ಹಳೆಗನ್ನಡದಿಂದಾಗಿ ಪಂಪಭಾರತ ಮಕ್ಕಳಿಗೆ ಕಷ್ಟ
ಪಂಪಭಾರತವು ಹಳೆಗನ್ನಡದಲ್ಲಿರುವ ಕಾರಣ ಮಕ್ಕಳು ಸುಲಭವಾಗಿ ಓದಲಾಗುತ್ತಿ ಲ್ಲ. ಅದನ್ನು ಪದ್ಯಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ...
ಬೆಂಗಳೂರು: ಪಂಪಭಾರತವು ಹಳೆಗನ್ನಡದಲ್ಲಿರುವ ಕಾರಣ ಮಕ್ಕಳು ಸುಲಭವಾಗಿ ಓದಲಾಗುತ್ತಿ ಲ್ಲ. ಅದನ್ನು ಪದ್ಯಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ.
ಇಪ್ಪತ್ತು ವರ್ಷಗಳಿಂದೀಚೆಗೆ ಭಾಷೆಯನ್ನು ಸಾಹಿತ್ಯವಾಗಿ ಕಾಣದೆ ಅದನ್ನು ಸಂವಹನ ಮಾಧ್ಯಮವನ್ನಾಗಿ ಮಾತ್ರ ಬಳಸಲಾಗುತ್ತಿದೆ ಎಂದು ನಾಟಕ ರಚನೆಕಾರ ಡಾ. ಕೆ.ವೈ. ನಾರಾಯಣಸ್ವಾಮಿ ಹೇಳಿದರು.
ಜನಸಂಸ್ಕೃತಿ ಕರ್ನಾಟಕ ಲಲಿತಕಲಾ ಅಕಾಡೆಮಿ ವರ್ಣ ಗ್ಯಾಲರಿಯಲ್ಲಿ ಹಮ್ಮಿಕೊಂಡಿದ್ದ ಕಾವ್ಯ ಸಂಸ್ಕೃತಿ ಕಾರ್ಯಕ್ರಮದ ಭಾಗವಾದ ಪಂಪ ಭಾರತ ನಾಟಕ ಸಂವಾದದಲ್ಲಿ ಅವರು ಮಾತನಾಡಿದರು. ಸಾಹಿತ್ಯ ವಲಯವ ನ್ನು ಕುಂಠಿತಗೊಳಿಸಲಾಗುತ್ತಿದೆ.
ಸಾಕಷ್ಟು ಜನ ಸಾಹಿತ್ಯವನ್ನು ಹೊರೆ ಎಂದು ತಪ್ಪು ಭಾವಿಸಿದ್ದಾರೆ. ಸಾಹಿತ್ಯ ದಿಂದ ಏನೂ ಉಪಯೋಗವಿಲ್ಲ. ಆಂಗ್ಲಭಾಷೆಯು ಪ್ರಪಂಚಕ್ಕೆ ಜೋಡಿಸುವ ಕಿಟಕಿ ಇದ್ದಂತೆ. ಅನ್ಯ ಭಾಷೆಯ ವ್ಯಾಮೋಹದಲ್ಲಿ ಜನ ಕನ್ನಡ ಭಾಷೆ ಹಾಗೂ ಸಾಹಿತ್ಯದಿಂದ ದೂರ ಉಳಿಯುತ್ತಿದ್ದಾರೆ. ಇದಕ್ಕೆ ಉದಾಹರಣೆಎಂದರೆ ಪಂಪ ಕವಿಯ ಮಹಾಭಾರತ. ಹಳೆಗನ್ನಡವನ್ನು ಸುಲಭವಾಗಿ ಅರ್ಥೈಸಿಕೊಳ್ಳಲು ಸಾಧ್ಯವಾಗದ ಕಾರಣ ಎಲ್ಲರಿಗೂ ಪಂಪ ಭಾರತವನ್ನು ತಿಳಿಸಲು ನಾಟಕ ರೂಪದಲ್ಲಿ ಇದನ್ನು ತರಲಾಗಿದೆ. ಜನರಿಗೆ ಗೊತ್ತಿರದ ಎಷ್ಟೋ ಮಹಾಭಾರತ ಪ್ರಸಂಗವನ್ನು ಇದರಲ್ಲಿ ಅಳವಡಿಸಲಾಗಿದೆ. ಓದಿಸಲು ಆಗದಿ-ದ್ದರೂ ನೋಡಿಸೋಣವೆಂಬ ಮನೋಭಾವದಿಂದ ಮುನ್ನುಗ್ಗಿದ್ದೇವೆ ಎಂದು ಹೇಳಿದರು.
ಜಿ.ವಿ.ಭಾಗ್ಯಲಕ್ಷ್ಮಿ ಪುಸ್ತಕದ ಕುರಿತು ಮಾತನಾಡಿ, ಚರಿತ್ರೆಯಲ್ಲಿ ಬಳಸುವ ಸತ್ಯ ಒಂದೇ ಇರುವುದಿಲ್ಲ. ನೀರಲ್ಲಿರುವ ಮೀನಿನ ಹೆಜ್ಜೆಯ ರೀತಿ ಹೆಣ್ಣಿನ ನಡೆ ನಿಗೂಢ ಎಂದು ಕೆಲವು ಪುರುಷರು
ಹೇಳುತ್ತಾರೆ. ಯಾವುದೇ ಪುರುಷ ಎಷ್ಟೇ ಚಿತ್ರಣ ಮಾಡಿದರೂ ಹೆಣ್ಣಿಗೆ ಧಕ್ಕೆಯಾಗದು. ಏಕೆಂದರೆ, ಹೆಣ್ಣನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡು ಇವಳು ಹೀಗೆಯೇ ಎನ್ನಲು ಸಾಧ್ಯವಿಲ್ಲ. ಇದಕ್ಕೆ ದ್ರೌಪದಿಯೇ ಉತ್ತಮ ನಿದರ್ಶನ. ಇವರ ನಾಟಕದಲ್ಲಿ ದ್ರೌಪದಿಯ ಚಿತ್ರಣವನ್ನು ಅಚ್ಚುಕಟ್ಟಾಗಿ ನಿರ್ವಹಿಸಲಾಗಿದೆ ಎಂದು ಹೇಳಿದರು.
ವಿಮರ್ಶಕಿ ಡಾ.ವಿಜಯಮ್ಮ ಮಾತನಾಡಿ, ಕೆಲವು ಕಾರಣಗಳಿಂದಾಗಿ ಕೆಲವರಿಗೆ ಒಂದೊಂದು ಸ್ಥಾನವನ್ನು ನೀಡಲಾಗಿರುತ್ತದೆ. ಆದರೆ, ಆ ಸ್ಥಾನಕ್ಕಿಂತ ಉತ್ತಮವಾದದ್ದು ಅಥವಾ ಹೊಸತೊಂದು ಬಂದರೆ ಅದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಯಾವುದು ಶಾಶ್ವತವಲ್ಲ ಇವತ್ತು. ಒಂದು ಸತ್ಯ ನಮಗೆ ಅರ್ಥವಾದರೆ ನಾಳೆ ಅದೇ ಸತ್ಯ ಸುಳ್ಳಾಗಿರಬಹುದು. ಯಾರೊಬ್ಬರನ್ನು
ಆ ಸ್ಥಾನದಲ್ಲಿ ಪ್ರತಿಷ್ಠಾಪಿಸುವುದು ಮುಖ್ಯವಲ್ಲ. ಆ ವ್ಯಕ್ತಿ ಸಮಾಜಕ್ಕೆ ಎಂತಹ ಕಾರ್ಯ ಮಾಡುತ್ತಾನೆ ಎನ್ನುವುದು ಕೂಡ ಮುಖ್ಯ ಎನ್ನುತ್ತಾ ನಾಟಕದ ಒಳಾರ್ಥವನ್ನು ತಿಳಿಸಿದರು.