ರದಾಯಗಳನ್ನು ಪಾಲಿಸುತ್ತಿದ್ದರು.
ಸರಸ್ವತಿ ಅವರ ಪತಿ ರಾಜು ಅವರು 9 ವರ್ಷಗಳ ಹಿಂದೆ ಮೃತಪಟ್ಟಿದ್ದರು. ಆ ಬಳಿಕ ಸರಸ್ವತಿ ಮತ್ತು ನಾಲ್ವರು ಮಕ್ಕಳು ಸಾಯಿ ಮಂದಿರಕ್ಕೆ ಹೋಗಲು ಆರಂಭಿಸಿದ್ದು, ಬಹುತೇಕ ಹಿಂದೂ ಕಾರ್ಯಕ್ರಮಗಳಲ್ಲಿ ಕುಟುಂಬ ಭಾಗಿಯಾಗುತ್ತಿತ್ತು. ಹೀಗೆ ಹಿಂದೂ ಧರ್ಮವನ್ನು ಪಾಲಿಸುತ್ತಿದ್ದ ಅವರು ಹಿಂದೂ ಧರ್ಮಕ್ಕೆ ಮತಾಂತರಗೊಳ್ಳಲು ಇಚ್ಛಿಸಿದ್ದರು.
ಹೀಗಾಗಿ ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸರಸ್ವತಿ ಕುಟುಂಬ ಹಿಂದೂ ಧರ್ಮದ ಸಾಂಪ್ರದಾಯಿಕ ಹೋಮ-ಹವನ ಮಾಡುವ ಮೂಲಕ ಅಧಿಕೃತವಾಗಿ ಹಿಂದೂ ಧರ್ಮಕ್ಕೆ ಮರು ಮತಾಂತರಗೊಂಡಿದ್ದಾರೆ.