ನಾಯಕ ಹತ್ಯೆ ತನಿಖೆಗೆ ತಿರುವು
ಅದಿರು ಉದ್ಯಮಿ ಆರ್.ಎನ್. ನಾಯಕ ಹತ್ಯೆ ಪ್ರಕರಣ ಹೊಸ ತಿರುವು ಪಡೆಯುತ್ತಿದೆ. ನಾಯಕ ಅವರ...
ಅಂಕೋಲಾ: ಅದಿರು ಉದ್ಯಮಿ ಆರ್.ಎನ್. ನಾಯಕ ಹತ್ಯೆ ಪ್ರಕರಣ ಹೊಸ ತಿರುವು ಪಡೆಯುತ್ತಿದೆ. ನಾಯಕ ಅವರ ಚಲನವಲನದ ಸಂಪೂರ್ಣ ಮಾಹಿತಿ ನೀಡಿದ ಬಲವಾದ ಸಂಶಯದ ಮೇಲೆ ಗೋಕರ್ಣದ ಹನೇಹಳ್ಳಿಯ ವ್ಯಕ್ತಿಯೊಬ್ಬನನ್ನು ಪೊಲೀಸರು ವಶಕ್ಕೆ ಪಡೆದು, ವಿಚಾರಣೆಗಾಗಿ ಮಂಗಳೂರಿಗೆ ಕರೆದೊಯ್ದಿದ್ದಾರೆ.
ಅಂಕೋಲಾ ಬಸ್ ನಿಲ್ದಾಣದ ಎದುರಿನ ಮುಖ್ಯ ರಸ್ತೆಯಲ್ಲೇ 2013ರ ಡಿ. 21ರಂದು ನಾಯಕ ಹತ್ಯೆಯಾಗಿತ್ತು. ಪ್ರಕರಣದ 9ನೇ ಆರೋಪಿ ಬನ್ನಂಜೆ ರಾಜಾ ಬಂಧನದ ಮೂಲಕ ಈ ಪ್ರಕರಣಕ್ಕೆ ಮರುಜೀವ ಬಂದಿತ್ತು. ಬನ್ನಂಜೆ ರಾಜಾ ವಿಚಾರಣೆ ವೇಳೆ ನೀಡಿದ ಸುಳಿವು ಆಧರಿಸಿ, ಹನೇಹಳ್ಳಿಯ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಹತ್ಯೆಯಲ್ಲಿ ಸ್ಥಳೀಯರ ಕೈವಾಡ ಇರುವುದು ಬಯಲಾಗಿದೆ.
ಬನ್ನಂಜೆಯಿಂದ ದೂರು: ``ರಾಜ್ಯದಲ್ಲಿ 64 ಪ್ರಕರಣದಲ್ಲಿ ಭಾಗಿಯಾಗಿದ್ದ ತನ್ನನ್ನು ಆಫ್ರಿಕಾದ ಮೊರೊಕ್ಕೊದಿಂದ ಭಾರತಕ್ಕೆ ತರುವಾಗ ಐಜಿಪಿ ಪ್ರತಾಪ್ ರೆಡ್ಡಿ ನೇತೃತ್ವದ ತಂಡ 15 ಪ್ರಕರಣಗಳಿಗೆಸಂಬಂಧಿಸಿ ಮಾತ್ರ ವಿಚಾರಣೆ ಮಾಡುವುದಾಗಿ ಮೊರೊಕ್ಕೊ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿತ್ತು.
ಪ್ರಮುಖವಾಗಿ ಅಂಕೋಲಾ ಆರ್. ನಾಯಕ ಹತ್ಯೆ ಪ್ರಕರಣ, ಶಿವಮೊಗ್ಗದ ಅಡಕೆ ಮಂಡಿ ಮಾಲೀಕ ಓಂಕಾರಪ್ಪ ಹತ್ಯೆಗೆ ಶಾರ್ಪ್‍ಶೂಟರ್ ಕಳುಹಿಸಿದ್ದು, ಹಫ್ತಾ ನೀಡುವಂತೆ ಉಡುಪಿಯ ಉದ್ಯಮಿಗೆ ಜೀವ ಬೆದರಿಕೆ, ಬೆಂಗಳೂರಿನ 4 ಹಾಗೂ ಮಂಗಳೂರಿನ ಆರು ಪ್ರಕರಣಗಳು ಇದರಲ್ಲಿ ಸೇರಿದ್ದವು.