ಸಾಂದರ್ಭಿಕ ಚಿತ್ರ 
ಜಿಲ್ಲಾ ಸುದ್ದಿ

ಹೆತ್ತಮ್ಮನ ಎದುರಲ್ಲೇ ನಡುರಸ್ತೆಯಲ್ಲಿ ಕೊಲೆ

ಹಣಕಾಸು ವ್ಯವಹಾರದಲ್ಲಿ ಉಂಟಾದ ಜಗಳದ ಹಿನ್ನೆಲೆಯಲ್ಲಿ ಹಳೇ ಕಳ್ಳನನ್ನು ಸೋದರ ಮಾವನ ಕಡೆಯವರು ಆತನ ತಾಯಿ ಎದುರೇ ಮಾರಕಾಸ್ತ್ರಗಳಿಂದ...

ಬೆಂಗಳೂರು: ಹಣಕಾಸು ವ್ಯವಹಾರದಲ್ಲಿ ಉಂಟಾದ ಜಗಳದ ಹಿನ್ನೆಲೆಯಲ್ಲಿ ಹಳೇ ಕಳ್ಳನನ್ನು   ಸೋದರ ಮಾವನ ಕಡೆಯವರು ಆತನ ತಾಯಿ ಎದುರೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ  ಮಾಡಿರುವ ಘಟನೆ ಸದ್ದುಗುಂಟೆಪಾಳ್ಯ ಸಮೀಪದ ಬೋವಿ ಕಾಲೊನಿಯಲ್ಲಿ ಶನಿವಾರ ಮಧ್ಯಾಹ್ನ  ನಡೆದಿದೆ.

20ಕ್ಕೂ ಅಧಿಕ ಮನೆ ಕಳ್ಳತನ, ಸರ ಅಪಹರಣ ಪ್ರಕರಣಗಳಲ್ಲಿ ಭಾಗಿಯಾಗಿರುವ ದಿಲೀಪ್  ಕುಮಾರ್ ಅಲಿಯಾಸ್ ಕುಳ್ಳ ದೀಪು (25) ಕೊಲೆಯಾದವ.

ಅನಾರೋಗ್ಯದಿಂದ ಬಳಲುತ್ತಿದ್ದ ದಿಲೀಪ್, ಶನಿವಾರ ಮಧ್ಯಾಹ್ನ 3.15ರ ಸುಮಾರಿಗೆ ತಾಯಿ  ಕರಮ್ಮನ ಜತೆ ಆಸ್ಪತ್ರೆಗೆ ತೆರಳುತ್ತಿದ್ದಾಗ ಕಾರಿನಲ್ಲಿ ಬಂದ 6 ಮಂದಿಯ ತಂಡ ಅಡ್ಡಗಟ್ಟಿ ತಾಯಿ  ಎದುರೇ ಮಗನನ್ನು ಕೊಚ್ಚಿ ಕೊಲೆ ಮಾಡಿದೆ. ಪ್ರಕರಣ ಸಂಬಂಧ ದಿಲೀಪ್ ಸೋದರ  ಮಾವನ ಕಡೆಯವರಾದ ಮೂವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಅಧಿಕಾರಿ  ತಿಳಿಸಿದ್ದಾರೆ.

ಪ್ರಕರಣದ ವಿವರ: ರಾಜು ಮತ್ತು ಶಂಕರಮ್ಮ ದಂಪತಿಯ ಪುತ್ರ ದಿಲೀಪ್, 2 ವರ್ಷಗಳ ಹಿಂದೆ  ಟ್ರಾವೆಲ್ಸ್ ಆರಂಭಿಸಲು ಸೋದರ ಮಾವನ ಬಳಿ 2 ಲಕ್ಷ ರೂಪಾಯಿ ಸಾಲ ಪಡೆದುಕೊಂಡಿದ್ದ.  ತಂದೆ ಮಗ ಇಬ್ಬರೂ ಟ್ರಾವೆಲ್ಸ್ ನಡೆಸುತ್ತಿದ್ದು, ತಾಯಿ ಸೇಂಟ್ ಜಾನ್ ಆಸ್ಪತ್ರೆಯಲ್ಲಿ ಗುಮಾಸ್ತೆ.  ವ್ಯವಹಾರದಲ್ಲಿ ನಷ್ಟ ಉಂಟಾಗಿ ಸಾಲವನ್ನು ಸೂಕ್ತ ಸಮಯಕ್ಕೆ ವಾಪಸ್ ಕೊಡುವುದಕ್ಕೆ  ಸಾಧ್ಯವಾಗಿರಲಿಲ್ಲ. ಈ ವಿಚಾರವಾಗಿ ಎರಡೂ ಕುಟುಂಬದವರ ನಡುವೆ ಜಗಳ ವಿಕೋಪಕ್ಕೆ ತಿರುಗಿ   ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಅಂತಿಮವಾಗಿ ಡಿ.20 ರ ಒಳಗೆ 2 ಲಕ್ಷ ರೂಪಾಯಿ ವಾಪಸ್  ಕೊಡುವಂತೆ  ಸಂಧಾನ ನಡೆದಿತ್ತು. ಆದರೂ, ಎರಡು ಗುಂಪಿನ ನಡುವೆ ಕಿತ್ತಾಟ ನಿಂತಿರಲಿಲ್ಲ.  

ಬೀದಿಯಲ್ಲಿ ಕೊಲೆ: ದಿಲೀಪ್ ಕಾಮಾಲೆ ರೋಗದಿಂದ ಬಳಲುತ್ತಿದ್ದು, ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ತಾಯಿ ಚಿಕಿತ್ಸೆ ಕೊಡಿಸುತ್ತಿದ್ದರು. ಶನಿವಾರ ಮಧ್ಯಾಹ್ನ ಮಗನ ಆರೋಗ್ಯ ತಪಾಸಣೆಗಾಗಿ ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ಟಾಟಾ   ದಲ್ಲಿ   ಬಂದ ಸೋದರ ಮಾವನ ಮಕ್ಕಳು ಮತ್ತು ಅವರ ಸಹಚರರು ಹಣಕಾಸಿನ ವಿಚಾರವಾಗಿ  ಜಗಳ ತೆಗೆದಿದ್ದಾರೆ.  ಕೂಡಲೇ ಶಂಕರಮ್ಮ, ಪೊಲೀಸ್ ಕಾನ್ಸ್ಟೇಬಲ್ ಒಬ್ಬರಿಗೆ ಕರೆ ಮಾಡಿ  ವಿಷಯ  ತಿಳಿಸಿದ್ದರು. ಕರೆ ಮಾಡುವಾಗಲೇ ಶಂಕರಮ್ಮನನ್ನು ಟಾಟಾ ಸುಮೋ ಕಾರಿನಲ್ಲಿ ಕೂಡಿ ಹಾಕಿ ನಡುರಸ್ತೆಯಲ್ಲಿ ದಿಲೀಪ್‍ನನ್ನು ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ  ಪರಾರಿಯಾಗಿದ್ದಾರೆ. ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!