ಸಾಂದರ್ಭಿಕ ಚಿತ್ರ 
ಜಿಲ್ಲಾ ಸುದ್ದಿ

ದೇಶಾದ್ಯಂತ ಏಕ ಸಿಇಟಿ

ಎಂಬಿಬಿಎಸ್, ಬಿಡಿಎಸ್ ಮತ್ತು ಸ್ನಾತಕೋತ್ತರ ವೈದ್ಯ ಕೋರ್ಸ್‍ಗಳಿಗೆ ಏಕರೀತಿಯ ಪ್ರವೇಶ ಪರೀಕ್ಷೆ ನಡೆಸುವ ಕೇಂದ್ರದ ಪ್ರಸ್ತಾಪಕ್ಕೆ...

 ಬೆಂಗಳೂರು: ಎಂಬಿಬಿಎಸ್, ಬಿಡಿಎಸ್ ಮತ್ತು ಸ್ನಾತಕೋತ್ತರ ವೈದ್ಯ ಕೋರ್ಸ್‍ಗಳಿಗೆ ಏಕರೀತಿಯ ಪ್ರವೇಶ ಪರೀಕ್ಷೆ ನಡೆಸುವ ಕೇಂದ್ರದ ಪ್ರಸ್ತಾಪಕ್ಕೆ ಮತ್ತೆ ಜೀವ ಬರುತ್ತಿದ್ದಂತೆ, ರಾಜ್ಯದ ವಿದ್ಯಾರ್ಥಿಗಳಾಗುವ ಅನುಕೂಲ ಮತ್ತು ಅನಾ ನುಕೂಲದ ಬಗ್ಗೆ ವಿಶ್ಲೇಷಣೆ ಆರಂಭವಾಗಿ ದೆ. ವೈದ್ಯಕೀಯ ಮತ್ತು ದಂತ ವೈದ್ಯ ಕೀಯ ಸೀಟುಗಳಿಗಾಗಿ ಏಕ ಪ್ರವೇಶ ಪರೀಕ್ಷೆ ನಡೆದರೆ ಪ್ರತಿ ರಾಜ್ಯದಲ್ಲೂ ವಿವಿಧ ಸಂಸ್ಥೆಗಳು ನಡೆಸುವ ಪ್ರವೇಶ ಪರೀಕ್ಷೆ ರದ್ದಾಗಲಿವೆ. ಈ ಪರೀಕ್ಷೆಗಳು ರದ್ದಾಗುವ ಮುನ್ನ ಪ್ರತಿ ರಾಜ್ಯದಲ್ಲಿ ಅಲ್ಲಿನ ವಿಧಾನಸಭೆಯಲ್ಲಿ ರೂಪು ಗೊಂಡ ಕಾನೂನು ರದ್ದಾಗಬೇಕಾ ಗುತ್ತದೆ. ಅಗತ್ಯಬಿದ್ದರೆ ಹೊಸ ಕಾನೂನು ರಚನೆಯಾಗಬೇಕಾಗುತ್ತದೆ. ಇದೆಲ್ಲ ಕ್ಕಿಂತ ಮುಖ್ಯವಾಗಿ ಖಾಸಗಿ ಮ್ಯಾನೇಜ್ ಮೆಂಟ್ ಲಾಬಿ ಈ ಸಂಗತಿಯನ್ನು ಹೇಗೆಸ್ವೀಕರಿಸುತ್ತದೆ ಎಂಬುದೇ ಮುಖ್ಯವಾಗುತ್ತ ದೆ.
ವಿದ್ಯಾರ್ಥಿಗಳಿಗೇನು ಲಾಭ?: ಕರ್ನಾಟಕದಲಿ ಪ್ರತಿ ವರ್ಷ 13 ಸಂಸ್ಥೆಗಳು ಪ್ರವೇಶ ಪರೀಕ್ಷೆ ನಡೆಸುತ್ತಿವೆ.ಸರ್ಕಾರಿ ಸೀಟುಗಳಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಕಾಮೆಡ್-ಕೆ, ಕೆಆರ್‍ಎಲ್‍ಎಂ(2) ಸೇರಿದಂತೆ ರಾಜ್ಯದಲ್ಲಿರುವ ಡೀಮ್ಡ್ ವಿವಿಗಳು ಪ್ರತ್ಯೇಕವಾಗಿ ತಮ್ಮದೇ ಪರೀಕ್ಷೆ ನಡೆಸುತ್ತಿವೆ. ಇದರ ಹೊರತಾಗಿ ರಾಷ್ಟ್ರೀಯ ಮಟ್ಟದ ಎಐ-ಪಿಎಂಟಿ, ಎಐಐಎಂಎಸ್ ಸೇರಿದಂತೆ ಒಟ್ಟಾರೆ 13 ಸಂಸ್ಥೆಗಳ ಪರೀಕ್ಷೆಗಳನ್ನುವಿದ್ಯಾರ್ಥಿಗಳು ಎದುರಿಸುತ್ತಾರೆ. ಒಂದೇ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಯುವುದರಿಂದ ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆಗಾಗಿನ ಸಾವಿರಾರು ರುಪಾಯಿ ಶುಲ್ಕ, ಪರೀಕ್ಷೆ ತಯಾರಿ,
ಸಮಯ ಉಳಿತಾಯವಾಗುವುದರ ಜೊತೆಗೆ ಒತ್ತಡವೂ ಕಡಿಮೆಯಾಗುತ್ತದೆ. ಒಂದೇ ಪರೀಕ್ಷೆ ಎದುರಿಸಿ ಸೀಟುಪಡೆದುಕೊಳ್ಳಬಹುದು.
ವಿದ್ಯಾರ್ಥಿಗಳಿಗಾಗುವ ನಷ್ಟವೇನು?: ರಾಷ್ಟ್ರೀಯ ಮಟ್ಟದ ಏಕ ಸಿಇಟಿಯು ಸಿಬಿಎಸ್ಸಿ, ಐಸಿಎಸ್ಸಿಯ ಪಠ್ಯ ಆಧರಿಸಿ ಪರೀಕ್ಷೆ ನಡೆಯುತ್ತದೆ. ಇದನ್ನು ಹಳ್ಳಿ ಮಕ್ಕಳು ಹೇಗೆ ಎದುರಿಸುತ್ತಾರೆ ಎಂಬುದು ಈಗಿರುವ ಪ್ರಶ್ನೆ. ಗ್ರಾಮೀಣ ವಿದ್ಯಾರ್ಥಿಗಳು ಕೋಚಿಂಗ್‍ಗಾಗಿ ಪರದಾಡಬೇಕಾಗಬಹುದು.
ವ್ಯವಸ್ಥೆಗಳೇನಾಗಬಹುದು?: ಅಭ್ಯರ್ಥಿಗಳ ರ್ಯಾಂಕ್ ಪಟ್ಟಿಯನ್ನು ರಾಜ್ಯಕ್ಕೆ ನೀಡಲಾಗುತ್ತದೆ. ಈ ರ್ಯಾಂಕ್ ಪಟ್ಟಿ ಆಧಾರದ ಮೇಲೆ ರಾಜ್ಯಗಳು ಹಂಚಿಕೆ ಮಾಡಲು ಅವಕಾಶವಿದೆ. ಖಾಸಗಿ ಕಾಲೇಜುಗಳು ನಾವೇ ಸೀಟು ಹಂಚಿಕೆ ಮಾಡಿಕೊಳ್ಳುತ್ತೇವೆಂದು ಪಟ್ಟು ಬೀಳ ಬಹುದು. ನಿಯಮಗಳಂತೆ ಖಾಸಗಿ ಕಾಲೇಜುಗಳಲ್ಲಿ ಸರ್ಕಾರಿ
ಕೋಟಾದಡಿ ಸೀಟು ಹಂಚಿಕೆ ಯಾಗಬಹುದು. ಆದರೆ, ಸರ್ಕಾರಿ ವ್ಯವಸ್ಥೆ ಮೂಲಕ ಸೀಟುಹಂಚಿಕೆಯಾಗುವುದು ಕೈತಪ್ಪುವ
ಸಾಧ್ಯತೆ ಹೆಚ್ಚಿರುತ್ತದೆ.
ಒಪ್ಪುವುದೇ ಅನುಮಾನ?
ಕೇಂದ್ರವೇನೋ ವಿದ್ಯಾರ್ಥಿಗಳ ಹಿತೃದೃಷ್ಟಿಯಲ್ಲಿಟ್ಟುಕೊಂಡು ಏಕಸಿಇಟಿ ನಡೆಸುವ ಪ್ರಸ್ತಾಪ ಮಾಡಿದೆ. ಆದರೆ, ಪ್ರಬಲಮ್ಯಾನೇಜ್‍ಮೆಂಟ್ ಲಾಬಿಗಳು ಸರ್ಕಾರದ ಆಶಯವನ್ನು ಒಪ್ಪುತ್ತದೆಂದೇನು ಇಲ್ಲ. ಈ ಹಿಂದಿನ ಸುಪ್ರಿಂ ಕೋರ್ಟಿನ ತೀರ್ಪಿನಂತೆ ಆಯಾ ಕಾಲೇಜುಗಳೇ ಪ್ರವೇಶ ಪರೀಕ್ಷೆ ನಡೆಸಿ ಸೀಟು ಹಂಚಿಕೆ ಮಾಡಿಕೊಳ್ಳಬಹುದೆಂಬ ತೀರ್ಪನ್ನು ಮುಂದಿಟ್ಟುಕೊಂಡು ಹೊಸ ಪ್ರಸ್ತಾಪವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವ ಸಾಧ್ಯತೆ ಹೆಚ್ಚಿರುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

SIR ವೇಳೆ ಡಿಲೀಟ್ ಆಗಿರುವ 13.3 ಕೋಟಿ ಮತದಾರರ ಪತ್ತೆಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ನೇಮಕ!

'ಸ್ಪಾದಲ್ಲಿ ಅಕ್ರಮ ಚಟುವಟಿಕೆ' ಎಂದು ಆರೋಪಿಸಿ ದಾಂಧಲೆ; 5 ಲಕ್ಷ ರೂ ಗೆ ಬೇಡಿಕೆ, 1 ಲಕ್ಷ ವಸೂಲಿ! ಶಾಕಿಂಗ್ ಘಟನೆ

'ಇತಿಹಾಸ ನಿಮ್ಮನ್ನು ಇನ್ನಷ್ಟು ಗೌರವದಿಂದ ನೆನಪಿಸಿಕೊಳ್ಳಲಿದೆ'; Agarkarಗೆ ಗೇಟ್ ಪಾಸ್`, ಗಂಭೀರ್‌ ಭಾವುಕ ಸಂದೇಶ!

Bigg Boss Kannada: ಟಾಸ್ಕ್ ವೇಳೆ ಕುಸಿದು ಬಿದ್ದ ನಟಿ ಸಂಗೀತಾ ಭಟ್; ಆರೋಗ್ಯದಲ್ಲಿ ಏರುಪೇರು! ವಿಡಿಯೋ ವೈರಲ್