ಬೆಂಗಳೂರು: ರಾಜ್ಯದಲ್ಲಿ ಗುರುವಾರ ಸಂಭವಿಸಿದ ಮೂರು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಎಂಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಕಾರ್ಕಳದ ಬೆಳ್ಮಣ್ ಬಳಿ ಡಸ್ಟರ್ ಕಾರು ಮತ್ತು ಬೈಕ್ ನಡುವಿನ ಡಿಕ್ಕಿಯಲ್ಲಿ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ. ಮೂಲತಃ ಗದಗ ಜಿಲ್ಲೆಯವರಾಗಿದ್ದು ಬೆಳ್ಮಣ್‍ನಲ್ಲಿ ಕೂಲಿ ಕಾರ್ಮಿಕರಾಗಿದ್ದ ಪ್ರಕಾಶ್ (28), ಅವರ ಪತ್ನಿ ಸುಮಿತ್ರಾ (23) ಹಾಗೂ ಪುತ್ರಿ ಸೃಷ್ಟಿ (4) ಮೃತರು. ಎಂಟು ತಿಂಗಳ ಗರ್ಭಿಣಿಯಾಗಿದ್ದ ಪತ್ನಿ ಆರೋಗ್ಯ ತಪಾಸಣೆಗಾಗಿ ಪ್ರಕಾಶ್ ಬೈಕ್‍ನಲ್ಲಿ ಪತ್ನಿ, ಮಗುವಿನ ಜೊತೆ ತೆರಳುತ್ತಿ ದ್ದರು.
ಮಾಗಡಿಯಲ್ಲಿ ಕಾರು, ಬೈಕ್ ಮುಖಾಮುಖಿ ಡಿಕ್ಕಿಯಾಗಿ ಬೈಕ್ ನಲ್ಲಿದ್ದ ದಂಪತಿ ಸ್ಥಳದಲ್ಲೇ ಮೃತಪಟ್ಟಿ ದ್ದಾರೆ. ಪಟ್ಟಣದ ಹಳೇ ಮಸೀದಿಯ ಅಲಿಜಾನ್ (28), ಪತ್ನಿ ತಬಸುಮ್(24) ಮೃತರು. ಬಕ್ರೀದ್ ಹಬ್ಬಕ್ಕೆಂದು ಬೆಂಗಳೂರಿಗೆ ಹೋಗಿದ್ದ ತಬಸುಮïರನ್ನು ಅಲಿಜಾನ್ ಕರೆತರುತ್ತಿದ್ದಾಗ ಅವಘಡ ಸಂಭವಿಸಿದೆ. ಮಂಡ್ಯ ಹೊರವಲಯದ ಕಲ್ಲಹಳ್ಳಿ ಬಳಿ ಮಾರುತಿ ಇನೋವಾದ ಚಕ್ರ ಸ್ಪೋಟಗೊಂಡು ಪ್ರಯಾಣಿಕರಾದ ಬೆಂಗಳೂರಿನ ಶಿವಣ್ಣ (61), ಮಹೇಶ್ (40), ಕಾರಿನ ಚಾಲಕ ಕನಕರಾಜು (35) ಮೃತ ಪಟ್ಟಿದ್ದಾರೆ.
ಮೈಸೂರಿನಿಂದ ಬೆಂಗಳೂರಿಗೆ ತೆರಳು ತ್ತಿದ್ದ ವೇಳೆ ದುರ್ಘಟನೆ ನಡೆದಿದೆ. ಉಪ್ಪಿನಂಗಡಿ ಸಮೀಪದ ಮೈರಕಟ್ಟೆ ಬಳಿ ಲಾರಿ ಹಾಗೂ ಗ್ಯಾಸ್ ಟ್ಯಾಂಕರ್ ನಡುವಿನ ಡಿಕ್ಕಿಯಲ್ಲಿ ಟ್ಯಾಂಕರ್ ಚಾಲಕ, ಶಿರಸಿ ಮೂಲದ ಚಂದ್ರಶೇಖರ್ (41), ಲಾರಿ ಚಾಲಕರಾದ ನೆಲ್ಯಾಡಿ ನಿವಾಸಿ ಬಿನು (40) ಮತ್ತು ಗದಗ ಮೂಲದ ಶಿವಾನಂದ್ (25) ಗಂಭೀರವಾಗಿ ಗಾಯಗೊಂಡಿದ್ದಾರೆ.