ಪ್ರತಾಪ್ ಸಿಂಹ 
ಜಿಲ್ಲಾ ಸುದ್ದಿ

ಪ್ರತಾಪ್ ಸಿಂಹ ವಿರುದ್ಧ ಜೀವ ಬೆದರಿಕೆ ಕೇಸ್, ತನಿಖೆ ಆರಂಭಿಸಿದ ಪೊಲೀಸರು

ಪತ್ರಕರ್ತನಿಗೆ ಜೀವ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ್ ಅವರ ವಿರುದ್ಧ ಕದ್ರಿ ಪೊಲೀಸರು...

ಮಂಗಳೂರು: ಪತ್ರಕರ್ತನಿಗೆ ಜೀವ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ್ ಅವರ ವಿರುದ್ಧ ಕದ್ರಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ಗುರುವಾರದಿಂದ ತನಿಖೆ ಆರಂಭಿಸಿದ್ದಾರೆ.

ಸಬ್ ಇನ್ಸ್‌ಪೆಕ್ಟರ್ ರಫೀಕ್ ನೇತೃತ್ವದಲ್ಲಿ ಪ್ರಕರಣದ ತನಿಖೆ ಕೈಗೊಂಡಿರುವ ಕದ್ರಿ ಪೊಲೀಸರು, ಪ್ರಾಥಮಿಕ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಈ ಮಧ್ಯೆ, ಪ್ರತಾಪ್ ಸಿಂಹ ಅವರು ತಮ್ಮ ವಿರುದ್ಧ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದು, ನಾನು ಯಾವ ಪತ್ರಕರ್ತರಿಗೂ ಜೀವ ಬೆದರಿಕೆ ಹಾಕಿಲ್ಲ. ಇದು ಪ್ರಚಾರಕ್ಕಾಗಿ ಮಾಡಿರುವ ಆರೋಪ ಎಂದಿದ್ದರು.

ಬಾಲಿವುಡ್ ಸಲ್ಮಾನ್‌ ಖಾನ್‌ ಅವರಿಗೆ ಸಂಬಂಧಿಸಿದಂತೆ ಪ್ರತಾಪ್‌ ಸಿಂಹ ಫೇಸ್‌ಬುಕ್‌ ಖಾತೆಯಲ್ಲಿ ವ್ಯಕ್ತಿಪಡಿಸಿದ್ದ ಅಭಿಪ್ರಾಯ ಆಧರಿಸಿ ನಾನು ವರದಿ ಮಾಡಿದ್ದೆ. ಈ ಕುರಿತು ದೂರವಾಣಿ ಕರೆಮಾಡಿದ ಪ್ರತಾಪ್ ಸಿಂಹ ಅವರು, ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಕಾರ್ಯಕರ್ತರನ್ನು ಕಳುಹಿಸಿ ಕೈ ಕಾಲು ಕಡಿದು ಹಾಕಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಪತ್ರಕರ್ತ ಶ್ರೇಯಸ್‌ ಎಚ್.ಎಸ್ ಅವರು ಪೊಲೀಸರಿಗೆ ದೂರು ನೀಡಿದ್ದರು.

ದೂರಿನ ಕುರಿತು ಎರಡನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದ ಪೊಲೀಸರು, ಸಂಸದರ ವಿರುದ್ಧ ಎಫ್‌ಐಆರ್‌ ದಾಖಲಿಸಲು ನ್ಯಾಯಾಧೀಶರಿಂದ ಅನುಮತಿ ಪಡೆದು, ಬಳಿಕ ಭಾರತೀಯ ದಂಡ ಸಂಹಿತೆ ಸೆಕ್ಷನ್‌ 504 (ಅವಾಚ್ಯ ಶಬ್ದಗಳಿಂದ ನಿಂದನೆ) ಮತ್ತು ಸೆಕ್ಷನ್‌ 507ರ (ಜೀವ ಬೆದರಿಕೆ) ಅಡಿಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಲೋಕಸಭೆಯಲ್ಲಿ ಡಿಸೆಂಬರ್ 9 ರಂದು SIR ಕುರಿತು ಚರ್ಚೆ; ಚರ್ಚೆಗೆ 10 ಗಂಟೆ ಸಮಯ ನಿಗದಿ

BBK12: ದೊಡ್ಮನೆಯಲ್ಲಿ ಸ್ಪಂದನ 18+ ಮಾತು; ತಲೆ ಬಗ್ಗಿಸಿದ ಧನುಷ್, ರೂಂನಿಂದ ಹೊರಗೆ ಹೋದ ಗಿಲ್ಲಿ ನಟ, Video Viral!

ಒಂದೇ ಕಂಪನಿಯ ವಾಚ್ ಕಟ್ಟಿ CM, DCM ಒಗ್ಗಟ್ಟು ಪ್ರದರ್ಶನ? Cartier ವಾಚಿನ ಬೆಲೆ ಎಷ್ಟು ಗೊತ್ತಾ?

Medical emergency: ಕೇರಳದತ್ತ ಪ್ರಯಾಣಿಸುತ್ತಿದ್ದ ವಿಮಾನ ಮಂಗಳೂರಿನಲ್ಲಿ ತುರ್ತು ಭೂಸ್ಪರ್ಶ!

ದಿತ್ವಾ ಚಂಡಮಾರುತ ಎಫೆಕ್ಟ್; ಚೆನ್ನೈನಲ್ಲಿ ಬುಧವಾರವೂ ಶಾಲಾ-ಕಾಲೇಜುಗಳಿಗೆ ರಜೆ

SCROLL FOR NEXT