ಸಾಂಕೇತಿಕ ಚಿತ್ರ 
ಜಿಲ್ಲಾ ಸುದ್ದಿ

ಗಂಡನನ್ನು ಹುಡುಕಿ ಕೊಡಿ

ಚಾಲಕ ಹುದ್ದೆಗಾಗಿ ಸಾರಿಗೆ ಇಲಾಖೆ ಅಧಿಕಾರಿಗಳು ಲಂಚಕ್ಕೆ ಸತಾಯಿಸುತ್ತಿರು ರುವುದರಿಂದ ಆತ್ಮಹತ್ಯೆ ಪತ್ರ ಬರೆದಿಟ್ಟು...

ಬೆಂಗಳೂರು:  ಚಾಲಕ ಹುದ್ದೆಗಾಗಿ ಸಾರಿಗೆ ಇಲಾಖೆ ಅಧಿಕಾರಿಗಳು ಲಂಚಕ್ಕೆ ಸತಾಯಿಸುತ್ತಿರು ರುವುದರಿಂದ ಆತ್ಮಹತ್ಯೆ ಪತ್ರ ಬರೆದಿಟ್ಟು ಮನೆಯಿಂದ ನಾಪತ್ತೆಯಾಗಿರುವ
ಪತಿಯನ್ನು ಹುಡುಕಿಕೊಡಬೇಕೆಂದು ಮಹಿಳೆಯೊಬ್ಬರು ನಗರ ಪೊಲೀಸ್ ಆಯುಕ್ತರ ಕಚೇರಿಗೆ ಮನವಿ ಸಲ್ಲಿಸಿದ್ದಾರೆ. ಜಯಲಕ್ಷ್ಮಿ ಎಂಬುವವರೆ ಮನವಿ ಮಾಡಿದ ಮಹಿಳೆ. ಮೂಲತಃ ಮಂಡ್ಯ ಜಿಲ್ಲೆ ಮಳವಳ್ಳಿ ಗ್ರಾಮದ ಶ್ರೀರಾಮ 1995ರಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮೈಸೂರು ಘಟಕದಲ್ಲಿ ತಾತ್ಕಾಲಿಕ ಚಾಲಕ ಹುದ್ದೆಗೆ ಸೇರಿದ್ದರು. ಕಳೆದ 19 ವರ್ಷಗಳಿಂದ ಚಾಲಕನಾಗಿ ಪೂರ್ಣ ಪ್ರಮಾಣದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈ ನಡುವೆ 40 ಮಂದಿ ತಾತ್ಕಾಲಿಕ ಚಾಲಕರು 2003ರಲ್ಲಿ ಹುದ್ದೆ ಖಾಯಂಗೆ ಅರ್ಜಿಸಲ್ಲಿಸಿದ್ದರು. ಈ ವೇಳೆ ಸಾರಿಗೆ ಅ„ಕಾರಿಗಳು 20 ಸಾವಿರ ಲಂಚ ಕೇಳಿದ್ದರು. ಪತಿ ಬಡವನಾಗಿದ್ದರಿಂದ ಲಂಚ ನೀಡಲು ಸಾಧ್ಯವಾಗಿರಲಿಲ್ಲ. ಲಂಚ ನೀಡಲಿಲ್ಲ ಎಂಬ ಕಾರಣಕ್ಕೆ ವರ್ಗಾವಣೆ ಪತ್ರ(ಟಿಸಿ)ದಲ್ಲಿವಲೋಪವಿದೆ ಎಂದು ಹೇಳಿ ಹುದ್ದೆ ಖಾಯಂಮಾತಿಗೆ ನಿರಾಕರಿಸಿದ್ದರು. ಆಗ 40 ಮಂದಿ ಪೈಕಿ 39 ಮಂದಿಗೆ ಹುದ್ದೆ ಖಾಯಂ ಆಗಿದ್ದು, ಪತಿ ಶ್ರೀರಾಮಗೆ ಆಗಲಿಲ್ಲ. ನಂತರ ಬಳಿಕ ಸಾರ್ವಜನಿಕ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಲೋಪ ರಹಿತ ಟಿಸಿ ತಂದರೂ ಅಧಿಕಾರಿಗಳು ಖಾಯಂ ಮಾಡದೆ ಸತಾಯಿಸುತ್ತಿದ್ದಾರೆ ಎಂದು ಮನವಿಯಲ್ಲಿ ಆರೋಪಿಸಿದ್ದಾರೆ. ಪತಿಯನ್ನು ಹುಡುಕಿಕೊಡಬೇಕು ಮತ್ತು ನ.30ರೊಳಗೆ ಅವರ ಹುದ್ದೆ ಖಾಯಂ ಮಾಡಬೇಕು. ಇಲ್ಲದಿದ್ದರೆ ಸಾರಿಗೆ ಇಲಾಖೆ ಕಚೇರಿ ಎದುರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮಹಿಳೆ ಎಚ್ಚರಿಸಿದ್ದಾಳೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

ಮತ ಬೇಟೆ ತಡೆಯಲು 'ಕೈ' ಕಲಿಗಳ ಮಾಸ್ಟರ್ ಪ್ಲ್ಯಾನ್: ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಮಹತ್ವದ ಸಭೆ, ಬೂತ್ ಮಟ್ಟದಲ್ಲಿ ಸಮರಕ್ಕೆ ಸಜ್ಜು..!

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ

ಕೋಟಿ ಕೋಟಿ ಲೂಟಿ: ಅರಣ್ಯ ಇಲಾಖೆ ಮಾಜಿ ಅಧಿಕಾರಿಗೆ ಕೋರ್ಟ್ ಶಾಕ್; ಬರೋಬ್ಬರಿ 1.38 ಕೋಟಿ ದಂಡ, 3 ವರ್ಷ ಜೈಲು ಶಿಕ್ಷೆ..!