ಗೃಹ ಸಚಿವರ ನೂತನ ಕಚೇರಿಯಲ್ಲಿ ಅರ್ಚಕರ ಮೊಬೈಲ್ ಕಳವು
ಗೃಹ ಸಚಿವ ಪರಮೇಶ್ವರ್ ಅವರ ನೂತನ ಕಚೇರಿ ಪ್ರವೇಶಕ್ಕೆ ಪೂಜೆ ಮಾಡಲು ಬಂದಿದ್ದ ಅರ್ಚಕರ ಮೊಬೈಲ್...
ಬೆಂಗಳೂರು: ಗೃಹ ಸಚಿವ ಪರಮೇಶ್ವರ್ ಅವರ ನೂತನ ಕಚೇರಿ ಪ್ರವೇಶಕ್ಕೆ ಪೂಜೆ ಮಾಡಲು ಬಂದಿದ್ದ ಅರ್ಚಕರ ಮೊಬೈಲ್ ಕಳುವಾಗಿದೆ.
ವಿಧಾನಸೌಧದಲ್ಲಿ ನೂತನ ಕಚೇರಿಗೆ ಇಂದು ಗೃಹ ಸಚಿವ ಪರಮೇಶ್ವರ್ ಅವರು ಪ್ರವೇಶ ಮಾಡಲು ಪೂಜೆ ನಡೆಸಲಾಯಿತು. ಪೂಜೆ ಕಾರ್ಯಕ್ರಮ ನಡೆಸಲು ಗಂಗಾನಗರದ ಆಂಜನೇಯ ದೇವಾಲಯದ ಅರ್ಚಕ ಕೃಷ್ಣಮೂರ್ತಿ ಆಗಮಿಸಿದ್ದರು.
ನೂತನ ಕಚೇರಿಗೆ ಪೂಜೆ ನೆರವೇರಿಸಿ ಎಲ್ಲರಿಗೂ ಮಂಗಳಾರತಿ ನೀಡಿದ್ದಾರೆ. ಈ ವೇಳೆ ಅರ್ಚಕರ ಮೊಬೈಲ್ ಕಳುವಾಗಿದೆ. ವಿಷಯ ತಿಳಿಯುತ್ತಿದ್ದಂತೆ ಅಲ್ಲಿದ್ದ ಪೊಲೀಸರು ಪೂಜೆಗೆ ಬಂದಿದ್ದ ಎಲ್ಲರನ್ನೂ ತಪಾಸಣೆ ನಡೆಸಿದ್ದಾರೆ.
ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.
ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.