ಸಾಂದರ್ಭಿಕ ಚಿತ್ರ 
ಜಿಲ್ಲಾ ಸುದ್ದಿ

ಸಾರಿಗೆ ವಾಹನಗಳಿಗೆ ಇನ್ನು ಸ್ಪೀಡ್ ಗವರ್ನರ್ ಕಡ್ಡಾಯ: ಕೇಂದ್ರ, ರಾಜ್ಯ ಸರ್ಕಾರಗಳಿಗೆ ನೋಟಿಸ್ ಜಾರಿ

ನ್ಯಾಯಾಲಯದ ಆದೇಶದ ಮೇರೆಗೆ ಅರ್ಹತಾ ಪತ್ರ ನವೀಕರಣಕ್ಕೆ ಹಾಜರುಪಡಿಸುವ ಹಾಗೂ ಈಗಾಗಲೇ ನೋಂದಾಯಿತವಾದ ಎಲ್ಲ ಸಾರಿಗೆ ವಾಹನಗಳಿಗೆ ...

ಬೆಂಗಳೂರು: ನ್ಯಾಯಾಲಯದ ಆದೇಶದ ಮೇರೆಗೆ ಅರ್ಹತಾ ಪತ್ರ ನವೀಕರಣಕ್ಕೆ ಹಾಜರುಪಡಿಸುವ ಹಾಗೂ ಈಗಾಗಲೇ ನೋಂದಾಯಿತವಾದ ಎಲ್ಲ ಸಾರಿಗೆ ವಾಹನಗಳಿಗೆ ಕಡ್ಡಾಯವಾಗಿ ಸ್ಪೀಡ್ ಗವರ್ನರ್ ಅಳವಡಿಸುವಂತೆ ರಾಜ್ಯ ಪ್ರಾದೇಶಿಕ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಸಂಸ್ಥೆ ಆದೇಶಿಸಿದೆ.

ಮುಂಬರುವ 2016ರ ಏಪ್ರಿಲ್ 1ರೊಳಗೆ ಎಲ್ಲ ಸಾರಿಗೆ ವಾಹನಗಳು ಸ್ಪೀಡ್ ಗೌರ್ನರ್ ಅನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು. ಇಲ್ಲವಾದಲ್ಲಿ ಅಂತಹ ಚಾಲಕರಿಗೆ ದಂಡ ವಿಧಿಸಲಾಗುವುದು ಎಂದು ಹೇಳುವ ಮೂಲಕ ಸ್ಪೀಡ್ ಗೌರ್ನರ್ ಅಳವಡಿಕೆ ವಿರೋಧಿಸಿ, ಮುಷ್ಕರಕ್ಕೆ ಮುಂದಾಗಿರುವವರಿಗೆ ಮತ್ತೊಮ್ಮೆ ಎಚ್ಚರಿಕೆ ನೀಡಿದೆ.

ರೋಸ್‍ಮಾರ್ಟ್ ಆಟೋಟೆಕ್ ಮತ್ತು ಪ್ರಿಕಾಲ ಎಂಬ ಸಂಸ್ಥೆಗಳಿಗೆ ಸ್ಪೀಡ್ ಗವರ್ನರ್ ಅಳವಡಿಕೆಗೆ ಸರ್ಕಾರ ಅನುಮತಿ ನೀಡಿದೆ. ಸರ್ಕಾರದ ನಿಬಂಧನೆಗೊಳಪಟ್ಟ ಈ ಎರಡು ಸ್ಪೀಡ್ ಗವರ್ನರ್ ತಯಾರಿಕಾ ಕಂಪೆನಿಗಳಿಂದ ಮಾತ್ರ ಯಂತ್ರ ಅಳವಡಿಸಿಕೊಳ್ಳಬೇಕು. ಆ ವಾಹನಗಳ ವೇಗ ಮಿತಿ ಪ್ರತಿ ಗಂಟೆಗೆ ಗರಿಷ್ಠ 80 ಕಿ.ಮೀ. ವೇಗಮಿತಿಗೆ ಒಳಪಡಬೇಕು. ಅಂತಹ ಮಾಪನಗಳುಳ್ಳ ವೇಗ ನಿಯಂತ್ರಕ ಉಪಕರಣ ಅಳವಡಿಸಬೇಕು. ಪ್ರಮುಖವಾಗಿ ಅಪಾಯಕಾರಿ ಸರಕು ಸಾಗಣೆ ಮಾಡುವ ಸಾರಿಗೆ ವಾಹನ, ಟ್ಯಾಂಕರ್ಸ್, ಡಂಪರ್ಸ್ ಮತ್ತು ಶಾಲಾ ವಾಹನಗಳಿಗೆ ಪ್ರತಿ ಗಂಟೆಗೆ ಗರಿಷ್ಠ 60 ಕಿ.ಮೀ. ವೇಗಮಿತಿಗೆ ಒಳಪಡುವಂತೆ ಸ್ಪೀಡ್ ಗವರ್ನರ್ ಅನ್ನು ಅಳವಡಿಸುವಂತೆ ಆದೇಶಿಸಿದೆ.

ಸಣ್ಣ ಪ್ರಮಾಣದ ಸರಕು ಮತ್ತು ಸಾರಿಗೆ ವಾಹನಗಳಿಗೆ ಸ್ಪೀಡ್ ಗವರ್ನರ್ ಅಳವಡಿಕೆ ಕಡ್ಡಾಯ ಕ್ರಮ ಕೈ ಬಿಟ್ಟಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ಕುರಿತಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ವೈ.ಎನ್. ನಂಜಪ್ಪ ಎಂಬುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹಂಗಾಮಿ ವಿಭಾಗೀಯ ಪೀಠ, ಕೇಂದ್ರ, ರಾಜ್ಯ ಸರ್ಕಾರಗಳಿಗೆ ನೋಟೀಸ್ ಜಾರಿ ಮಾಡಿ ವಿಚಾರಣೆ ಮುಂದೂಡಿದೆ. ಕನಿಷ್ಠ 3.5 ಟನ್‍ಗಿಂತ ಕಡಿಮೆ ತೂಕವಿರುವ ವಾಹನಗಳು ಮತ್ತು ಚಾಲಕ ಸೇರಿದಂತೆ 9 ಜನರನ್ನು ಕೊಂಡೊಯ್ಯುವ ವಾಹನಗಳು ಸಹ ಅಪಘಾತಗಳಿಗೆ ಕಾರಣವಾಗುತ್ತಿವೆ. ಆದ ಕಾರಣ ವಾಹನಗಳಿಗೆ ಸ್ಪೀಡ್ ಗವರ್ನರ್ ಅಳವಡಿಕೆ ಮಾಡುವಂತೆ ಸೂಚಿಸಬೇಕು ಎಂದು ಅರ್ಜಿದಾರರ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!