ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ಬುದ್ಧಿ ಹೇಳಿದ್ದಕ್ಕೆ ವಿದ್ಯಾರ್ಥಿನಿ ನೇಣಿಗೆ

ಮನೆಗೆ ತಡವಾಗಿ ಬರುತ್ತಿರುವುದನ್ನು ಆಕ್ಷೇಪಿಸಿ ತಾಯಿ ಬುದಿಟಛಿಮಾತು ಹೇಳಿದ್ದಕ್ಕೆ ಕುಪಿತಗೊಂಡ ಪ್ರಥಮ ಪಿಯುಸಿ ವಿದ್ಯಾರ್ಥಿನಿ...

ಸಾಂದರ್ಭಿಕ ಚಿತ್ರ
Mainashree
Updated On : 7 Nov 2015, 12:33 pm
ಬೆಂಗಳೂರು: ಮನೆಗೆ ತಡವಾಗಿ ಬರುತ್ತಿರುವುದನ್ನು ಆಕ್ಷೇಪಿಸಿ ತಾಯಿ ಬುದಿಟಛಿಮಾತು ಹೇಳಿದ್ದಕ್ಕೆ ಕುಪಿತಗೊಂಡ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಮಂಜು ದುರ್ಗಾರಾಂ (17) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯನಗರದಲ್ಲಿ ನಡೆದಿದೆ. 
ಇಲ್ಲಿನ ಎಂಸಿ ಲೇಔಟ್ ನಿವಾಸಿಯಾಗಿರುವ ದುರ್ಗಾರಾಂ ಹಾಗೂ ಮಿಸ್ತ್ರಿ ದೇವಿ ದಂಪತಿಯ ಪುತ್ರಿ ಮಂಜು, ಮಾಗಡಿ ರಸ್ತೆ ಎಎಸ್‍ಸಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ದಂಪತಿ ಗಾಂಧಿ ನಗರದಲ್ಲಿ ಬಟ್ಟೆ ಅಂಗಡಿ ನಡೆಸುತ್ತಿದ್ದಾರೆ. ಗುರುವಾರ ಬೆಳಗ್ಗೆ ಅಂಗಡಿಗೆ ಹೋಗಿದ್ದ ಮಿಸ್ತ್ರಿ ದೇವಿ ಮಧ್ಯಾಹ್ನ 2.30ಕ್ಕೆ ಮನೆಗೆ ವಾಪಸಾಗಿದ್ದರು. 
ಒಳಗಿನಿಂದ ಚಿಲಕ ಹಾಕಿತ್ತು. ಕಿಟಕಿಯಿಂದ ಇಣುಕಿ ನೋಡಿದಾಗ ಮಂಜು ಫ್ಯಾನಿಗೆ ನೇಣು ಹಾಕಿಕೊಂಡಿರುವುದು ಗೊತ್ತಾಗಿದೆ. ಗಾಬರಿಗೊಂಡ ಮಿಸ್ತ್ರಿ ದೇವಿ ಅವರು ನೆರೆಹೊರೆಯವರಿಗೆ ತಿಳಿಸಿ ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 

Advertisement

Advertisement

ಬುಧವಾರ ಕಾಲೇಜಿನಿಂದ ಮಂಜು ತಡವಾಗಿ ಬಂದಿದ್ದಳು. ಹೀಗಾಗಿ, ತಡವಾಗಿ ಮನೆಗೆ ಬರುವುದು ಒಳ್ಳೆಯದಲ್ಲ. ಬೇಗ ಮನೆಗೆ ವಾಪಸಾಗಬೇಕು ಎಂದು ಗದರಿದ್ದೆ. ಇದರಿಂದ ಬೇಸರಗೊಂಡು ಆಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ತಾಯಿ ಮಿಸ್ತ್ರಿ ದೇವಿ ಹೇಳಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement