ಹೊಸಕೋಟೆ: ರಾಷ್ಟೀಯ ಹೆದ್ದಾರಿ 4 ರಲ್ಲಿ ನಿಂತಿದ್ದ ಲಾರಿಗೆ ಟಾಟಾ ಸುಮೋ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ನಾಲ್ವರು ಸ್ಧಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾರೆ.
ಆಂಧ್ರದ ಚಿತ್ತೂರಿನಿಂದ ಬೆಂಗಳೂರಿಗೆ ಬರುತ್ತಿದ್ದ ಟಾಟಾ ಸುಮೋ, ಕೋಲಾರ-ಹೊಸಕೋಟೆ ರಾಷ್ಟ್ರೀಯ ಹೆದ್ದಾರಿಯ ಯಲಚನಹಳ್ಳಿಯ ವೋಲ್ವೋ ಮುಖ್ಯಗೇಟ್ ಬಳಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸುಮೋ ನಜ್ಜು ಗುಜ್ಜಾಗಿದ್ದು, ಕಾರಿನಲ್ಲಿದ್ದ ಪ್ರವೀಣ್ ಕುಮಾರ್(12), ಸರಸ್ವತಿ, ಮೋಹಿತಾ(12) ಶಿಕ್ಷಿತಾ(5) ಮೃತಪಟ್ಟ ದುರ್ದೈವಿಗಳು.
ಅಪಘಾತದಲ್ಲಿ ವೆಂಕಟೇಶಂ ಶೆಟ್ಟಿ, ವಿದ್ಯಾ ಮತ್ತು ಸೌಂದರ್ಯ ಎಂಬುವರು ತೀವ್ರ ಗಾಯಗೊಂಡಿದ್ದು, ಗಾಯಾಳುಗಳನ್ನು ಹೊಸಕೋಟೆಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.