ಕಳೆದ ವರ್ಷ ಗಾಂಧಿ ಜಯಂತಿಯಂದು ದೆಹಲಿಯಲ್ಲಿ ಸ್ವಚ್ಛ ಭಾರತ ಅಭಿಯಾನಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಿದ್ದ ದೃಶ್ಯ 
ಜಿಲ್ಲಾ ಸುದ್ದಿ

ಸ್ವಚ್ಛ ಭಾರತಕ್ಕೆ 1 ವರ್ಷ: ಸ್ವಚ್ಛವಾಗಿದೆಯೇ ಬೆಂಗಳೂರು?

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಸ್ವಚ್ಛ ಭಾರತ...

ಬೆಂಗಳೂರು: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಸ್ವಚ್ಛ ಭಾರತ ಅಭಿಯಾನ ಆರಂಭಗೊಂಡು ಇಂದಿಗೆ ಭರ್ತಿ ಒಂದು ವರ್ಷ.

ಕಳೆದ ವರ್ಷ ಅಕ್ಟೋಬರ್ 2 ಗಾಂಧಿ ಜಯಂತಿಯ ಇದೇ ದಿನದಂದು ನರೇಂದ್ರ ಮೋದಿಯವರೇ ರಾಜಧಾನಿ ದೆಹಲಿಯಲ್ಲಿ ಯೋಜನೆಗೆ ಚಾಲನೆ ನೀಡಿದ್ದರು. ಆ ನಂತರ ಇದಕ್ಕೆ ಸಿಕ್ಕಿದ ಪ್ರಚಾರ, ಪರ-ವಿರೋಧ ಪ್ರತಿಕ್ರಿಯೆಗಳು ಸಾಕಷ್ಟು. ಒಂದು ವರ್ಷ ಕಳೆದ ನಂತರ ಯೋಜನೆ ಒಂದು ಘಟ್ಟಕ್ಕೆ ಬಂದು ನಿಂತಿರುತ್ತದೆ ಎಂಬ ನಂಬಿಕೆಯಿಂದ ಇದೀಗ ಅನೇಕರು ಅವಲೋಕನ ಮಾಡುತ್ತಿದ್ದಾರೆ. ಎಷ್ಟರ ಮಟ್ಟಿಗೆ ಪ್ರಗತಿಯಾಗಿದೆ? ಯೋಜನೆ ಅಂದುಕೊಂಡ ಮಟ್ಟದಲ್ಲಿ ಸಾಗುತ್ತಿದ್ದೆಯೇ ಇತ್ಯಾದಿ.

ಕರ್ನಾಟಕದ ರಾಜಧಾನಿ ಬೆಂಗಳೂರಿನ ಬಹುತೇಕ ನಾಗರಿಕರ ಅಭಿಪ್ರಾಯ ಸ್ವಚ್ಛತೆ ಕಾಣುವುದಿಲ್ಲ ಎಂದು. ಬೆಂಗಳೂರು ನಗರದ ಕೆ.ಆರ್.ಮಾರುಕಟ್ಟೆ ಸದಾ ಜನರಿಂದ ಗಿಜಿಗಿಡುವ ಸ್ಥಳ, ಜನರ ಓಡಾಟವೂ ಹೆಚ್ಚು. ಕೆ.ಆರ್.ಮಾರುಕಟ್ಟೆ ವ್ಯಾಪಾರಿಗಳ ಒಕ್ಕೂಟದ ಅಧ್ಯಕ್ಷ ದಿವಾಕರ್ ಅವರು ನೀಡುವ ಉತ್ತರ, ಸ್ವಚ್ಛ ಭಾರತ ಅಭಿಯಾನದಿಂದ ಇಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ ಅಂತ. ವ್ಯಾಪಾರಿಗಳು ತಮ್ಮ ಅಂಗಡಿ ಮತ್ತು ಅಂಗಡಿಯ ಸುತ್ತಮುತ್ತ ಸ್ವಚ್ಛವಾಗಿಟ್ಟುಕೊಳ್ಳುತ್ತಾರೆ. ಆದರೆ ತ್ಯಾಜ್ಯಗಳನ್ನು ಮಾರುಕಟ್ಟೆಯ ನೆಲಮಾಳಿಗೆಯಲ್ಲಿ, ಫ್ಲೈ ಓವರ್ ಮುಂದೆ, ಮಸೀದಿ ಮುಂದೆ ಕಸ ಬಿಸಾಡುತ್ತಾರೆ. ಆದರೆ ಈ ತ್ಯಾಜ್ಯಗಳನ್ನು ವಿಲೇವಾರಿ ಮಾಡುವ ಕೆಲಸ ಆಗುತ್ತಿಲ್ಲ ಎನ್ನುವುದು ದಿವಾಕರ್ ಅವರ ನುಡಿ.

ಬಿಬಿಎಂಪಿ ಘನ ತ್ಯಾಜ್ಯ ನಿರ್ವಹಣಾ ತಂಡದ ಸಮಿತಿಯ ಸದಸ್ಯ ಎನ್. ಎಸ್. ರಮಾಕಾಂತ್, ಸ್ವಚ್ಛ ಭಾರತ ಅಭಿಯಾನ ಬಹಳ ಉತ್ಸಾಹದಿಂದಲೇ ಆರಂಭಗೊಂಡಿತಾದರೂ ಈಗ ಆ ಉತ್ಸಾಹ, ಆಸಕ್ತಿ ಉಳಿದುಕೊಂಡಿಲ್ಲ ಎನ್ನುತ್ತಾರೆ.

ಆದರೆ ಕೋರಮಂಗಲ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಸದಸ್ಯ ಎನ್. ರಾಧಾಕೃಷ್ಣ ಅವರು ಹೇಳುವುದು ಹೀಗೆ, '' ಪೊರಕೆ ಹಿಡಿದುಕೊಂಡು ರಸ್ತೆಗಿಳಿದು ಕಸ ಗುಡಿಸುವುದು ಪ್ರಧಾನಿಯವರ ಕೆಲಸ ಅಲ್ಲ. ಮೋದಿಯವರು ಕಳೆದ ವರ್ಷ ಅಭಿಯಾನಕ್ಕೆ ಚಾಲನೆ ನೀಡಿದಾಗ ಕೆಲವು ರಾಜಕಾರಣಿಗಳ ಮಾಧ್ಯಮಗಳ ಮುಂದೆ ಪೊರಕೆ ಹಿಡಿದುಕೊಂಡು ಫೋಸ್ ನೀಡಿದರು. ಅಲ್ಲಿಗೇ ನಿಲ್ಲಿಸಿದರು. ಕೆಲಸವನ್ನು ಮುಂದುವರಿಸಿಕೊಂಡು ಹೋಗಲಿಲ್ಲ. ನಮ್ಮ ದೇಶದಲ್ಲಿ ಜಾಗೃತಿ ಮೂಡಿಸಿದರೆ ಸಾಲದು. ನಿಯಮವನ್ನು ಪಾಲಿಸದಿದ್ದರೆ ಶಿಸ್ತು ಕ್ರಮ ತೆಗೆದುಕೊಳ್ಳಬೇಕು. ಆಗ ಮಾತ್ರ ಬದಲಾವಣೆ ಕಾಣಲು ಸಾಧ್ಯ ಯುವ ಸಮುದಾಯಗಳಲ್ಲಿ ಜಾಗೃತಿ ತರಬೇಕು ಎಂದು ಹೇಳಿದರು.

ನಾಗರಿಕ ಕ್ರಿಯಾ ವೇದಿಕೆಯ ಎನ್.ಎಸ್. ಮುಕುಂದ ಮಾತನಾಡಿ, ನಮ್ಮ ಆಲೋಚನಾ ವಿಧಾನದಲ್ಲಿ ಬದಲಾವಣೆಯಾಗಬೇಕು. ತಳಮಟ್ಟದಿಂದ ಈ ನಿಟ್ಟಿನಲ್ಲಿ ಕೆಲಸವಾಗಬೇಕಾಗಿದೆ. ನಾಲ್ಕು ಗೋಡೆಗಳ ಮಧ್ಯೆ ಕುಳಿತುಕೊಂಡು ದೇಶದ ಬಗ್ಗೆ ಮಾತನಾಡಿದರೆ ಪ್ರಯೋಜನವಿಲ್ಲ. ತಪ್ಪು ಮಾಡುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎನ್ನುತ್ತಾರೆ.
ಪೌರಕಾರ್ಮಿಕಳಾಕೆ ಕೆಲಸ ಮಾಡುತ್ತಿರುವ ಮಣಿ(ಹೆಸರು ಬದಲಿಸಲಾಗಿದೆ) ಮಾತನಾಡಿ, ``ನನಗೆ ಸ್ವಚ್ಛ ಭಾರತ ಅಭಿಯಾನದ ಬಗ್ಗೆ ತಿಳಿದಿಲ್ಲ. ನನಗೆ ಕಸ ಗುಡಿಸುವುದೆಂದರೆ ದಿನಕ್ಕೆ ಎರಡು ಹೊತ್ತಿನ ಊಟಕ್ಕಿರುವ ದಾರಿ. ನನ್ನ ಹೊಟ್ಟೆ ತುಂಬಿಸಿಕೊಳ್ಳಲು, ಸಂಬಳಕ್ಕಾಗಿ ನಾನೀ ಕೆಲಸ ಮಾಡುತ್ತಿದ್ದೇನೆ. ದಿನದ ಕೊನೆಗೆ ನನ್ನ ಜೀವನ ಸಾಗಿಸುವುದು ನನಗೆ ಮುಖ್ಯ. ಅದರಿಂದಾಚೆ ನನಗೇನು ಗೊತ್ತಿಲ್ಲ.'' ಎನ್ನುತ್ತಾಳೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!