ಸಚಿನ್ ತೆಂಡೂಲ್ಕರ್ ಅಭಿಮಾನಿ ಸುಧೀರ್ ಕುಮಾರ್ ಚೌಧರಿ 
ಜಿಲ್ಲಾ ಸುದ್ದಿ

ಸಚಿನ್ ಅಭಿಮಾನಿ ಸುಧೀರ್‍ಗೆ ಬೈದ ಎಸಿಪಿ!

ಕ್ರಿಕೆಟ್ ಪಂದ್ಯ ನಡೆಯುವ ವೇಳೆ ಭಾರತದ ತ್ರಿವರ್ಣ ಧ್ವಜದ ಬಣ್ಣವನ್ನು ಮೈಮೇಲೆ ಬಳಿದುಕೊಂಡು, ಬೆನ್ನ ಹಿಂದೆ ಸಚಿನ್ ತೆಂಡೂಲ್ಕರ್ ...

ಬೆಂಗಳೂರು: ಕ್ರಿಕೆಟ್ ಪಂದ್ಯ ನಡೆಯುವ ವೇಳೆ ಭಾರತದ ತ್ರಿವರ್ಣ ಧ್ವಜದ ಬಣ್ಣವನ್ನು ಮೈಮೇಲೆ ಬಳಿದುಕೊಂಡು, ಬೆನ್ನ ಹಿಂದೆ ಸಚಿನ್ ತೆಂಡೂಲ್ಕರ್  ವರ ನೆಚ್ಚಿನ ಸಂಖ್ಯೆ 10 ಬರೆದುಕೊಂಡು ಕೈಯಲ್ಲಿ ಬಾವುಟ ಹಿಡಿದು ವಿಶಿಷ್ಠ ಹಾವಭಾವದ ಮೂಲಕ ಭಾರತ ತಂಡಕ್ಕೆ ಹುರಿದುಂಬಿಸುವ ಕ್ರಿಕೆಟ್  ಅಭಿಮಾನಿಗಳಿಗೆ ಚಿರಪರಿತರಾಗಿರುವ ಸಚಿನ್ ಅಭಿಮಾನಿ ಸುಧೀರ್ ಗೆ ಪೊಲೀಸ್ ಅಧಿಕಾರಿಯೊಬ್ಬರು ಅವಮಾನಿಸಿದ ಘಟನೆ ಶನಿವಾರ ಬೆಳಗ್ಗೆ  ನಡೆದಿದೆ.

ಚಾಮರಾಜಪೇಟೆ ಉಪ ವಿಭಾಗದ ಎಸಿಪಿ ಸೈಯ್ಯದ್ ಇಸಾಕ್ ಅವರು ಸುಧೀರ್‍ಗೆ
ಅವಮಾನಿಸಿದ ಆರೋಪಕ್ಕೆ ಗುರಿಯಾಗಿದ್ದಾರೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯು ತ್ತಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಪಂದ್ಯಕ್ಕೆ ಗೇಟ್ ಸಂಖ್ಯೆ 1ರಲ್ಲಿ ಚಾಮರಾಜಪೇಟೆ ಎಸಿಪಿ ಸೈಯ್ಯದ್ ಇಸಾಕ್ ಅವರನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಕಟ್ಟಾಭಿಮಾನಿ ಸುಧೀರ್ ಎಂದಿನ ವಿಶಿಷ್ಠ ವೇಷ ಭೂಷಣದಲ್ಲೇ ಬಾವುಟ ಹಿಡಿದುಕೊಂಡು ಆಟೋದಲ್ಲಿ ಬಂದು, ಗೇಟ್ ಸಂಖ್ಯೆ 1ರ ಬಳಿ ಇಳಿದುಕೊಂಡಿದ್ದಾರೆ. ಅದೇ ವೇಳೆ ಕ್ರಿಕೆಟ್ ಅಭಿಮಾನಿಗಳು ಸುಧೀರ್ ಅವರನ್ನು ಸುತ್ತುವರೆದು ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾರೆ.  ಒಂದೇ ಸಲಕ್ಕೆ ಹಲವು ಮಂದಿ ರಸ್ತೆಗೆ ಬಂದಿದ್ದ ಕಾರಣ ಸಂಚಾರ  ದಟ್ಟಣೆ ಹಾಗೂ ಭದ್ರತೆಗೆ ಸಮಸ್ಯೆ ಉಂಟಾಗುತ್ತದೆ ಎನ್ನುವ ಕಾರಣಕ್ಕೆ ತಾಳ್ಮೆ  ಕಳೆದುಕೊಂಡ ಎಸಿಪಿ ಇಸಾಕ್ ಅವರು, `ಈಡಿಯಟ್' ಎಂದು ಸುಧೀರ್‍ಗೆ ಬೈದಿದ್ದಾರೆ. ಬಳಿಕ  ಕೆಟ್ಟ ಪದಗಳನ್ನು ಬಳಸಿ ಸುಧೀರ್ ಹಾಗೂ ಆತನ ಜತೆ ಫೋಟೋ ಕ್ಲಿಕ್ಕಿಸಿಕೊಳ್ಳಲು  ಮುಂದಾದ ಅಭಿಮಾನಿಗಳಿಗೂ ಬೈಯ್ದಿದ್ದಾರೆ ಎಂದು ತಿಳಿದು ಬಂದಿದೆ.

ಕಾರಣವಿಲ್ಲದೇ ಬೈಗುಳ ಕೇಳಿಸಿಕೊಂಡ ಸಚಿನ್ ಅಭಿಮಾನಿ ಸುಧೀರ್ ಹಾಗೂ ಇತರರು ಕೆಲ ಕಾಲ ಗಾಬರಿಗೊಂಡಿದ್ದರು. ತಾನು ಏನು ತಪ್ಪು ಮಾಡದಿದ್ದರೂ ಏಕೆ ಬೈಯ್ಯುತ್ತಿದ್ದಿರಾ ಎಂದು ಸುಧೀರ್ ಪ್ರಶ್ನಿಸಿ ಪಕ್ಕಕ್ಕೆ ಸರಿದಿದ್ದಾರೆ. ಬಳಿಕ ಎಂದಿನಂತೆ ಕ್ರೀಡಾಂಗಣದ ಒಳಗೆ  ತೆರಳಿದರು.

ಘಟನೆ ಬಗ್ಗೆ `ಕನ್ನಡಪ್ರಭ'ದೊಂದಿಗೆ ಮಾತನಾಡಿದ ಎಸಿಪಿ ಸೈಯ್ಯದ್ ಇಸಾಕ್, ಕ್ರೀಡಾಂಗಣದ ಗೇಟ್ ಸಂಖ್ಯೆ 1ರಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಟ್ರಾಫಿಕ್  ನೋಡಿಕೊಳ್ಳುವ ಜವಾಬ್ದಾರಿ ನನ್ನ ಮೇಲೆ ಇತ್ತು. ಬೆಳಗ್ಗೆ 9ರ ಸುಮಾರಿಗೆ ಆಟೋದಲ್ಲಿ ಆ  ವ್ಯಕ್ತಿ ಬಂದಿದ್ದ. ಆತನನ್ನು ನೋಡುತ್ತಿದ್ದಂತೆ ಕೆಲವರು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾದರು.  ಇದರಿಂದ ಅಲ್ಲಿ ಟ್ರಾಫಿಕ್ ಜಾಮ್ ಉಂಟಾಗುತ್ತಿತ್ತು.

ಹೀಗಾಗಿ, ಆತನಿಗೆ `ನ್ಯೂಸೆನ್ಸ್ ಸೃಷ್ಟಿಸುತ್ತಿಯಾ ಈಡಿಯಟ್' ಎಂದು ಹೇಳಿದೆ. ಅಲ್ಲದೇ,  ಆತನನ್ನು ಸುತ್ತುವರೆದಿದ್ದ  ಅಭಿಮಾನಿಗಳು ಹಾಗೂ ಆತನನ್ನು ಸೇರಿಸಿ `ಅವನು ಹುಚ್ಚಾ, ನೀವು ಹತ್ತು ಜನ ಸೇರಿ ಅವನಂತೆ ಆಡುತ್ತೀರಾ' ಎಂದಿದ್ದೆ. ಅಷ್ಟು ಬಿಟ್ಟರೆ ನಾನು ಬೇರೆನೂ  ಬೈಯ್ದಿಲ್ಲ. ಅಲ್ಲದೇ ಅಲ್ಲಿ ಯಾವ ಗಲಾಟೆಯೂ ಆಗಿಲ್ಲ ಎಂದು ಹೇಳಿದರು. `ನನಗೆ ಆತ  ಯಾರೂ ಎನ್ನುವುದು ಗೊತ್ತಿರಲಿಲ್ಲ' ಎಂದು ಎಸಿಪಿ ಸೈಯ್ಯದ್ ಇಸಾಕ್ ಸ್ಪಷ್ಟನೆ ನೀಡಿದ್ದಾರೆ.

ಬಿಹಾರ ಮೂಲದ ಸುಧೀರ್ ಕುಮಾರ್ ಚೌಧರಿ, ಸಚಿನ್ ತೆಂಡೂಲ್ಕರ್ ಅವರ ಕಟ್ಟಾ  ಅಭಿಮಾನಿಯಾಗಿದ್ದು 2003ರಿಂದ ಭಾರತದಲ್ಲಿ ನಡೆಯುತ್ತಿರುವ ಪ್ರತಿ ಪಂದ್ಯಗಳನ್ನು ಮಿಸ್  ಮಾಡದೆ ವೀಕ್ಷಿಸುತ್ತಾರೆ. ಅಲ್ಲದೇ, ಭಾರತ ವಿದೇಶಗಳಲ್ಲಿ ಆಡುವ ಪಂದ್ಯಗಳಿಗೂ ಸುಧೀರ್  ತೆರಳಿ ಬೆಂಬಲ ವ್ಯಕ್ತಪಡಿಸುತ್ತಾರೆ.

ಇದರಿಂದಾಗಿ ಕ್ರಿಕೆಟ್ ಅಭಿಮಾನಿಗಳಿಗೂ ಇವರು ಪರಿಚಿತರು. ಸಚಿನ್ ಸೇರಿದಂತೆ ಹಲವು  ಕ್ರಿಕೆಟ್ ಆಟಗಾರರ ಜತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಕಳೆದ ಕೆಲ ವರ್ಷಗಳಿಂದ ಭಾರತ  ಆಡುವ ಪ್ರತಿ ಪಂದ್ಯದ ಟಿಕೆಟ್‍ನ್ನು ಬಿಸಿಸಿಐ ಭರಿಸುತ್ತಿದೆ. ವಿದೇಶಗಳಿಗೆ ತೆರಳಲು  ಸುಧೀರ್ ಕ್ರಿಕೆಟ್ ಅಭಿಮಾನಿಗಳಿಂದ ನಿಧಿ ಸಂಗ್ರಹಿಸುತ್ತಾರೆಂಜು ತಿಳಿದು ಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಜೆಪಿ ಪ್ರತಿಭಟನೆ: ಮೆಟ್ರೋ, ಇಂಟರ್ನೆಟ್ ಸೇವೆ ಸ್ಥಗಿತ, ಅಕ್ರಮ ಬಂಧನಕ್ಕೆ ಸುಪ್ರೀಂ ಕೋರ್ಟ್ ಬ್ರೇಕ್; ಕೇಂದ್ರಕ್ಕೆ ಸೂಚನೆ

'ಸತ್ತ ಮೇಲೂ ಕಾಡ್ತಿದ್ದಾನೆ'; ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನಲ್ಲೂ ನಾನಾ ಪಾಟೇಕರ್ ಹೆಸರು ಎಳೆತಂದ ತನುಶ್ರೀ ದತ್ತಾ; ನೆಟ್ಟಿಗರ ಆಕ್ರೋಶ!

ನನ್ನ ಕನಸು ನೀವೇ ಸರ್‌; ನಿಮ್ಮ ಕಣ್ಣಲ್ಲಿ ನೀರು ತರಿಸಿದೆ: ಕಿಚ್ಚ ಸುದೀಪ್ ಮುಂದೆ ಕಣ್ಣೀರಿಟ್ಟ ಮಾಡರ್ನ್ ಮಹಾಕವಿ ಮಂಜು

'ಮೈಸೂರು ರಾಜಮನೆತನ ಹೊರಗಿಟ್ಟು ಕರ್ನಾಟಕ ಇತಿಹಾಸ ಊಹಿಸುವುದು ಕಷ್ಟ': ಗವಿಸಿದ್ಧೇಶ್ವರ ಶ್ರೀಗಳು; Video

'ಮೊದಲು ನಿಮ್ಮ ಅಮೆರಿಕದಲ್ಲಿ ಕೈಗೆಟುಕುವ ದರದಲ್ಲಿ ಸೇವೆ ಒದಗಿಸಿ': ಒತ್ತಡಕ್ಕೆ ಭಾರತ ಮಣಿಯಲ್ಲ; ಎಲಾನ್ ಮಸ್ಕ್ ವಿರುದ್ಧ ನಿಶಿಕಾಂತ್ ದುಬೆ