ಕೊಲೆ ಆರೋಪ: ಬಜರಂಗ ದಳ ಕಾರ್ಯಕರ್ತ ಭುವಿತ್ ಶೆಟ್ಟಿ ಬಂಧನ
ಡಾ. ಎಂ. ಎಂ ಕಲಬುರ್ಗಿ ಅವರ ಹತ್ಯೆಯಾದ ನಂತರ ಕನ್ನಡದ ಲೇಖಕ ಫ್ರೊ. ಕೆ.ಎಸ್ ಭಗವಾನ್ ಅವರಿಗೆ ಟ್ವಿಟರ್‌ನಲ್ಲಿ ಬೆದರಿಕೆಯೊಡ್ಡಿ ಬಂಧನಕ್ಕೀಡಾಗಿದ್ದ ಬಜರಂಗ ದಳದ ಕಾರ್ಯಕರ್ತ...
ಬೆಂಗಳೂರು: ಡಾ. ಎಂ. ಎಂ ಕಲಬುರ್ಗಿ ಅವರ ಹತ್ಯೆಯಾದ ನಂತರ ಕನ್ನಡದ ಲೇಖಕ ಫ್ರೊ. ಕೆ.ಎಸ್ ಭಗವಾನ್ ಅವರಿಗೆ ಟ್ವಿಟರ್‌ನಲ್ಲಿ ಬೆದರಿಕೆಯೊಡ್ಡಿ ಬಂಧನಕ್ಕೀಡಾಗಿದ್ದ ಬಜರಂಗ ದಳದ ಕಾರ್ಯಕರ್ತ ಭುವಿತ್ ಶೆಟ್ಟಿ ಇದೀಗ ಕೊಲೆ ಆರೋಪದಡಿಯಲ್ಲಿ ಬಂಧಿತರಾಗಿದ್ದಾರೆ.
ಕಳೆದ ವಾರ ಬಂಟ್ವಾಳ ತಾಲೂಕಿನಲ್ಲಿ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ವೇಳೆ ಕೋಮುಗಲಭೆ ನಡೆದಿದ್ದು, ಅದರಲ್ಲಿ ಹರೀಶ್ ಪೂಜಾರಿ ಎಂಬಾತ ಹತ್ಯೆಗೀಡಾಗಿದ್ದನು. ಈ ಹತ್ಯೆಯ ಬಗ್ಗೆ ತನಿಖೆ ನಡೆಸಿದಾಗ ಭುವಿತ್ ಶೆಟ್ಟಿ ಮತ್ತು ಆತನ ಸ್ನೇಹಿತ ಹರೀಶ್ ಪೂಜಾರಿಯ ಹಂತಕರೆಂದು ತಿಳಿದುಬಂದಿದೆ.
ಬೇರೆ ಯಾರಿಗೋ ಇರಿಯಲು ಹೋಗಿ ಭುವಿತ್ ಮತ್ತು ಆತನ ಗೆಳೆಯ ಹರೀಶ್ ಪೂಜಾರಿಗೇ ಇರಿದಿದ್ದಾರೆ ಎಂದು ಪೊಲೀಸರು ಹೇಳಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.