ಬೆಂಗಳೂರು: ನಗರದಲ್ಲಿ ಬುಧವಾರ ಸಂಭವಿಸಿದ ಮೂರು ಪ್ರತ್ಯೇಕ ಅಪಘಾತದಲ್ಲಿ ಚಲನಚಿತ್ರ ರೀಲ್ ವಿತರಕ ಸೇರಿ ಮೂವರು ಮೃತಪಟ್ಟಿದ್ದಾರೆ.
ಬೆಂಗಳೂರು-ಮೈಸೂರು ರಸ್ತೆ ಜ್ಞಾನಭಾರತಿ ಗೇಟ್ ಬಳಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ರಸ್ತೆ ದಾಟುತ್ತಿದ್ದ ಸೆಕ್ಯುರಿಟಿ ಗಾರ್ಡ್ ಗಜೇಂದ್ರ ಸಿಂಗ್ ಮಿಸ್ತಾ (50) ಎಂಬುವರು ಸ್ಥಳದಲ್ಲೇ
ಮೃತಪಟ್ಟಿದ್ದಾರೆ. ನೇಪಾಳ ಮೂಲದ ಗಜೇಂದ್ರ, ರಾಜರಾಜೇಶ್ವರಿನಗರದಲ್ಲಿನ ಅಪಾ ರ್ಟ್‍ಮೆಂಟ್‍ನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡಿಕೊಂಡು ಅಲ್ಲೇ ವಾಸವಾಗಿದ್ದರು.
ಪುತ್ರ ಅತ್ತಿಬೆಲೆಯಲ್ಲಿ ನೆಲೆಸಿದ್ದರು. ಬುಧವಾರ ರಾತ್ರಿ 11 ಗಂಟೆಯಲ್ಲಿ ಕೆಲಸ ನಿಮಿತ್ತ ಹೊರಬಂ ದಾಗ ಬೆಂಗಳೂರು-ಮೈಸೂರು ರಸ್ತೆ ಟಾಟಾ ಮೋಟರ್ ಬಳಿ ಘಟನೆ ನಡೆದಿದೆ. ಡಿಕ್ಕಿ ಹೊಡೆದ ಚಾಲಕ ವಾಹನ ನಿಲ್ಲಿಸದೆ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕೆಂಗೇರಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಲನಚಿತ್ರ ರೀಲ್ ವಿತರಕ ಸಾವು: ಸರ್ಜಾಪುರ ರಸ್ತೆ ಸೂಲಿಕುಂಟೆಯಲ್ಲಿ ರಸ್ತೆ ವಿಭಜಕಕ್ಕೆ ಸ್ಕಾರ್ಪಿಂಯೋ ವಾಹನ ಡಿಕ್ಕಿ ಹೊಡೆದು ಚಲನಚಿತ್ರ ರೀಲ್ ವಿತರಕ ಚಂಬೇನಹಳ್ಳಿ ನಿವಾಸಿ ಮಹೇಶ್ (25) ಮೃತಪಟ್ಟಿದ್ದಾರೆ.
ಘಟನೆಯಲ್ಲಿ ಸ್ನೇಹಿತ ಯೋಗೇಶ್‍ಗೆ ಸಣ್ಣಪುಟ್ಟ ಗಾಯಗಳಾಗಿವೆ. ಬುಧವಾರ ಅಂಬೇಡ್ಕರ್ ನಗರದಲ್ಲಿನ ಅಕ್ಕನ ಮನೆಯಿಂದ ಮಹೇಶ್ ಕಾರು ತೆಗೆದುಕೊಂಡು ಸ್ನೇಹಿತನ ಮನೆಗೆ
ಹೋಗಿದ್ದರು. ಅಲ್ಲಿಂದ ವಾಪಸಾ ಗುತ್ತಿದ್ದಾಗ ತಡರಾತ್ರಿ 2 ಗಂಟೆ ಸುಮಾರಿಗೆ ಸೂಲಿಕುಂಟೆ ಸಮೀಪ ನಿಯಂತ್ರಣ ತಪ್ಪಿದ ಕಾರು ರಸ್ತೆ ವಿಭಜಕಕ್ಕೆ ಗುದ್ದಿದೆ. ನಿದ್ರೆ ಮಂಪರಿಯಲ್ಲಿ ಅಪಘಾತ
ಸಂಭವಿಸಿರುವ ಶಂಕೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೈಕ್‍ಗೆ ಮಿನಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಖಾಸಗಿ ಕಂಪನಿ ಉದ್ಯೋಗಿ ಮಂಜುನಾಥ (28) ಎಂಬುವರು ಮೃತಪಟ್ಟಿದ್ದಾರೆ. ದೊಡ್ಡನಾಗಮಂಗಲ ನಿವಾಸಿಯಾದ ಮಂಜುನಾಥ
ಬುಧವಾರ ರಾತ್ರಿ 8.30ರ ವೇಳೆ ಕೆಲಸ ಮುಗಿಸಿ ಮನೆಗೆ ಬೈಕ್‍ನಲ್ಲಿ ತೆರಳುವಾಗ ಮೇಘನಾ ಹೋಟೆಲ್ ಎದುರು ಮಿನಿಬಸ್ ಡಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಂಡ ಮಂಜುನಾಥ ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಏರ್‍ಪೋರ್ಟ್ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.