ಜಿಲ್ಲಾ ಸುದ್ದಿ

ಬೆಳ್ಳಂದೂರು ಕೆರೆ ನೊರೆ ಪರಿಹಾರಕ್ಕೆ ಯೋಜನೆ ಸಿದ್ದ

Shilpa D

ಬೆಂಗಳೂರು: ಆಗಾಗ ನೊರೆಯ ರಾಶಿಗೆ ಕಾರಣವಾಗುವ ಬೆಳ್ಳಂದೂರು ಕೆರೆಗೆ ಶಾಶ್ವತ ಯೋಜನೆ ಸಿದ್ಧಪಡಿಸಲಾಗಿದ್ದು, ಮುಂದಿನ ಎರಡು ವರ್ಷದೊಳಗೆ ಮೂರು ಹಂತಗಳಲ್ಲಿ ಕಾಮಗಾರಿ ಹಮ್ಮಿಕೊಳ್ಳಲಾಗುವುದು ಎಂದು ಬೆಂಗಳೂರು ಜಲ ಮಂಡಳಿ ಅಧ್ಯಕ್ಷ ಟಿ.ಎಂ. ವಿಜಯ್ ಭಾಸ್ಕರ್ ಹೇಳಿದರು.

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ `ಕೈಗಾರಿಕೋದ್ಯಮಿಗಳೊಂದಿಗೆ ಸಂವಾದ' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವರು ಕೆರೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕೆರೆಗೆ ಸೂಕ್ತ ತಡೆಗೋಡೆ, ನೊರೆ ಬಾರದಂತೆ ರಾಸಾಯನಿಕ ಬೇರ್ಪಡಿಸುವಿಕೆ, ನೀರು ಸರಾಗವಾಗಿ ಹರಿದು ಕೆರೆಗೆ ಸೇರಲು ರ್ಯಾಂಪ್ ನಿರ್ಮಿಸಲಾಗುವುದು ಎಂದು ಹೇಳಿದರು.

ಕುಡಿಯಲು ಮಾತ್ರ ಬಳಸಿ: ಕಾವೇರಿ ನದಿ ಪಾತ್ರದಿಂದ ಬೆಂಗಳೂರು ನಗರಕ್ಕೆ ಸರಬರಾಜು ಮಾಡುತ್ತಿರುವ ಕಾವೇರಿ ನೀರನ್ನು ಕುಡಿಯಲು ಮಾತ್ರ ಬಳಸುವಂತೆ ಮನವಿ ಮಾಡಿದ್ದಾರೆ. ಕಾವೇರಿ ನೀರು ಶುದ್ದ ಕುಡಿಯುವ ನೀರು. ಇದರಲ್ಲಿ ಯಾವುದೇ ಪ್ಲೊರೈಡ್ ಅಥವಾ ರಾಸಾಯನಿಕ ಮಿಶ್ರಣವಾಗಿರುವುದಿಲ್ಲ. ಆದ್ದರಿಂದ ಬೆಂಗಳೂರಿನ ಜನತೆ ಕಾವೇರಿ ನೀರನ್ನು ಕುಡಿಯಲು ಮಾತ್ರ ಬಳಸಬೇಕು. ಳವೆಬಾವಿಯಿಂದ ಪೂರೈಸುವ ರನ್ನು ಇತರೆ ಕಾರ್ಯಗಳಿಗೆ ಬಳಸುವಂತೆ ಮನವಿ ಮಾಡಿದರು.

ಪೀಣ್ಯ ಕೈಗಾರಿಕಾ ಪ್ರದೇಶಲ್ಲಿನ ಕಾರ್ಖಾನೆಗಳು ಸ್ವಂತ ಹಣದಿಂದ ನೀರಿನ ಪೈಪ್‍ಲೈನ್ ಅಳವಡಿಸಿಕೊಂಡಿವೆ. ಅದಕ್ಕಾಗಿ ಜಲ ಮಂಡಳಿಗೆ ಈಗಾಗಲೇ  ಶುಲ್ಕವನ್ನು ಪಾವತಿಸಿರುವಾಗ, ಈಗ ಹೊಸದಾಗಿ ಪ್ರತಿ ಚದರ ಮೀಟರ್‍ಗೆ ರೂ. 300 ಶುಲ್ಕ ಪಾವತಿಸುವಂತೆ ಆದೇಶಿಸಿರುವುದು ಸರಿಯಲ್ಲ. ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ಪ್ರೊರೇಟಾ ನಿಗದಿಯಿಂದ ವಿನಾಯಿತಿ ನೀಡಬೇಕು.

ಕೆ. ಆನಂದರಾವ್ ಮಾಜಿ ಕಾರ್ಯದರ್ಶಿ ಪೀಣ್ಯ ಕೈಗಾರಿಕಾ ಸಂಘ

SCROLL FOR NEXT