ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ಆ್ಯಂಬುಲೆನ್ಸ್‍ಗೆ ದಾರಿ ಕೊಡಿ ಇಲ್ಲದಿದ್ದರೆ ಡಿಎಲ್ ಬಿಡಿ

ಆರೋಗ್ಯ ಇಲಾಖೆಯ ಆ್ಯಂಬುಲೆನ್ಸ್ ವಾಹನ ಗಳಿಗೆ ದಾರಿ ಬಿಡದೆ ತೊಂದರೆ ನೀಡುವ ವಾಹನ ಸವಾರರ ಪರವಾನಗಿ ರದ್ದುಗೊಳಿಸಲಾಗುತ್ತದೆ ಎಂದು...

ಆ್ಯಂಬುಲೆನ್ಸ್ ವಾಹನ
Rashmi Kasaragodu
Updated On : 8 Oct 2015, 12:31 pm
ಬೆಂಗಳೂರು: ಆರೋಗ್ಯ ಇಲಾಖೆಯ ಆ್ಯಂಬುಲೆನ್ಸ್ ವಾಹನ ಗಳಿಗೆ ದಾರಿ ಬಿಡದೆ ತೊಂದರೆ ನೀಡುವ ವಾಹನ ಸವಾರರ ಪರವಾನಗಿ ರದ್ದುಗೊಳಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಸಿದ್ದಾರೆ. ಆರೋಗ್ಯ ಇಲಾಖೆಯ ಆರೋಗ್ಯ ಕವಚ 108 ವತಿಯಿಂದ ಸೇವೆಗೆ ಬಿಡಲಾಗುವ ನೂತನ ಆ್ಯಂಬುಲೆನ್ಸ್‍ಗಳಿಗೆ ಬುಧವಾರ ಇಲ್ಲಿ ಹಸಿರು ನಿಶಾನೆ ತೋರಿಸಿ ಅವರು ಮಾತನಾಡಿದರು.
ಆರೋಗ್ಯ ಇಲಾಖೆಯ 108 ಸಂಖ್ಯೆ ಆ್ಯಂಬುಲೆನ್ಸ್‍ಗಳನ್ನು ವಾಹನಗಳ ಸವಾರರುಹಿಂದಿಕ್ಕಿ ಹೋಗುತ್ತಾರೆ. ಅಷ್ಟೇ ಅಲ್ಲ. ಆ್ಯಂಬುಲೆನ್ಸ್‍ಗಳಿಗೆ ಸಿಗ್ನಲ್ ಮುಕ್ತವಾದಾಗ ಸಾಮಾನ್ಯ ಸವಾರರು ಆ್ಯಂಬುಲೆನ್ಸ್‍ಗಳನ್ನು ಹಿಂದಿಕ್ಕಿ ಮುಂದೆ ಹೋಗುವುದು ಗಮನಕ್ಕೆ ಬಂದಿದೆ. ಸಿಗ್ನಲ್ ಮುಕ್ತ ಸೌಲಭ್ಯವನ್ನು ಇತರರ ಸವಾರರೂ ದುರ್ಬಳಕೆ ಮಾಡಿಕೊಳ್ಳುತ್ತಿರುವ ಕುರಿತು ದೂರುಗಳಿವೆ. ಇನ್ನು ಮುಂದೆ ಅಂಥ ಘಟನೆಗಳು ಕಂಡುಬಂದರೆ, ಸಂಬಂಧಿಸಿದ ವಾಹನಗಳನ್ನು ವಶಕ್ಕೆ ತೆಗೆದುಕೊಳ್ಳುವು ದಲ್ಲದೇ, ಅಂಥ ಸವಾರರ ಡ್ರೈವಿಂಗ್ಲೈ ಸೆನ್ಸ್ ರದ್ದುಪಡಿಸಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.
ಬೆಂಗಳೂರು ಮಾತ್ರವಲ್ಲ. ರಾಜ್ಯದ ಎಲ್ಲಾ ಮಹಾನಗರಗಳಲ್ಲೂ ಆ್ಯಂಬುಲೆನ್ಸ್ ವಾಹನ ಗಳನ್ನು ಇತರ ಸವಾರರು ಹಿಂದಿಕ್ಕುವ ಘಟನೆ ಗಳು ನಡೆಯುತ್ತವೆ. ಇನ್ನು ಮುಂದೆ ಅಂಥ ದುಸ್ಸಾಹಸ ಮಾಡಬೇಡಿ. ನಿಯಮ ಉಲ್ಲಂಘಿ ಸುವವರನ್ನು ಗುರುತಿಸುವಂತೆ ಸದ್ಯದಲ್ಲೇ ಪೊಲೀಸರಿಗೆ ಸೂಚಿಸಲಾಗುವುದು ಎಂದರು. ಆರೋಗ್ಯ ಸಚಿವ ಯು.ಟಿ. ಖಾದರ್, ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್, ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ, ಇಲಾಖೆ ಪ್ರಧಾನಿ ಕಾರ್ಯದರ್ಶಿ ಅತುಲ್ ಕುಮಾರ್ ತಿವಾರಿ, ಇಲಾಖೆ ನಿರ್ದೇಶಕ ಡಾ. ಜಿ.ಎಂ.ವಾಮದೇವ ಹಾಜರಿದ್ದರು.

Advertisement

Advertisement

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement