ಬೆಂಗಳೂರು: ಮೂರು ವರ್ಷದ ಬಾಲಕಿ ಮೇಲೆ ಯುವಕನೊಬ್ಬ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಭಾನುವಾರ ಕಾಡುಗೋಡಿಯಲ್ಲಿ ನಡೆದಿದೆ.
ನೆರೆಮನೆಯ ಸಂದೀಪ್ (28) ಎಂಬಾತನೇ ಈ ಕೃತ್ಯ ಎಸಗಿದ್ದಾನೆಂದು ದೂರು ನೀಡಲಾಗಿದೆ. ಉತ್ತರ ಪ್ರದೇಶದ ಮೂಲದ ಸಂದೀಪ್, ಕೆಲಸ ಹುಡುಕಿಕೊಂಡು ತಿಂಗಳ ಹಿಂದೆ ನಗರಕ್ಕೆ ಬಂದಿದ್ದ. ಪೇಂಟರ್ ಆಗಿದ್ದ ಆತ, ಕಾಡುಗೋಡಿ ಸಮೀಪದ ದಿಣ್ಣೂರಿನಲ್ಲಿ ವಾಸವಾಗಿದ್ದ. ಭಾನುವಾರ ಸಂಜೆ 7 ಗಂಟೆ ಸುಮಾರಿಗೆ ಬಾಲಕಿ ತಮ್ಮ ಮನೆ ಎದುರು ಆಟವಾಡುತ್ತಿದ್ದಳು. ಚಾಕೊಲೇಟ್ ಕೊಡಿಸುವುದಾಗಿ ಬಾಲಕಿಯನ್ನು ಮನೆ ಸಮೀಪದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆಗ್ನೇಯ ವಿಭಾಗದ ಡಿಸಿಪಿ ರೋಹಿಣಿ ಕಟೋಚ್ ಸೆಪಟ್ ತಿಳಿಸಿದ್ದಾರೆ.
ಪೊಷಕರ ಜತೆ ಹುಡುಕಾಡಿದ ಆರೋಪಿ: ಕತ್ತಲಾದರೂ ಮಗಳು ಮನೆಗೆ ಬಾರದಿದ್ದರಿಂದ ಆತಂಕಗೊಂಡ ಪೋಷಕರು, ಆಕೆಗಾಗಿ ಹುಡುಕಾಟ ಆರಂಭಿಸಿದ್ದಾರೆ. ಈ ವೇಳೆ ಸಂದೀಪ್ ಕೂಡ ಅವರೊಂದಿಗೆ ಹುಡುಕಿದ್ದಾನೆ. ಬಾಲಕಿ ಸಿಗದಿದ್ದಾಗ ಹುಡುಕಾಟ ನಿಲ್ಲಿಸಿದ್ದರು. ನಂತರ ಮನೆ ಸಮೀಪದ ಮರವೊಂದರ ಕೆಳಗೆ ಬಾಲಕಿ ಅರೆಪ್ರಜ್ಞಾವಸ್ಥೆಯಲ್ಲಿ ಮಾರನೇ ದಿನ ಬೆಳಗ್ಗೆ ಪತ್ತೆಯಾದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.
ಬಾಲಕಿ ಸಿಗುವ ವೇಳೆಗೆ ಸಂದೀಪ್ ನಾಪತ್ತೆಯಾಗಿದ್ದ. ಇದರಿಂದ ಆತನ ಮೇಲೆ ಅನುಮಾನ ಬಂದಿದ್ದರಿಂದ ಬಾಲಕಿಯ ಪೋಷಕರು,ಕಾಡುಗೋಡಿ ಠಾಣೆಗೆ ದೂರು ನೀಡಿದ್ದಾರೆ. ಬಾಲಕಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ, ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ವೈದ್ಯರು ದೃಢಪಡಿಸಿದ್ದಾರೆ. ತಲೆ ಮರೆಸಿಕೊಂಡಿರುವ ಆರೋಪಿಯ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಘಟನೆಗೆ ಸಂಬಂ„ಸಿದಂತೆ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಯಡಿ (ಪೋಕ್ಸೊ) ಕಾಡುಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.