ಜಿಲ್ಲಾ ಸುದ್ದಿ

ಗೂಂಡಾ ಕಾಯ್ದೆಯಡಿ ರೌಡಿ ಭರತ ಬಂಧನ

ಬೆಂಗಳೂರು: ಕೊಲೆ, ಸುಲಿಗೆ, ಸೇರಿದಂತೆ ಹತ್ತಾರು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡುತ್ತಿದ್ದ ಕುಖ್ಯಾತ ರೌಡಿ ಭರತ ಅಲಿಯಾಸ್ ಭರತ್ ಕುಮಾರನನ್ನು (24) ಗೂಂಡಾ ಕಾಯ್ದೆ ಅನ್ವಯ ಬಂಧಿಸಲಾಗಿದೆ.

ರಾಜಗೋಪಾಲನಗರದ ಬನ್ನಪ್ಪನಕಟ್ಟೆ 1ನೇ ಕ್ರಾಸ್ ನಿವಾಸಿಯಾದ ಭರತನ ವಿರುದ್ಧ 2008ರಲ್ಲಿ ರೌಡಿ ಪಟ್ಟಿ ತೆಗೆಯಲಾಗಿದೆ. ವಿವಿಧ ಠಾಣೆಗಳಲ್ಲಿ ಈತನ ವಿರುದ್ಧ 2 ಕೊಲೆ, 5 ಕೊಲೆ ಯತ್ನ, 3 ಡಕಾಯಿತಿ, 1 ಸುಲಿಗೆ, 1 ಅಪಹರಣ, 4 ದರೋಡೆ, 1 ದೊಂಬಿ ಪ್ರಕರಣಗಳು ದಾಖಲಾಗಿವೆ. 10ನೇ ತರಗತಿ ವ್ಯಾಸಂಗ ಮಾಡಿದ್ದ ಭರತ, ತನ್ನ 18ನೇ ವಯಸ್ಸಿನಿಂದಲೂ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದಾನೆ.

ಮೊದ ಮೊದಲು ರೌಡಿ ಸುರೇಶ ಅಲಿಯಾಸ್ ಕುರುಡ ಸೂರಿ ಗ್ಯಾಂಗ್ ಜತೆ ಸೇರಿ ಕುಕೃತ್ಯಗಳನ್ನು ನಡೆಸುತ್ತಿದ್ದ. ಬಳಿಕ ತನ್ನದೇ ತಂಡ ಕಟ್ಟಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಹಲವು ಬಾರಿ ಜೈಲಿಗೆ ಹೋಗಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಮತ್ತೆ ಸಮಾಜಘಾತುಕ ಕೃತ್ಯಗಳಲ್ಲಿ ತೊಡಗಿದ್ದ. ಈತನ ಚಟುವಟಿಕೆಗಳ ಮೇಲೆ ನಿಯಂತ್ರಣ ಹೇರಲು ರಾಜಗೋಪಾಲನಗರ ಠಾಣೆ ಇನ್ಸ್ ಪೆಕ್ಟರ್ ನೀಡಿದ ವರದಿ ಆಧರಿಸಿ ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಗೂಂಡಾ ಕಾಯ್ದೆಯಡಿ ಬಂಧನಕ್ಕೆ ಆದೇಶಿಸಿದ್ದರು.

SCROLL FOR NEXT