ಬೆಂಗಳೂರು: ಮಾರತಹಳ್ಳಿ ರಿಂಗ್ ರಸ್ತೆಯಲ್ಲಿರುವ ಇ ಜೋನ್ ಕ್ಲಬ್ ನಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು, ವೀಸಾ ಹಾಗೂ ಪಾಸ್ ಪೋರ್ಟ್ ಇಲ್ಲದ 20 ಆಫ್ರಿಕಾ ಪ್ರಜೆಗಳು ಸೇರಿದಂತೆ 37 ಮಂದಿಯನ್ನು ಬಂಧಿಸಿದ್ದಾರೆ.
ಫೇಸ್ ಬುಕ್ ನಲ್ಲಿ ಫ್ರೈಡೇ ನೈಟ್ ಕ್ರ್ಯಾಂಕ್ಸ್ ಹಾಗೂ ಗಿವ್ ಮಿ ದ ಬ್ರೇಕ್, ಟಚ್ ಯುವರ್ ಟೋಸ್ ಎಂಬ ಹೆಸರಿನ ಇಜೋನ್ ಕ್ಲಬ್ ಮೇಲೆ ಶನಿವಾರ ದಾಳಿ ನಡೆಸಿದ ಸಿಸಿಬಿ ಪೊಲೀಸರು, ಕ್ಯಾಮೂರನ್ ದೇಶದ 11, ನೈಜೀರಿಯಾದ 3, ಕಾಂಗೋ ರಾಷ್ಟ್ರದ 2, ಐವೈರಿ ಕೋಸ್ಟ್, ಗ್ಯಾಬನ್, ಉಗಾಂಡ ದೇಶದ ತಲಾ ಒಬ್ಬರು ಸೇರಿದಂತೆ ಒಟ್ಟು 35 ಜನರನ್ನು ಬಂಧಿಸಿದ್ದಾರೆ.
ಕಾರ್ಯಾಚರಣೆ ವೇಳೆ 11.5 ಲಕ್ಷ ರು. ಮೌಲ್ಯದ ಮೊಬೈಲ್‌ಗಳು, ಡ್ರಗ್ಸ್, ಕಾಂಡೋಮ್ ಸೇರಿದಂತೆ ಇತರೆ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಈ ಬಂಧಿತ ವಿದೇಶಿ ಪ್ರಜೆಗಳು ತಮ್ಮ ವೀಸಾ ಹಾಗೂ ಪಾಸ್‌ಪೋರ್ಟ್ ಸೇರಿದಂತೆ ಅಗತ್ಯ ದಾಖಲಾತಿಗಳ ಬಗ್ಗೆ ವಿಚಾರಿಸಿದಾಗ ಸೂಕ್ತ ಉತ್ತರ ನೀಡದೆ ನಿರ್ಲಕ್ಷಿಸಿದ್ದರಿಂದ ಇದಕ್ಕೆ ಪ್ರತ್ಯೇಕ ಪ್ರಕರಣ ದಾಖಲಾಗಿದೆ.