ಸಾಂದರ್ಭಿಕ ಚಿತ್ರ 
ಜಿಲ್ಲಾ ಸುದ್ದಿ

ಬುರ್ಖಾದಲ್ಲಿ ಬಂದು ಕಂದಮ್ಮನನ್ನು ಕದ್ದಳು

ಆರೈಕೆ ಮಾಡುವ ನೆಪದಲ್ಲಿ ಬಾಣಂತಿಯನ್ನು ಯಾಮಾರಿಸಿದ ಬುರ್ಖಾಧಾರಿ ಮಹಿಳೆಯೊಬ್ಬಳು ನವಜಾತ ಗಂಡು ಶಿಶುವನ್ನು ಕದ್ದೊಯ್ದಿರುವ ಘಟನೆ ಬೌರಿಂಗ್ ...

ಬೆಂಗಳೂರು: ಆರೈಕೆ ಮಾಡುವ ನೆಪದಲ್ಲಿ ಬಾಣಂತಿಯನ್ನು ಯಾಮಾರಿಸಿದ ಬುರ್ಖಾಧಾರಿ ಮಹಿಳೆಯೊಬ್ಬಳು ನವಜಾತ ಗಂಡು ಶಿಶುವನ್ನು ಕದ್ದೊಯ್ದಿರುವ ಘಟನೆ ಬೌರಿಂಗ್ ಆಸ್ಪತ್ರೆಯಲ್ಲಿ ಭಾನುವಾರಮಧ್ಯಾಹ್ನ ನಡೆದಿದೆ. ಕಾಡುಗೋಡಿ ವರದಾಚಾರ್ ರಸ್ತೆ ನಿವಾಸಿಗಳಾದ ಸೈಯ್ಯದ್ ಹಬೀಬ್ ಹಾಗೂ ಫರಿದಾ ದಂಪತಿಗೆ ಅ.1ರಂದು ಮಧ್ಯಾಹ್ನ 2.30ಕ್ಕೆ ಜನಿಸಿದ್ದ ಗಂಡು ಮಗು ಭಾನುವಾರ ಮಧ್ಯಾಹ್ನ 12.30ರ ಸುಮಾರಿಗೆ ಕಳ್ಳತನವಾಗಿದೆ. ಬುರ್ಖಾಧಾರಿ ಮಹಿಳೆಯೊಬ್ಬಳು ಮಗುವನ್ನು ಕದ್ದೊಯ್ಯುತ್ತಿರುವ ದೃಶ್ಯ ಆಸ್ಪತ್ರೆಯ ಕಾರಿಡಾರ್ ಹಾಗೂ ಹೊರಗೆ ಇರುವ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವುದಾಗಿ ಕಮರ್ಷಿಯಲ್ ಸ್ಟ್ರೀಟ್  ಪೊಲೀಸರು ಹೇಳಿದ್ದಾರೆ. ವಿವರ: ಹಬೀಬ್ ಕಾಡುಗೋಡಿ ಮಟನ್ ಮಾರ್ಕೆಟ್‍ನಲ್ಲಿ ಕೆಲಸ
ಮಾಡುತ್ತಿದ್ದು, 7 ದಿನಗಳ ಹಿಂದೆ ಪತ್ನಿಯನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಿದ್ದರು. ಅ.1ರಂದು ಮಗು ಜನಿಸಿದ ನಂತರ ಆರೋಗ್ಯ ಸರಿ ಇಲ್ಲದ ಕಾರಣ ಎನ್‍ಐಸಿಯು ನಲ್ಲಿ ಇರಿಸಲಾಗಿತ್ತು.  ಎರಡು ಗಂಟೆಗೊಮ್ಮೆ ಎದೆ ಹಾಲು ಕುಡಿಸಲು ತಾಯಂದಿರಿಗೆ ಕೊಡಲಾಗುತ್ತದೆ. ಅದರಂತೆ ಮಧ್ಯಾಹ್ನ 12.30ರ ಸುಮಾರಿಗೆ ಎನ್  ಐಸಿಯುನ ನರ್ಸ್ ಮಂಜುಳಾ ಹಾಲು ಕುಡಿಸಲು  ವಾರ್ಡ್ನಲ್ಲಿ ಮಲಗಿದ್ದ ತಾಯಿ ಫರೀದಾಗೆ ನೀಡಿ
ದ್ದರು. ನಿದ್ರೆ ಮಂಪರಿನಲ್ಲಿದ್ದ ತಾಯಿ ಹಾಲು ಕುಡಿಸುವಾಗ ಬಂದ ಬುರ್ಖಾಧಾರಿ ಮಹಿಳೆ, ಮಗುವನ್ನು ನೋಡಿ ಫರಿದಾಳನ್ನು ಮಾತನಾಡಿಸಿದ್ದಾಳೆ.
ತನಗೆ ಬರೀ ಹೆಣ್ಣು ಮಕ್ಕಳು ಮಾತ್ರ ಇದ್ದು ಗಂಡು ಮಕ್ಕಳಿಲ್ಲ. ಎತ್ತಿಕೊಳ್ಳಲೇ ಎಂದು ಕೇಳಿದ್ದಾಳೆ. ಅದಕ್ಕೆ  ಫರಿದಾ ಒಪ್ಪಿದಾಗ ಎತ್ತಿಕೊಂಡು ಆರೈಕೆ ಮಾಡುತ್ತಿದ್ದಳು. ನಂತರ ಫರಿದಾ ಮತ್ತೊಂದು ಕಡೆ ತಿರುಗಿದ್ದಾರೆ. ಫರಿದಾ ಗಮನ ಮಗುವಿನ ಕಡೆ ಇಲ್ಲ ಎನ್ನುವುದನ್ನು ಖಚಿತಪಡಿಸಿಕೊಂಡ ಅಪರಿಚಿತ ಮಹಿಳೆ ಮಗುವನ್ನು ಎತ್ತಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾಳೆ. ಹಬೀಬ್ ಹಾಗೂ ಫರಿದಾ ದಂಪತಿಗೆ ಎರಡು ಹೆಣ್ಣು ಮಕ್ಕಳಿದ್ದು ಮೂರನೇ ಮಗು ಗಂಡು ಆಗಿತ್ತು. ಮೂರು ನಿಮಿಷಗಳ ಬಳಿಕ ಮಗು ಹಾಗೂ ಮಹಿಳೆ ಕಾಣದಾದಾಗ ಗಾಬರಿಗೊಂಡ ಮಹಿಳೆ, ತನ್ನ ಅತ್ತಿಗೆ ಸಲ್ಮಾ ಎಂಬುವರಿಗೆ ಫೋನ್ ಕರೆ ಮಾಡಿಕರೆಸಿಕೊಂಡಿದ್ದಾಳೆ. ಅತ್ತಿತ್ತ ಹುಡುಕಾಡಿ ಆಸ್ಪತ್ರೆ ಆವರಣದಲ್ಲಿರುವ ಬೌರಿಂಗ್
ಔಟ್‍ ಪೋಸ್ಟ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್-ಪ್ರಿಯಾಂಕಾ ವಶಕ್ಕೆ ಪಡೆದ ದೆಹಲಿ ಪೊಲೀಸರು: ಇಂಡಿಯಾ ಕೂಟದ 9 ಗಂಟೆಗಳ ಧರಣಿಗೆ ಬ್ರೇಕ್!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಚುನಾವಣಾ ಆಯೋಗದ ವಿರುದ್ಧ INDIA ಪ್ರತಿಭಟನೆ; 'ಕೈ' ನಾಯಕರು ಪೊಲೀಸ್ ವಶಕ್ಕೆ: ವ್ಯಾನ್ ನಿಂದ ಇಳಿದು ರಾಹುಲ್ ಜೊತೆ ಮರದ ಕೆಳಗೆ ಕುಳಿತ ಪ್ರಿಯಾಂಕ!

ಕಲಬುರಗಿಯಲ್ಲಿ ಶಾಕಿಂಗ್ ಘಟನೆ: ತೊಗರಿ ಹೊಲದಲ್ಲಿ ತರಬೇತಿ ವಿಮಾನ ತುರ್ತು ಭೂಸ್ಪರ್ಶ!