ಕಂಠೀರವ ಕ್ರೀಡಾಂಗಣ ಸರಿಯಾಗಿ ನಿರ್ವಹಣೆ ಮಾಡದ ಅಧಿಕಾರಿಗಳನ್ನು ರಾಜ್ಯ ವಿಕಲಚೇತನ ಅಧಿನಿಯಮದ ಆಯುಕ್ತ ಕೆಎಸ್ ರಾಜಣ್ಣ ತರಾಟೆಗೆ ತೆಗೆದುಕೊಂಡರು
ಬೆಂಗಳೂರು: ಕಂಠೀರವ ಕ್ರೀಡಾಂಗಣದ ಸುತ್ತ ಡ್ರಗ್ಸ್, ಕಾಂಡೋಮ್ಸ್, ರೋಗ ತರುವ ಪಾರ್ಥೇನಿಯಂ ಗಿಡಗಳು, ಕುರ್ಚಿಗಳ ಮೇಲೆ ವೀಕ್ಷಕರು ಕೂರಲಾಗದಷ್ಟು ಧೂಳು, ಸತ್ತ ಪಾರಿವಾಳಗಳು, ಕುಡಿಯುವ ನೀರಿಲ್ಲ, ತೆರೆದುಕೊಂಡ ಚರಂಡಿ, ಅಂಗವಿಕಲರಿಗೆ ಶೌಚಾಲಯವಿಲ್ಲ, ಗುಂಡಿಗಳಿಂದ ಕೂಡಿದ ಒಳಾಂಗಣ... ಇದೆಲ್ಲ ಕಂಡುಬಂದಿದ್ದು ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ.
ಇಲ್ಲಿನ ಸ್ಥಿತಿ ಕಂಡ ರಾಜ್ಯ ವಿಕಲಚೇತನ ಅಧಿನಿಯಮದ ಆಯುಕ್ತ ಕೆ.ಎಸ್.ರಾಜಣ್ಣ, ಸರಿಯಾಗಿ ನಿರ್ವಹಣೆ ಮಾಡದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಮಂಗಳವಾರ ಕಂಠೀರವ ಒಳಾಂಗಣ ಹಾಗೂ ಹೊರಾಂಗಣ ಕ್ರೀಡಾಂಗಣಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅವರು, ನಿರ್ವಹಣೆ ಸಂಪೂರ್ಣ ಹಾಳಾಗಿರುವುದನ್ನು ಕಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಮೊದಲು ಒಳಾಂಗಣ ಕ್ರೀಡಾಂಗಣಕ್ಕೆ ಭೇಟಿ ನೀಡಿದ ಅವರು, ವಿಕಲಚೇತನರಿಗೆ ಯಾವುದೇ ಸೌಲಭ್ಯ ಕಲ್ಪಿಸದಿರುವುದನ್ನು ಕಂಡು, ಕ್ರೀಡಾ ಉಪ ನಿರ್ದೇಶಕ ಎಂ.ಸಿ.ರಮೇಶ್ ಅವರನ್ನು ತರಾಟೆಗೆ ತೆಗೆದುಕೊಂಡರು. ಇಲ್ಲಿನ ಅವ್ಯವಸ್ಥೆ ಕಂಡು `ಅಂತಾರಾಷ್ಟ್ರೀಯ ಕ್ರೀಡಾಂಗಣ ಹೇಗಿರಬೇಕು. ನಿರ್ವಹಣೆ ಮಾಡುವಲ್ಲಿ ಸಂಪೂರ್ಣ ವಿಫಲರಾಗಿದ್ದೀರಾ.
ಸರ್ಕಾರದಿಂದ ದುಡ್ಡು ಬರುತ್ತಿದ್ದರೂ, ಅಭಿವೃದ್ಧಿಯಾಗಿಲ್ಲ. ಇದನ್ನು ಯಾವ ರೀತಿ ನೋಡಿದರೂ, ಅಂತಾರಾಷ್ಟ್ರೀಯ ಕ್ರೀಡಾಂಗಣವೆಂದು ಒಪ್ಪಿಕೊಳ್ಳಲಾಗುತ್ತಿಲ್ಲ. ಇನ್ನು ಒಂದು ತಿಂಗಳಲ್ಲಿ ಸೌಲಭ್ಯ ಕಲ್ಪಿಸದಿದ್ದರೆ, ಶಿಸ್ತುಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics