ಬಂಧನದ ನಂತರ ಮತ್ತೊಂದು ಪ್ರಕರಣ ಬಾಯ್ಬಿಟ್ಟ ಚೋರರು
ಇತ್ತೀಚೆಗೆ ಎಚ್‍ಎಸ್‍ಆರ್ ಲೇಔಟ್‍ನಲ್ಲಿ ಅಪಘಾತದ ನಾಟಕವಾಡಿ ಸಾಫ್ಟ್ ವೇರ್ ಎಂಜಿನಿಯರ್‍ರನ್ನು ಅಪಹರಿಸಿ ಬಳಿಕ ಬಂಧಿತರಾಗಿದ್ದ ಐವರು ಆರೋಪಿಗಳ...
ಬೆಂಗಳೂರು: ಇತ್ತೀಚೆಗೆ ಎಚ್‍ಎಸ್‍ಆರ್ ಲೇಔಟ್‍ನಲ್ಲಿ ಅಪಘಾತದ ನಾಟಕವಾಡಿ ಸಾಫ್ಟ್ ವೇರ್ ಎಂಜಿನಿಯರ್‍ರನ್ನು ಅಪಹರಿಸಿ ಬಳಿಕ ಬಂಧಿತರಾಗಿದ್ದ ಐವರು ಆರೋಪಿಗಳ ವಿಚಾರಣೆ ವೇಳೆ ಮತ್ತೊಂದು ಅಪಹರಣ ಪ್ರಕರಣ ಬಯಲಾಗಿದೆ.
ಬಂಧಿತರಾದ ನ್ಯೂ ಮೈಕೋ ಲೇಔಟ್ ನಿವಾಸಿ ಮೋಹನ್ (31), ಈಜಿಪುರ ನಿವಾಸಿ ಕವಿತನ್ (29), ಕೋರಮಂಗಲ ನಿವಾಸಿ ಸೆಂದಿಲ್‍ಕುಮಾರ್ (26), ತಮಿಳುನಾಡು ವೆಲ್ಲೂರು
ಮೂಲದ ಶಂಕರ್ (35) ಹಾಗೂ ಬೊಮ್ಮನಹಳ್ಳಿ ನಿವಾಸಿ ಫೈರೋಜ್ ಅಲಿಯಾಸ್ ಬಾಬು (33) ಬಂಧಿತರು.
ವಿಚಾರಣೆ ವೇಳೆ, ಈ ಆರೋಪಿಗಳು ಅ.20ರಂದು ಹೊಸೂರು ರಸ್ತೆ ಸಿಂಗಸಂದ್ರ ಬಳಿ ಕಾರಿನಲ್ಲಿ ಒಂಟಿಯಾಗಿ ಬರುತ್ತಿದ್ದ ವ್ಯಕ್ತಿಯನ್ನು ಆತನ ಕಾರಿನಲ್ಲಿಯೇ ಅಪಹರಿಸಿ ರು.5 ಲಕ್ಷ ದೋಚಿದ್ದು ಹಾಗೂ ಆ ವ್ಯಕ್ತಿಯ ಎಟಿಎಂ ಕಾರ್ಡ್ ಕಿತ್ತುಕೊಂಡು ರು.15 ಸಾವಿರ ಡ್ರಾ ಮಾಡಿ ಬಳಿಕ ಆತನನ್ನು ನಿರ್ಜನ ಪ್ರದೇಶದಲ್ಲಿ ಬಿಟ್ಟು ಪರಾರಿಯಾಗಿದ್ದನ್ನು ವಿವರಿಸಿದ್ದರು.