ದೆಹಲಿಯಲ್ಲಿ ಇಂದು ಕಳಸಾ ಸಭೆ
ಕಳಸಾ ಬಂಡೂರಿ ವಿಚಾರದಲ್ಲಿ ನ್ಯಾಯಾಧೀಕರಣದಲ್ಲಿ ಮಧ್ಯಂತರ ಅರ್ಜಿ ಸಲ್ಲಿಸುವ ಸಂಬಂಧ ಮಹತ್ವದ ಚರ್ಚೆ ಸೋಮವಾರ...ನಡೆಯಲಿದ್ದು,
ಬೆಂಗಳೂರು: ಕಳಸಾ ಬಂಡೂರಿ ವಿಚಾರದಲ್ಲಿ ನ್ಯಾಯಾಧೀಕರಣದಲ್ಲಿ ಮಧ್ಯಂತರ ಅರ್ಜಿ ಸಲ್ಲಿಸುವ ಸಂಬಂಧ ಮಹತ್ವದ ಚರ್ಚೆ ಸೋಮವಾರ ನಡೆಯಲಿದ್ದು, ಈ ವಿಚಾರವಾಗಿ ಚರ್ಚಿಸಲು ಸೋಮವಾರ ರಾಜ್ಯದ ಸರ್ವಪಕ್ಷ ನಿಯೋಗದೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಗೆ ತೆರಳಲಿದ್ದಾರೆ.
ಸಚಿವರಾದ ಎಚ್.ಕೆ. ಪಾಟೀಲ್, ಎಂ.ಬಿ.ಪಾಟೀಲ್, ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಸೇರಿದಂತೆ ಜೆಡಿಎಸ್ ಪ್ರಮುಖರು,ಸಿಎಂ ಜತೆ ತೆರಳಲಿದ್ದಾರೆ. ಮಧ್ಯಾಹ್ನ ಒಂದು ಗಂಟೆಗೆ ನಿಯೋಗವು ರಾಜ್ಯದ ಪರ ವಕೀಲ ಫಾಲಿ ಎಸ್. ನಾರಿಮನ್ ಜತೆ ಚರ್ಚಿಸಲಿದೆ.ಮಧ್ಯಂತರ ತೀರ್ಪನ್ನು ಅಪೇಕ್ಷಿಸಬೇಕೇ ಬೇಡವೇ ಅಥವಾ ಬೇರೆ ಯಾವ ರೀತಿ ನಿರ್ಧಾರ ಕೈಗೊಂಡರೆ ರಾಜ್ಯಕ್ಕೆ ಅನುಕೂಲವಾಗುತ್ತದೆಂಬುದರ ಬಗ್ಗೆ ನಿಯೋಗವು ಅಭಿಪ್ರಾಯ ಕೇಳಲಿದೆ.