ಇಟ್ಟಮಡು ಕೆರೆ ಜಾಗದಲ್ಲಿ ಮನೆ ಕಳೆದುಕೊಳ್ಳುವ ಭೀತಿಯಲ್ಲಿರುವ ನಿವಾಸಿಗಳ ಅಹವಾಲುಗಳನ್ನು ಹೆಚ್.ಡಿ.ಕುಮಾರಸ್ವಾಮಿ ಸ್ವೀಕರಿಸಿದರು. 
ಜಿಲ್ಲಾ ಸುದ್ದಿ

ನಮ್ಮ ಮನೆಗಳನ್ನು ಉಳಿಸಿ ಕೊಡಿ: ಹೆಚ್.ಡಿ.ಕೆ ಗೆ ಸಂತ್ರಸ್ತರ ಮನವಿ

ನಮ್ಮ ಮನೆ ಉಳಿಸಿಕೊಡಿ, ಸರ್ಕಾರಕ್ಕೆ ಎಷ್ಟು ಬಾರಿ ಮನವಿ ಮಾಡಿದರೂ ಮನೆ ಒಡೆಯಲು ಮುಂದಾಗಿದ್ದಾರೆ. ನೀವಾದರೂ ಮುಖ್ಯಮಂತ್ರಿಗೆ ಹೇಳಿ...

ಬೆಂಗಳೂರು: ನಮ್ಮ ಮನೆ ಉಳಿಸಿಕೊಡಿ,  ಸರ್ಕಾರಕ್ಕೆ ಎಷ್ಟು ಬಾರಿ ಮನವಿ ಮಾಡಿದರೂ ಮನೆ ಒಡೆಯಲು ಮುಂದಾಗಿದ್ದಾರೆ. ನೀವಾದರೂ ಮುಖ್ಯಮಂತ್ರಿಗೆ ಹೇಳಿ...'

ಬಾಣಸವಾಡಿಯ ಸ.ನಂ.211ರಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆದ ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿದ ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಗೆ ಸ್ಥಳೀಯರು ಮಾಡಿಕೊಂಡ ಮನವಿಯಿದು.

ನನ್ನ ಗಂಡ ಮಾಡಿ ಸೈನಿಕಾರಾಗಿದ್ದು, 29 ವರ್ಷಗಳ ಹಿಂದೆ ನಿವೇಶನ ಖರೀದಿಸಿ, ಸಾಲ ಮಾಡಿ ಮನೆ ನಿರ್ಮಿಸಲಾಗಿತ್ತು. ಹಲವು ವರ್ಷಗಳಿಂದ ಸರ್ಕಾರಕ್ಕೆ ಮನವಿ ಮಾಡಿದ್ದರೂ ಮನೆ ತೆರವು ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ. ಯಾವುದೇ ಆಶ್ರಯವಿಲ್ಲದೆ ಬೀದಿಗೆ ಬೀಳುತ್ತಿದ್ದು, ತೆರವು ಮಾಡದಂತೆ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಮನೆಯನ್ನು ಸಕ್ರಮ ಮಾಡಲು ಅವಕಾಶವಿದ್ದಿದ್ದರಿಂದ ಅಗತ್ಯ ಶುಲ್ಕವನ್ನೂ ಪಾವತಿಸುತ್ತೇವೆ ಎಂದು ನಿವಾಸಿ ವಿಮಲ ಸ್ಯಾಮ್ಸನ್ ಮನವಿ ಮಾಡಿದರು.

ನಿವಾಸಿಗಳನ್ನು ಸಂತೈಸಿದ ಕುಮಾರಸ್ವಾಮಿ, ಎಲ್ಲ ದಾಖಲೆಗಳ ಪ್ರತಿಯನ್ನು ನಿವಾಸಿಗಳಿಂದ ಸಂಗ್ರಹಿಸಿ ಸರ್ಕಾರಕ್ಕೆ ನೀಡಲಾಗುವುದು. ಸಂಗ್ರಹಸಿ ಸರ್ಕಾರಕ್ಕೆ ನೀಡಲಾಗುವುದು. ಸರ್ಕಾರ ನೈಜ ತಪ್ಪಿತಸ್ಥರನ್ನು ಕಂಡುಹಿಡಿದು ಶಿಕ್ಷಿಸಲು ಒತ್ತಡ ಹೇರಲಾಗುವುದು ಎಂದರು.

ಸಾರಕ್ಕಿಯಲ್ಲಿ ಗೋಳು
ನಂತರ ಸಾರಕ್ಕಿ, ಪುಟ್ಟೇನಹಳ್ಳಿ ಹಾಗೂ ಜರಗನಹಳ್ಳಿಯ ಕೆಲವು ಮನೆಗಳಿಗೂ ಕುಮಾರಸ್ವಾಮಿ ಭೇಟಿ ನೀಡಿದಾಗ ನಿವಾಸಿಗಳು ತಮ್ಮ ಅಳಲು ತೋಡಿಕೊಂಡರು. ಸಾರಕ್ಕಿಯಲ್ಲಿ ಬೃಹತ್ ಪ್ರಮಾಣದ ಒತ್ತುವರಿ ತೆರವು ಕಾರ್ಯಾಚರಣೆ ನಡೆದಿದ್ದು, ವಾಣಿಜ್ಯ ಕಟ್ಟಡಗಳಿಗಿಂತಲೂ ಹೆಚ್ಚು ಮನೆಗಳನ್ನು ಒಡೆಯಲಾಗಿದೆ. ಕೆಲವು ಮನೆಗಳಲ್ಲಿ 4-5 ಅಡಿ ಜಾಗವನ್ನು ತೆರವುಗೊಳಿಸಿದ್ದನ್ನು ಪರಿಶೀಲಿಸಿದ ಕುಮಾರಸ್ವಾಮಿ, ಮನೆ ಕಳೆದುಕೊಂಡವರಿಗೆ ಪರಿಹಾರ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದು ಭರವಸೆ ನೀಡಿದರು. ನಂತರ ಇಟ್ಟಮಡುವಿಗೆ ತೆರಳಿ, ಅಲ್ಲಿಯ ನಿವಾಸಿಗಳಿಂದ ಅಹವಾಲು ಸ್ವೀಕರಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

FlyDubai ವಿಮಾನ ಹೈಜಾಕ್ ಯತ್ನದ ಹಿಂದೆ ಇರಾನ್ ಕೈವಾಡ: ಇದು ನನ್ನ ವೈಯಕ್ತಿಕ ನಂಬಿಕೆ; ಡೊನಾಲ್ಡ್ ಟ್ರಂಪ್

ಕಾಕ್‌ಪಿಟ್ ದಾಳಿ ಬಳಿಕ 150ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಫ್ಲೈದುಬೈ ವಿಮಾನವನ್ನು ಹೊಡೆದುರುಳಿಸಲು ಇಸ್ರೇಲ್ ಸಿದ್ಧವಾಗಿತ್ತು: ವರದಿ

ಸೌದಿ ಮಿಲಿಟರಿ ಕಾರ್ಯಾಚರಣೆಗೆ ಹೌತಿ ಬಂಡುಕೋರರ ತಿರುಗೇಟು: ರಿಯಾದ್ ವಿಮಾನ ನಿಲ್ದಾಣ, ಅರಾಮ್ಕೊ ಸಂಸ್ಕರಣಾಗಾರ ಗುರಿಯಾಗಿಸಿಕೊಂಡು ದಾಳಿ!

ರಾಜ್ಯದಲ್ಲಿ ಮಳೆ ಮತ್ತೆ ಚುರುಕು: ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಮುಂದಿನ 7 ದಿನಗಳ ಕಾಲ ಮಳೆ ಸಾಧ್ಯತೆ..!

ಬೆಂಗಳೂರಿನಲ್ಲಿ ವರುಣ ಆರ್ಭಟ: 17.3 ಮಿ.ಮೀ. ಮಳೆಗೆ ಬೆಂಗಳೂರು ತತ್ತರ; ಹಲವೆಡೆ ಜಲಾವೃತ, ಮರಗಳು ಧರೆಗೆ..!