ಮೊಬೈಲ್ ಫೋನ್ 
ಜಿಲ್ಲಾ ಸುದ್ದಿ

ಮೊಬೈಲ್‍ನಲ್ಲಿ ಮಾತನಾಡಲು ಹೋಗಿ ರು. 5 ಲಕ್ಷ ಕಳಕೊಂಡ!

ದ್ವಿಚಕ್ರ ವಾಹನದ ಯುವಿಟಿಲಿ ಬಾಕ್ಸ್(ಡಿಕ್ಕಿ) ಮುರಿದ ಕಳ್ಳರು ರು. 5 ಲಕ್ಷ ಕದ್ದು ಪರಾರಿಯಾಗಿರುವ ಘಟನೆ ಕೊತ್ತನೂರು ದಿಣ್ಣೆ ಮುಖ್ಯ ರಸ್ತೆಯಲ್ಲಿ ಶುಕ್ರವಾರ ನಡೆದಿದೆ...

ಬೆಂಗಳೂರು: ದ್ವಿಚಕ್ರ ವಾಹನದ ಯುವಿಟಿಲಿ ಬಾಕ್ಸ್(ಡಿಕ್ಕಿ) ಮುರಿದ ಕಳ್ಳರು ರು. 5 ಲಕ್ಷ ಕದ್ದು ಪರಾರಿಯಾಗಿರುವ ಘಟನೆ ಕೊತ್ತನೂರು ದಿಣ್ಣೆ ಮುಖ್ಯ ರಸ್ತೆಯಲ್ಲಿ ಶುಕ್ರವಾರ ನಡೆದಿದೆ.
ನಾಯಂಡಹಳ್ಳಿ ನಿವಾಸಿ ಲೋಹಿತ್ ಹಣ ಕಳೆದುಕೊಂಡವರು. ಬೇಕರಿ ನಡೆಸುತ್ತಿರುವ ಅವರು ಹಾಲು ಮಾರಾಟ ಏಜೆಂಟ್ ಕೂಡ ಆಗಿದ್ದಾರೆ. ಗುರುವಾರ ಮಧ್ಯಾಹ್ನ 12.30 ರ ಸುಮಾರಿನಲ್ಲಿ ಕೊತ್ತನೂರು ದಿಣ್ಣೆ ಮುಖ್ಯ ರಸ್ತೆಯಲ್ಲಿರುವ ಕರ್ನಾಟಕ ಬ್ಯಾಂಕ್‍ನಿಂದ ರು. 5 ಲಕ್ಷ ಡ್ರಾ ಮಾಡಿಕೊಂಡಿದ್ದರು. ಸೈಟ್ ಅಗ್ರಿ ಮೆಂಟ್ ವಿಚಾರವಾಗಿ ಲೋಹಿತ್, ಹಣ ಡ್ರಾ ಮಾಡಿ ಕವರ್‍ನಲ್ಲಿಟ್ಟು ಅದನ್ನು ದ್ವಿಚಕ್ರ ವಾಹನದ ಡಿಕ್ಕಿಯಲ್ಲಿಟ್ಟಿದ್ದರು. ಅದೇ ವೇಳೆ ಅವರ ಮೊಬೈಲ್ ಗೆ ಕರೆಯೊಂದು ಬಂದ ಕಾರಣ ಕರೆ ಸ್ವೀಕರಿಸಿ ಮಾತನಾಡಿಕೊಂಡು ಹಾಗೇ ಕೆಲವು ಹೆಜ್ಜೆ ಮುಂದಕ್ಕೆ ಹೋಗಿದ್ದಾರೆ. ಇದೇ ಸಮಯದಲ್ಲಿ ತಮ್ಮ ಕೈಚಳಕ ತೋರಿರುವ ಕಳ್ಳರು ಡಿಕ್ಕಿ ಮುರಿದು ಹಣ ಕದ್ದು ಪರಾರಿಯಾಗಿದ್ದಾರೆ.
ಫೋನ್‍ನಲ್ಲಿ ಮಾತನಾಡುವುದು ಮುಗಿದ ಬಳಿಕ ಬೈಕ್ ಹತ್ತಿರ ಬಂದ ಲೋಹಿತ್, ಡಿಕ್ಕಿ ಮುರಿದಿರುವುದು ಕಂಡಿದೆ. ಜತೆಗೆ ಅದರಲ್ಲಿ ಹಣ ಕೂಡ ಇರಲಿಲ್ಲ. ಕೂಡಲೇ ಸೆಕ್ಯುರಿಟಿ ಗಾರ್ಡ್ ಗೆ ಮಾಹಿತಿ ನೀಡಿದ್ದಾರೆ. ಬಳಿಕ ಇಬ್ಬರು ಸೇರಿ ಸುತ್ತಮುತ್ತ ಹುಡುಕಾಟ ನಡೆಸಿದ್ದು, ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಿಲ್ಲ. ಪ್ರಕರಣ ದಾಖಲಿಸಿಕೊಂಡ ಹುಳಿಮಾವು ಪೊಲೀಸರು ಬ್ಯಾಂಕ್ ನಲ್ಲಿರುವ ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿದ್ದಾರೆ. ಲೋಹಿತ್ ಅವರು ಹಣ ಡ್ರಾ ಮಾಡಿಕೊಂಡು ಹೊರಗೆ ಬಂದಿರುವ ಎಲ್ಲಾ ಚಲನವಲನ ಗಮನಿಸಿರುವವರೇ ಕೃತ್ಯ ಎಸಗಿರಬಹುದು ಎನ್ನುವ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸತತ 3ನೇ ದಿನ SIR ವಿರುದ್ಧ ಪ್ರತಿಭಟನೆ: ರಾಜ್ ಘಾಟ್ ನತ್ತ ಇಂಡಿಯಾ ಬ್ಲಾಕ್ ಸಂಸದರ ಮೆರವಣಿಗೆ!

ಫ್ರೀಡಂ ಪಾರ್ಕ್‌ನಲ್ಲಿ CJP ಪ್ರತಿಭಟನೆ: ಜ್ಞಾನೇಶ್ ಹೋದರೆ ಅಜ್ಞಾನೇಶ್ ಬರುತ್ತಾನೆ; ಮೊದಲು SIR ರದ್ದುಗೊಳಿಸಿ - ಪ್ರಕಾಶ್ ರಾಜ್

ರಮೇಶ್ ಜಾರಕಿಹೊಳಿಗೆ ಸ್ಟಿಂಗ್ ಮಾಡಿದ್ದು ಯಾರು? ಒಬ್ಬ CM ಇಂಥಾ ಕೀಳು ಮಟ್ಟಕ್ಕೆ ಇಳಿಯಬಾರದಿತ್ತು: ಛಲವಾದಿ ನಾರಾಯಣಸ್ವಾಮಿ

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ.ಕೆ ಶಿವಕುಮಾರ್ ಸ್ಫೋಟಕ ಆರೋಪ; Video

Indian Stock Market ಮತ್ತೆ ಭಾರಿ ಕುಸಿತ; ಸೆನ್ಸೆಕ್ಸ್ 1,045 ಅಂಕ ಕುಸಿತ, 10 ಲಕ್ಷ ಕೋಟಿ ರೂ ನಷ್ಟ!