ಬೆಂಗಳೂರು: ಬಿಬಿಎಂಪಿಯಲ್ಲಿ ಬುಧವಾರ ಒಂದೇ ದಿನ ರು.47.90 ಕೋಟಿ ಆಸ್ತಿ ತೆರಿಗೆ ಸಂಗ್ರಹವಾಗಿದ್ದು, ಈ ಸಾಲಿನಲ್ಲಿ ಒಟ್ಟು ರು.960 ಕೋಟಿ ಸಂಗ್ರಹವಾಗಿದೆ.
ಆಡಳಿತಾಧಿಕಾರಿ ಟಿ.ಎಂ.ವಿಜಯಭಾಸ್ಕರ್ ಹಾಗೂ ಆಯುಕ್ತ ಜಿ.ಕುಮಾರ್ ನಾಯಕ್, ತೀವ್ರ ಆಸ್ತಿ ತೆರಿಗೆ ವಸೂಲಾತಿ ಅಭಿಯಾನದ ಅಂಗವಾಗಿ ಕಾರ್ಯಾಚರಣೆ ನಡೆಸಿದ್ದು, ರು.47.90 ಕೋಟಿ ತೆರಿಗೆ ವಸೂಲಿ ಮಾಡಲಾಗಿದೆ. ಕಂದಾಯ ಅಧಿಕಾರಿಗಳ ತಂಡದೊಂದಿಗೆ ಎಲ್ಲ ವಲಯಗಳಲ್ಲಿ ಕಾರ್ಯಾಚರಣೆ ನಡೆಸಿದ್ದು, ಮಹದೇವಪುರ ವಲಯವೊಂದರಲ್ಲೇ ರು.26 ಕೋಟಿ ಅತ್ಯಧಿಕ ಆಸ್ತಿ ತೆರಿಗೆ ಸಂಗ್ರಹಿಸಲಾಗಿದೆ.
`ಶೇ.5 ರಿಯಾಯಿತಿಯೊಂದಿಗೆ ಆಸ್ತಿ ತೆರಿಗೆ ಪಾವತಿಸಲು ಇನ್ನೂ 3 ದಿನಗಳ ಅವಕಾಶವಿದ್ದು, ಆಸ್ತಿ ಮಾಲೀಕರು ಶೀಘ್ರದಲ್ಲಿ ತೆರಿಗೆ ಪಾವತಿಸಬೇಕು' ಎಂದು ಆಡಳಿತಾಧಿಕಾರಿ ವಿಜಯಭಾಸ್ಕರ್ ಮನವಿ ಮಾಡಿದ್ದಾರೆ.
`ಪ್ರತಿ ವಾರ ಅಭಿಯಾನ ನಡೆಸುತ್ತಿರುವುದರಿಂದ ಆಸ್ತಿ ತೆರಿಗೆ ಸಂಗ್ರಹದಲ್ಲಿ ಗಣನೀಯ ಏರಿಕೆ ಕಂಡುಬರುತ್ತಿದೆ. ಕಡಿಮೆ ಸಮಯದಲ್ಲಿ ರು.960 ಕೋಟಿ ದಾಖಲೆ ಆಸ್ತಿ ತೆರಿಗೆ ಸಂಗ್ರಹವಾಗಿದೆ' ಎಂದು ಕಂದಾಯ ವಿಭಾಗದ ಉಪ ಆಯುಕ್ತ ವೆಂಕಟಾಚಲಪತಿ ತಿಳಿಸಿದ್ದಾರೆ.
ವಲಯ ಆಸ್ತಿ ತೆರಿಗೆ
ಮಹದೇವಪುರ ರು.26 ಕೋಟಿ
ದಾಸರಹಳ್ಳಿ ರು.35 ಲಕ್ಷ
ಆರ್ ಆರ್ ನಗರ ರು.76 ಲಕ್ಷ
ದಕ್ಷಿಣ ರು.5.7 ಕೋಟಿ
ಯಲಹಂಕ ರು.2.5 ಕೋಟಿ
ಬೊಮ್ಮನಹಳ್ಳಿ ರು.3.53 ಕೋಟಿ
ಪೂರ್ವ ರು.7.14 ಕೋಟಿ
ಪಶ್ಚಿಮ ರು.1.50 ಕೋಟಿ
ಒಟ್ಟು ರು.47.90 ಕೋಟಿ