ಬೆಂಗಳೂರು: ಕೆ.ಹಿರಣ್ಣಯ್ಯ ಮಿತ್ರ ಮಂಡಳಿ ಹಾಗೂ ಮಹಿಳಾ ದಕ್ಷತಾ ಸಮಿತಿ ಸಹಯೋಗದೊಂದಿಗೆ ಮಾಸ್ಟರ್ ಹಿರಣ್ಣಯ್ಯ ಅವರಿಂದ ಲಂಚಾವತಾರ ಹಾಗೂ ಮಕ್ಮಲ್ ಟೋಪಿ ನಾಟಕಗಳ ಪ್ರದರ್ಶನವನ್ನು ನಗರದ ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ಮೇ 27ರಂದು ಹಮ್ಮಿಕೊಳ್ಳಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಹಿಳಾ ದಕ್ಷತಾ ಸಮಿತಿ ಅಧ್ಯಕ್ಷ ಶರಣ್ಯ ಹೆಗಡೆ, ಮಾಸ್ಟರ್ ಹಿರಣ್ಣಯ್ಯ ಅವರು ಲಂಚಾವತಾರ ಹಾಗೂ ಮಕ್ಮಲ್ ಟೋಪಿ ನಾಕಟಗಳನ್ನು ಪ್ರದರ್ಶಿಸಲಿದ್ದಾರೆ. ಇದು ಹಿರಣ್ಣಯ್ಯ ಅವರ ಕೊನೆ ನಾಟಕವಾಗಲಿದೆ ಎಂದು ತಿಳಿಸಿದ್ದಾರೆ.
ಮೇ 27 ರಂದು ಸಂಜೆ 7 ಗಂಟೆಯಿಂದ 9.30 ರವರೆಗೆ ಪ್ರದರ್ಶಗೊಳ್ಳಲಿದೆ. ಅಲ್ಲದೇ, ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಕಲಾವಿದಿ ಶ್ರೀ ಪ್ರಹ್ಲಾದ್ ಅವರಿಂದ ನೆರಳಿನ ಆಟ ಹಾಗೂ ಮಾತನಾಡುವ ಬೊಂಬೆ ಪ್ರದರ್ಶನಗಳೂ ನಡೆಯಲಿವೆ ಎಂದು ಹೇಳಿದ್ದಾರೆ.
ಪ್ರದರ್ಶನದ ಟಿಕೆಟ್ ಗಳನ್ನು Bookmyshow.com ಹಾಗೂ ಅಜಂತಾ ಹೋಟೆಲ್- ಎಂಜಿ ರಸ್ತೆ, ಅವೆನ್ಯೂ-ಬ್ರಿಗೇಡ್ ರಸ್ತೆ, ಸೂಪರ್ ಮಾರ್ಕೆಟ್, ಮಂತ್ರಿ ಸ್ಕ್ವೇರ್ ಮಲ್ಲೇಶ್ವರಂ ಸ್ಥಳಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಹೆಚ್ಚಿನ ಮಾಹಿತಿಗಾಗಿ-080-23641814 ಸಂಪರ್ಕಿಸಬಹುದು.