ಜಯರಾಮಶೆಟ್ಟಿ 
ಜಿಲ್ಲಾ ಸುದ್ದಿ

23 ವರುಷಗಳಿಂದ ಹಾಸಿಗೆ ಹಿಡಿದ ಈತ ಧೈರ್ಯಗುಂದಲಿಲ್ಲ

ಕರ್ನಾಟಕದ ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಜಯರಾಮ ಶೆಟ್ಟಿ ಎಂಬವರು ಕಳೆದ 23 ವರುಷಗಳಿಂದ ದೇಹದ ಸ್ವಾಧೀನ ಕಳೆದುಕೊಂಡು...

ಕುಂದಾಪುರ: ಕರ್ನಾಟಕದ ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಜಯರಾಮ ಶೆಟ್ಟಿ ಎಂಬವರು ಕಳೆದ 23 ವರುಷಗಳಿಂದ ದೇಹದ ಸ್ವಾಧೀನ ಕಳೆದುಕೊಂಡು ಹಾಸಿಗೆ ಹಿಡಿದಿದ್ದಾರೆ.
ಬೆನ್ನುಹುರಿ ಸ್ವಾಧೀನ ಕಳೆದುಕೊಂಡಾಗಿನಿಂದ ಶೆಟ್ಟಿ ಹಾಸಿಗೆಯಲ್ಲೇ ಜೀವನ ಕಳೆಯುತ್ತಿದ್ದಾರೆ.
ಕೊಂಕಣ ರೈಲ್ವೇಗಾಗಿ ಸುರಂಗ ಮಾರ್ಗ ನಿರ್ಮಿಸುವ ಕಂಪನಿಯೊಂದರಲ್ಲಿ ಸೂಪರ್ವೈಸರ್  ಆಗಿ ಕಾರ್ಯನಿರ್ವಹಿಸುತ್ತಿದ್ದ ಶೆಟ್ಟಿಯವರಿಗೆ 1992 ದುರಂತದ ವರ್ಷವಾಗಿತ್ತು. ಅದೊಂದು ದಿನ ಕೆಲಸ ಮಾಡುತ್ತಿರಬೇಕಾದರೆ ಕಲ್ಲೊಂದು ತಲೆಯ ಮೇಲೆ ಬಿದ್ದ ಪರಿಣಾಮ ಬೆನ್ನುಹುರಿಗೆ ಗಾಯಗಳಾಗಿ ದೇಹದ ಸ್ವಾಧೀನವೇ ಹೊರಟುಹೋಗಿ ಬಿಟ್ಟಿತು. ಈ ಒಂದು ಘಟನೆಯಿಂದಾಗಿ ಶೆಟ್ಟಿ ಹಾಸಿಗೆ ಹಿಡಿಯುವಂತಾಯಿತು.
ಆಸ್ಪತ್ರೆಗೆ ಸೇರಿಸಿದಾಗ ಸರ್ಕಾರ, ಸಹೋದ್ಯೋಗಿಗಳು, ನೆರೆಯವರೆಲ್ಲರೂ ಸಹಾಯ ಮಾಡಿದರು. ಈ ವಾರ್ತೆ ಮಾಧ್ಯಮಗಳಲ್ಲಿ ಬಂದಾಗ ಒಂದಷ್ಟು ದಾನಿಗಳು ಸಹಾಯವನ್ನೂ ಮಾಡಿದರು. ಆದರೆ ಆಸ್ಪತ್ರೆಯ ವೆಚ್ಚ ನಿರ್ವಹಿಸಲು ಇದೆಲ್ಲವೂ ಸಾಕಾಗುತ್ತಿಲ್ಲ.
ಈ ಬಗ್ಗೆ ಸುದ್ದಿ ವಾಹಿನಿಯೊಂದರಲ್ಲಿ ಮಾತನಾಡಿದ ಶೆಟ್ಟಿ, ಪ್ರತೀ ತಿಂಗಳು ಚಿಕಿತ್ಸೆ ಮತ್ತು ಔಷಧಿಗಾಗಿ ನಾನು ಮಣಿಪಾಲಕ್ಕೆ ಹೋಗಬೇಕಾಗುತ್ತದೆ. ಈ ಮೊದಲು ರು. 8,000 ಸಾಕಾಗುತ್ತಿತ್ತು. ಈಗ ರು. 9,000 ಬೇಕಾಗುತ್ತಿದೆ.
ಶೆಟ್ಟಿ ಜತೆ ಅವರ ಕುಟುಂಬದವರು ಸದಾ ಸಹಾಯಕ್ಕಾಗಿ ಇರುತ್ತಾರೆ. ನೆರೆ ಮನೆಯ ನಾಗೇಶ್ ಎಂಬವರೇ ಶೆಟ್ಟಿಗೆ ಔಷಧಿಗಳನ್ನು ತಂದುಕೊಂಡುತ್ತಿದ್ದಾರೆ.
ಆದರೆ ಇನ್ನೊಬ್ಬರ ಸಹಾಯದಿಂದ ಬದುಕುವುದಕ್ಕೆ ಶೆಟ್ಟಿಗೆ ಮನಸ್ಸು ಬರುತ್ತಿಲ್ಲ. ವಾಹನವೊಂದನ್ನು ಖರೀದಿಸಿ ಬಾಡಿಗೆಗೆ ಕೊಟ್ಟು ತಿಂಗಳಲ್ಲಿ ರು. 5000 ಸಂಪಾದನೆ ಮಾಡಬೇಕೆಂಬ ಹಂಬಲ ಶೆಟ್ಟಿಗಿದೆ. ರು. 3 ಲಕ್ಷದಲ್ಲಿ ಒಂದು ಮಾರುತಿ ಓಮ್ನಿ ಖರೀದಿಸಬೇಕು.. ಅದನ್ನು ಬಾಡಿಗೆಗೆ ಕೊಟ್ಟು ಸಂಪಾದನೆ ಮಾಡಬೇಕು. ಇದರಿಂದ ನನ್ನ ಔಷಧಕ್ಕಾಗುವ ಖರ್ಚನ್ನು ಸ್ವಲ್ಪವಾದರೂ ಭರಿಸಬಹುದು ಅಂತಾರೆ ಶೆಟ್ಟಿ.
ನನಗೆ ಏನು ಇಲ್ಲವೋ ಅದರ ಬಗ್ಗೆ ಯೋಚಿಸುವುದನ್ನು ಬಿಟ್ಟು, ನನಗೇನಿದೆಯೋ ಅದರ ಬಗ್ಗೆ ಯೋಚಿಸುತ್ತೇನೆ ಎನ್ನುವ ಶೆಟ್ಟಿ ಎದೆಗುಂದದೆ ಬದುಕುವುದಕ್ಕೆ ಪ್ರೇರಣೆಯಾಗಿದ್ದಾರೆ.
ಶೆಟ್ಟಿಯವರಿಗೆ ಸಹಾಯ ಮಾಡಬೇಕೆಂದು ಬಯಸುವವರು ಕೆಳಗಿನ ವಿಳಾಸವನ್ನು ಸಂಪರ್ಕಿಸಬಹುದು.
Name - Jayaram Shetty
Address: Sarkal Hosemane Kandlur-Post Kundapur Taluk, District Udupi, Karnataka, India
Vijaya Bank  A/C: 110801010006616
IFSC Code: VIJB- 0001108
Contact number: 91 94-81-179305
E-Mail: jshetty93@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

SCROLL FOR NEXT