ಜಿಲ್ಲಾ ಸುದ್ದಿ

ಗಣಿ ಅಕ್ರಮ ವರದಿ ಮರು ಪರಿಶೀಲಿಸುತ್ತಾರಂತೆ!

Mainashree

ಬೆಂಗಳೂರು: `ರಾಜ್ಯದಲ್ಲಿ ನಡೆದಿರುವ ಕೋಟ್ಯಾಂತರ ರುಪಾಯಿ ಗಣಿ ಹಗರಣದ ಬಗ್ಗೆ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಸಮಗ್ರ ವರದಿ ನೀಡಿದರೆ ಅದನ್ನು ಪೊಲೀಸ್ ಅಧಿಕಾರಿಯಿಂದ ಮರು ಪರಿಶೀಲಿಸುತ್ತಾರಂತೆ... ಎಂತಾ ಗೌರವ ಇದು...' ಹೀಗೆಂದು ಭಾವುಕರಾಗಿ ಹೇಳಿದ್ದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ.

ಕರ್ನಾಟಕ ವೃತ್ತಿ ನಿರತ ಪತ್ರಕರ್ತರ ಸಂಘ ಎನ್‍ಜಿಒ ಸಭಾಂಗಣದಲ್ಲಿ ಸ್ಮರಣ ಸಂಚಿಕೆ ಬಿಡುಗಡೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿ, ಮೂವರು ಮುಖ್ಯಮಂತ್ರಿಗಳು, 9 ಮಂತ್ರಿಗಳು, ನೂರಾರು ಅಧಿಕಾರಿಗಳು, ಗಣಿ ಕಂಪನಿಗಳ ಕುರಿತ ಈ ವರದಿಯಲ್ಲಿ ಮಾಹಿತಿ ಇದೆ. ನಾಲ್ಕು ಲಕ್ಷ ಬ್ಯಾಂಕ್ ಖಾತೆ ಪರಿಶೀಲಿಸಿ ವರದಿ ನೀಡಿದ್ದೇವೆ.

ಈಗ ಅದನ್ನು ಮರು ಮಾಡುತ್ತಾರಂತೆ ಎಂದು ಬೇಸರಿಸಿದರು. ಇದನ್ನು ಬದಲಿಸಲು ವಿಧೇಯಕ ತರಲು ಹೊರಟಿದ್ದಾರೆ. ಕೇವಲ ಭ್ರಷ್ಚಚಾರ ನಿಗ್ರಹಿಸುವ ಗುರಿಯೊಂದಿಗೆ ಸಾರ್ವಜನಿಕರಿಗೆ ಸ್ಪಂದಿಸದ ರೀತಿಯಲ್ಲಿನ ವ್ಯವಸ್ಥೆ ತಂದು 9 ಮಂದಿ ಲೋಕಾಯುಕ್ತರನ್ನು ನೇಮಿಸುತ್ತಾರಂತೆ.
ಇರುವ ವ್ಯವಸ್ಥೆಯನ್ನು ಚೆನ್ನಾಗಿ ಮಾಡಿದರೆ ಅನುಕೂಲ.

ಲೋಕಾಯುಕ್ತದಲ್ಲಿದ್ದಾಗ ಸರ್ಕಾರಿ ವ್ಯವಸ್ಥೆಯಲ್ಲಿ ನಾನು ಕಂಡ ಅನ್ಯಾಯ, ಭ್ರಷ್ಟಾಚಾರ ಇನ್ಯಾರೂ ಕಂಡಿರಲಿಕ್ಕೆ ಸಾಧ್ಯವಿಲ್ಲ. ಐದು ವರ್ಷದಲ್ಲಿ 20,300 ದೂರುಗಳು ಬಂದಿದ್ದವು. 600ಕ್ಕೂ ಹೆಚ್ಚು ಭ್ರಷ್ಟಾಚಾರ ಪ್ರಕರಣಗಳು ಬಂದವು ಎಂದರು.

SCROLL FOR NEXT