ಜಿಲ್ಲಾ ಸುದ್ದಿ

ಹೆಗ್ಗಡೆ ಕುಟುಂಬದ ವಿರುದ್ಧ 'ಧರ್ಮ ಸೂಕ್ಷ್ಮ' ಆರೋಪ

Srinivas Rao BV

ಮಂಗಳೂರು: ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬದವರು ನಡೆಸಿರುವ ಕಾನೂನು ಬಾಹಿರ ಕೃತ್ಯಗಳು ಮತ್ತು ಅವ್ಯವಹಾರಗಳ ಕುರಿತು ಮಾಹಿತಿ ಹಕ್ಕು ಕಾಯಿದೆಯಡಿ ಅಧಿಕೃತವಾದ ದಾಖಲೆಗಳನ್ನು ಕ್ರೋಡೀಕರಿಸಿ 'ಧರ್ಮ ಸೂಕ್ಷ್ಮ' ಎಂಬ ಪುಸ್ತಕ ಹೊರತಂದಿದ್ದೇವೆ ಎಂದು ಗುರುವಾಯನಕೆರೆಯ ನಾಗರಿಕ ಸೇವಾ ಟ್ರಸ್ಟ್ ಅಧ್ಯಕ್ಷ ಕೆ. ಸೋಮನಾಥ ನಾಯಕ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ದೇವಾಲಯವು ಖಾಸಗಿ ದೇವಾಲಯ ಎಂಬುದಾಗಿ ಹೆಗ್ಗಡೆಯವರು ಹೇಳುತ್ತಾರೆ. ಆದರೆ, ಆದಾಯ ತೆರಿಗೆ ಪಾವತಿಸುವ ಸಂದರ್ಭದಲ್ಲಿ ದೇವಾಲಯ ಸಾರ್ವಜನಿಕ ದೇವಾಲಯ ಎಂಬುದಾಗಿ ತಿಳಿಸ್, ಸರ್ಕಾರಕ್ಕೆ ಸಲ್ಲಬೇಕಾದ ಆದಾಯ ತೆರಿಗೆಯನ್ನು ವಂಚಿಸಿದ್ದಾರೆ. ಅಲ್ಲದೇ ವೀರೇಂದ್ರ ಹೆಗ್ಗಡೆ ಅವರ ಕುಟುಂಬ ಹಾಗೂ ಸಹೋದರ ಹಹರ್ಷೇಂದ್ರ ಕುಮಾರ್ ಅನೇಕ ಅವ್ಯವಹಾರ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

SCROLL FOR NEXT