ಸಾಂದರ್ಭಿಕ ಚಿತ್ರ 
ಜಿಲ್ಲಾ ಸುದ್ದಿ

ಹಣ ಕೊಡಲು ನಿರಾಕರಿಸಿದ್ದಕ್ಕೆ ಹೆಣವಾದ

ಕೆಲಸ ಮುಗಿಸಿಕೊಂಡು ಮನೆಗೆ ಮರಳುತ್ತಿದ್ದ ಹೋಟೆಲ್ ಕೆಲಸಗಾರನ ಸಾವಿರ ರುಪಾಯಿಯ ಮೊಬೈಲ್ ಫೋನ್ ಕಿತ್ತುಕೊಂಡು ಚಾಕುವಿನಂದ ಇರಿದು ಕೊಲೆ ...

ಬೆಂಗಳೂರು: ಕೆಲಸ ಮುಗಿಸಿಕೊಂಡು ಮನೆಗೆ ಮರಳುತ್ತಿದ್ದ ಹೋಟೆಲ್ ಕೆಲಸಗಾರನ  ಸಾವಿರ ರುಪಾಯಿಯ ಮೊಬೈಲ್ ಫೋನ್ ಕಿತ್ತುಕೊಂಡು  ಚಾಕುವಿನಂದ ಇರಿದು   ಕೊಲೆ ಮಾಡಿದ ನಾಲ್ವರು ಯುವಕರನ್ನು ಘಟನೆ ನಡೆದ ಕೆಲವೇ  ಗಂಟೆಗಳಲ್ಲಿ  ಮಲ್ಲೇಶ್ವರ ಪೊಲೀಸರು ಬಂಧಿಸಿದ್ದಾರೆ. ಮಲ್ಲೇಶ್ವರ 15ನೇ ಕ್ರಾಸ್ ಬಳಿ ಇರುವ `1947' ಹೋಟೆಲ್‍ನಲ್ಲಿ ಕೆಲಸ ಮಾಡುತ್ತಿದ್ದ ಪಶ್ಚಿಮ ಬಂಗಾಳ ಮೂಲದ ಆಶೀಷ ಪಾಲ್ (32) ಕೊಲೆಯಾದವರು.  ಈ ಸಂಬಂಧ  ಶ್ರೀರಾಮಪುರ ಸಮೀಪದ  ಲಕ್ಷ್ಮಿನಾರಾಯಣಪುರ ನಿವಾಸಿ ಶಿವು ಅಲಿಯಾಸ್  ಪೊರ್ಕಿ(21), ಮಣಿಕಂಠ (20), ರಾಜಗೋಪಾಲನಗರ ಸಮೀಪದ ಕೆಂಪೇಗೌಡ ಲೇಔಟ್ ನ ಸಂತೋಷ್  ರಾವ್(20), ಶ್ರೀರಾಮಪುರ ನಾಗಪ್ಪ ಬ್ಲಾಕ್‍ನ ಲಿಖಿತ್ (20) ಬಂಧಿತರು. ಆರೋಪಿಗಳಿಂದ 1 ಬಟನ್ ಚಾಕು, ಅಶೀಷ್ ಪಾಲ್‍ನಿಂದ  ಸುಲಿಗೆ ಮಾಡಿದ್ದ  ಸಾವಿರ ರುಪಾಯಿ ಮೌಲ್ಯದ ಮೊಬೈಲಾ ಫೋನ್, ಎರಡು  ಬೈಕ್ ಗಳು ,  ಎರಡು ಬೈಕ್‍ಗಳು ಹಾಗೂ ರು.1,500 ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಏನಾಯಿತು?: ಉಪ ಜೀವನಕ್ಕಾಗಿ ಪಶ್ಚಿಮ ಬಂಗಾಳದಿಂದ ನಗರಕ್ಕೆ ಆಗಮಿಸಿದ್ದ ಆಶೀಷ್, 1947 ಹೋಟೆಲ್‍ನಲ್ಲಿ ಟೇಬಲ್ ಕ್ಲೀನಿಂಗ್ ಹಾಗೂ ಪಾತ್ರೆಗಳನ್ನು ತೊಳೆಯುವ ಕೆಲಸ ಮಾಡುತ್ತಿದ್ದ. ಹೋಟೆಲ್‍ನಲ್ಲಿ ಕೆಲಸ ಮಾಡುತ್ತಿರುವವರೊಂದಿಗೆ ಸಮೀಪದ ಕೊಠಡಿಯೊಂದರಲ್ಲಿ ವಾಸವಿದ್ದ. ಶನಿವಾರ ರಾತ್ರಿ 11 ಗಂಟೆಗೆ ಹೋಟೆಲ್ ಬಾಗಿಲು ಹಾಕಿದ ನಂತರ ಊಟ ಮಾಡಿಕೊಂಡು ನಾಲ್ಕೈದು ಕೆಲಸಗಾರರು ನಡೆದುಕೊಂಡು ಕೊಠಡಿಗೆ ಮರಳುತ್ತಿದ್ದರು. ಸಹೋದ್ಯೋಗಿಗಳು ಮುಂದೆ ಹೋಗುತ್ತಿದ್ದರೆ ಈತ ಸ್ವಲ್ಪ ಅವರ ಹಿಂದೆ ನಡೆದುಕೊಂಡು ಹೋಗುತ್ತಿದ್ದ. ಈ ವೇಳೆ ಎರಡು ಹೊಂಡಾ ಆ್ಯಕ್ಟಿವಾ ವಾಹನಗಳಲ್ಲಿ ಬಂದ ನಾಲ್ವರು ಆರೋಪಿಗಳ ಪೈಕಿ ದ್ವಿಚಕ್ರ ವಾಹನದಲ್ಲಿ ಹಿಂದೆ ಕುಳಿತಿದ್ದ ಶಿವು, ಆಶೀಷ್‍ನನ್ನು ಅಡ್ಡಗಟ್ಟಿ ಹಣ ಕೇಳಿದ್ದಾನೆ. ಆಗ, ಅಶೀಷ್ ತನ್ನ ಬಳಿ ಹಣ ಇಲ್ಲ ಎಂದಾಗ
ಬಲವಂತವಾಗಿ ಆತನ ಬಳಿ ಇದ್ದ ಮೊಬೈಲ್ ಫೋನ್ ಅನ್ನು ಕಿತ್ತುಕೊಂಡಿದ್ದಾನೆ. ಈ ವೇಳೆ ಪ್ರತಿರೋಧ ವ್ಯಕ್ತಪಡಿಸಿದಾಗ ಚಾಕುವಿನಿಂದ ಹೊಟ್ಟೆಗೆ ಒಂದು ಬಾರಿ ತಿವಿದು ಸ್ಥಳದಿಂದ
ಆರೋಪಿಗಳು ಪರಾರಿಯಾಗಿದ್ದಾರೆ.
ಇರಿತದಿಂದ ಅಸ್ವಸ್ಥಗೊಂಡ ಆಶೀಷ್, ಸಹೋದ್ಯೋಗಿಗಳನ್ನು ಕೂಗಿ ಕರೆದು ಅವರತ್ತ ಓಡಿದ್ದಾನೆ. ಗಾಬರಿಗೊಂಡ ಸಹೋದ್ಯೋಗಿಗಳು ಕೂಡಲೇ ಆತನನ್ನು ಸಮೀಪದ ಮಣಿಪಾಲ್ ನಾರ್ತ್ ಸೈಡ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಚಿಕಿತ್ಸೆ ಫಲಿಸದೆ ರಾತ್ರಿ 2 ಗಂಟೆ ಸುಮಾರಿಗೆ ಆಶೀಷ್ ಕೊನೆಯುಸಿರೆಳೆದಿದ್ದಾನೆ ಎಂದು ಮಲ್ಲೇಶ್ವರ ಪೊಲೀಸರು ತಿಳಿಸಿದರು. 
ಕೊಲೆ ಮಾಡಿ ಟೀ ಕುಡಿಯುತ್ತಿದ್ದ ಹಂತಕರು: ಕೊಲೆ ಸುದ್ದಿ ವೈರ್‍ಲೆಸ್ ಮೂಲಕ ಎಲ್ಲ ಠಾಣೆಗಳಿಗೆ ತಲುಪುತ್ತಿದ್ದಂತೆ ಮಲ್ಲೇಶ್ವರ ಪೊಲೀಸರು ಗಸ್ತು ತೀವ್ರಗೊಳಿಸಿದ್ದರು. ಸುತ್ತ
ಮುತ್ತಲಿನ ಪ್ರದೇಶಗಳಲ್ಲಿ ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಹುಡುಕಾಡಲು ಆರಂಭಿಸಿದರು. ಈ ವೇಳೆ ದೇವಯ್ಯ ಪಾರ್ಕ್ ಸಮೀಪದ ರಸ್ತೆ ಬದಿಯಲ್ಲಿ ನಂಬರ್ ಪ್ಲೇಟ್ ಇಲ್ಲದ ಹೊಂಡಾ
ಆ್ಯಕ್ಟಿವಾ ದ್ವಿಚಕ್ರ ವಾಹನ ನಿಂತಿತ್ತು. ಗಸ್ತಿನಲ್ಲಿದ್ದ ಕಾನ್ಸ್‍ಟೇಬಲ್ ಧನಂಜಯ್ ಅವರು ವಾಹನ ನಿಲ್ಲಿಸಿ ನಂಬರ್ ಪ್ಲೇಟ್ ಇಲ್ಲದ ವಾಹನ ಯಾರದ್ದೂ ಎಂದು ಪ್ರಶ್ನಿಸಿದ್ದಾರೆ.
ಈ ವೇಳೆ ಆರೋಪಿಗಳ ಪೈಕಿ ಒಬ್ಬ `ನಮಸ್ಕಾರ ಸಾರ್. ನಮ್ಮದೆ ಗಾಡಿ. ಹೊಸದಾಗಿ ಖರೀದಿಸಿದ್ದು ನಂಬರ್ ಪ್ಲೇಟ್ ಬಂದಿಲ್ಲ' ಎಂದು ಹೇಳಿದ್ದಾನೆ. ವಾಹನ ಹಳೆಯದಾಗಿದ್ದರೂ ಆರೋಪಿಗಳು ಹೊಸ ವಾಹನ ಎಂದು ಹೇಳಿದ್ದರಿಂದ ಅನುಮಾನಗೊಂಡ ಧನಂಜಯ ಅವರು, ಹೊಯ್ಸಳ ವಾಹನವನ್ನು ಸ್ಥಳಕ್ಕೆ ಕರೆಸಿಕೊಂಡು ಶಿವು ಹಾಗೂ ಮಣಿಕಂಠನನ್ನು ಠಾಣೆಗೆ ಕರೆದೊಯ್ದು ವಿಚಾರಿಸಿದಾಗ ಕೊಲೆ ವಿಚಾರ ಬಾಯ್ಬಿಟ್ಟಿದ್ದಾರೆ. ಅವರ ಬಳಿ ಚಾಕು ಹಾಗೂ ದೋಚಿದ್ದ ಮೊಬೈಲ್ ಫೋನ್ ಸಿಕ್ಕಿದೆ. ಆರೋಪಿಗಳು ನೀಡಿದ ಮಾಹಿತಿ ಆಧರಿಸಿ ಮನೆಯಲ್ಲಿದ್ದ ಉಳಿದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರ ಪೈಕಿ ಮಣಿಕಂಠ ಬಿ.ಕಾಂ. ಮೊದಲನೇ ವರ್ಷಕ್ಕೆ ವ್ಯಾಸಂಗ ನಿಲ್ಲಿಸಿದ್ದ. ಸಂತೋಷ್, ಮಾಲ್‍ವೊಂದರಲ್ಲಿ ಕೆಲಸ ಮಾಡುತ್ತಿದ್ದು, ಲಿಖಿತ್ ಪೀಣ್ಯದಲ್ಲಿರುವ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.
ರು.10 ಸಾವಿರ ಬಹುಮಾನ
ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಗಳ ಬಂಧನವಾಗಲು ಸಮಯಪ್ರಜ್ಞೆ ತೋರಿದ ಕಾನ್ಸ್‍ಟೇಬಲ್ ಧನಂಜಯ ಅವರ ಕಾರ್ಯವನ್ನು ಮೆಚ್ಚಿದ ನಗರ ಪೊಲೀಸ್ ಆಯುಕ್ತ ಎನ್.ಎಸ್. ಮೇಘರಿಕ್ ಅವರು ರು.10 ಸಾವಿರ ನಗದು ಬಹುಮಾನ ಘೋಷಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ.ಕೆ ಶಿವಕುಮಾರ್ ಸ್ಫೋಟಕ ಆರೋಪ; Video

ಶಾಸಕರ ಲೆಟರ್‌ಹೆಡ್'ನಲ್ಲೇ 'ಸತ್ತಿದ್ದಾರೆ' ಎಂದು ಅರ್ಜಿ: ಯತ್ನಾಳ್ ಸೇರಿ ಮೂವರ ವಿರುದ್ಧ FIR ದಾಖಲು

ಚಿಂತಾಮಣಿಯ Dictator, ನಿನ್ನ ವಿರುದ್ಧ ಸಮರ ನಿರಂತರ: ಎಂಸಿ ಸುಧಾಕರ್ ವಿರುದ್ಧ ಪ್ರದೀಪ್ ಈಶ್ವರ್ ಮತ್ತೆ ಕಿಡಿ

'Evil Dead': ನಟ ನಾನಾ ಪಾಟೇಕರ್ ಸಾವು, #MeToo ಆರೋಪ ಮಾಡಿದ್ದ ನಟಿ ತನುಶ್ರೀ ದತ್ತಾ ಹೇಳಿದ್ದೇನು? ವಿಚಿತ್ರ ಪೋಸ್ಟ್!

ಇದ್ದಕ್ಕಿದ್ದಂತೆ ಬಾಯ್ತೆರೆದ ರಸ್ತೆ, ಕಾರು ಆಪೋಷನ, ಕೂದಲೆಳೆ ಅಂತರದಲ್ಲಿ ಚಾಲಕ ಬಚಾವ್-Video