ಬಳ್ಳಾರಿ: ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ, ಅತ್ಯಾಚಾರವೆಸಗಿ ಮದುವೆಗೆ ನಿರಾಕರಿಸಿದ ಎಂಜಿನಿಯರಿಂಗ್ ಪದವೀಧರನೊಬ್ಬ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಸ್ಥಳೀಯ ಹನುಮಾನ್ ನಗರದ ನಿವಾಸಿ ಎಂಜಿನೀಯರಿಂಗ್ ಪದವೀಧರ ರಾಜೇಶ್ (26) ಖಾಸಗಿ ಕಂಪನಿಯೊಂದರ ಉದ್ಯೋಗಿಯಾಗಿದ್ದು, ಮೂರು ವರ್ಷಗಳಿಂದ ಸ್ಥಳೀಯ ಕಾಕರ್ಲತೋಟದ ಯುವತಿಯನ್ನು ಪ್ರೀತಿಸುತ್ತಿದ್ದ. ಮದುವೆಯಾಗುವುದಾಗಿ ನಂಬಿಸಿದ್ದ ಈತ, ಅತ್ಯಾಚಾರವೆಸಗಿದ್ದು, ಈಗ ಮದುವೆಗೆ ನಿರಾಕರಿಸಿದ್ದಾನೆ. ವಂಚನೆಗೊಳಗಾದ ಯುವತಿ ರಾಜೇಶ್ ವಿರುದ್ಧ ನೀಡಿರುವ ದೂರಿನ ಮೇರೆಗೆ ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.