(ಸಾಂದರ್ಭಿಕ ಚಿತ್ರ) 
ಜಿಲ್ಲಾ ಸುದ್ದಿ

ಬಿಪಿಒ ಕಂಪೆನಿ ವಿರುದ್ಧ ಪ್ರಕರಣ

ಯುವತಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧ ಸಾರಿಗೆ ಮತ್ತು ಭದ್ರತಾ ಸಿಬ್ಬಂದಿ ಸೌಲಭ್ಯ ಕಲ್ಪಿಸದ ಬಿಪಿಒ ಕಂಪನಿ ವಿರುದಟಛಿ ಮಡಿವಾಳಠಾಣೆಯಲ್ಲಿ ಕಾರ್ಮಿಕ ಇಲಾಖೆ ದೂರು ದಾಖಲಿಸಿದೆ. ಜತೆಗೆ ಕಾರ್ಮಿಕ ಹಕ್ಕು ಕಾಯ್ದೆ ಅನ್ವಯ ಇಲಾಖೆ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿದೆ...

ಬೆಂಗಳೂರು: ಯುವತಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧ ಸಾರಿಗೆ ಮತ್ತು ಭದ್ರತಾ ಸಿಬ್ಬಂದಿ ಸೌಲಭ್ಯ ಕಲ್ಪಿಸದ ಬಿಪಿಒ ಕಂಪನಿ ವಿರುದ್ಧ ಮಡಿವಾಳ
ಠಾಣೆಯಲ್ಲಿ ಕಾರ್ಮಿಕ ಇಲಾಖೆ ದೂರು ದಾಖಲಿಸಿದೆ. ಜತೆಗೆ ಕಾರ್ಮಿಕ ಹಕ್ಕು ಕಾಯ್ದೆ ಅನ್ವಯ ಇಲಾಖೆ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿದೆ.

ರಾತ್ರಿ 8 ರಿಂದ ಬೆಳಗ್ಗೆ 6 ಗಂಟೆವರೆಗೆ ಕೆಲಸ ಮಾಡುವ ಮಹಿಳಾ ಉದ್ಯೋಗಿಗಳಿಗೆ ಸಾರಿಗೆ ಸೌಲಭ್ಯ ಮತ್ತು ಸೆಕ್ಯುರಿಟಿ ಗಾರ್ಡ್ ಸೌಲಭ್ಯ ಕಲ್ಪಿಸುವುದು ಆಯಾ ಕಂಪನಿಗಳ ಕರ್ತವ್ಯ. ಕಲ್ಪಿಸದಿದ್ದರೆ ಕಾರ್ಮಿಕ ಇಲಾಖೆ ಗಮನಕ್ಕೆ ತಂದು ಅನುಮತಿ ಪಡೆಯಬೇಕಾಗಿತ್ತು. ಆದರೆ, ಈ ನಿಯಮಗಳನ್ನು ಸಂತ್ರಸ್ತೆ ಕೆಲಸ ಮಾಡುತ್ತಿದ್ದ ಬಿಪಿಒ ಕಂಪನಿ ಪಾಲಿಸಿರಲಿಲ್ಲ. ಅನಿವಾರ್ಯವಾಗಿ ಉದ್ಯೋಗಿ ಅ.3ರಂದು ಖಾಸಗಿ ವಾಹನ ಹತ್ತಿದ್ದಳು. ಇದರಿಂದಾಗಿಯೇ ಉದ್ಯೋಗಿ ಮೇಲೆ ಅತ್ಯಾಚಾರವಾಗಿದೆ. ಹಾಗಾಗಿ ಕಂಪನಿ ವಿರುದಟಛಿ ಎಫ್ಐಆರ್
ದಾಖಲು ಮಾಡಲಾಗಿದೆ. ಜತೆಗೆ ಇಲಾಖೆಯಲ್ಲಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಕಾರ್ಮಿಕ ಇಲಾಖೆ ಉಪ ಆಯುಕ್ತ ಉಮೇಶ್ ತಿಳಿಸಿದ್ದಾರೆ.

ಕಂಪನಿ ಪರವಾನಗಿ ರದ್ದು ಸೇರಿದಂತೆ ಕ್ರಮ ಕೈಗೊಳ್ಳುವಂತೆ ಪೊಲೀಸ್ ಆಯುಕ್ತ ಎನ್.ಎಸ್.ಮೇಘರಿಕ್ ಅವರಿಂದ ಶಿಫಾರಸು ಬಂದರೆ ಪರಿಶೀಲ ನೆ ನಡೆಸಿ ಕ್ರಮ ತೆಗೆದುಕೊಳ್ಳಲಾಗುತ್ತದೆ. ಇಲ್ಲಿಯವರೆಗೂ ಯಾವುದೇ ಶಿಫಾರಸು ಬಂದಿಲ್ಲ. ನಗರದಲ್ಲಿರುವ ಎಲ್ಲ ಕಂಪನಿಗಳಿಗೆ ಭೇಟಿ ಕೊಟ್ಟು ಕಾರ್ಮಿಕ ಸುರಕ್ಷತಾ ಕ್ರಮಗಳ ಪರಿಶೀಲನೆ ನಡೆಸಲಾಗುತ್ತದೆ ಎಂದರು.

ವೇಶ್ಯೆ ಎಂದು ತಪ್ಪಾಗಿ ಅರ್ಥೈಕೆ!:

ಚಾಕುವಿನಿಂದ ಬೆದರಿಸಿದಾಗ ಯುವತಿ ಪ್ರತಿರೋಧ ವ್ಯಕ್ತಪಡಿಸದೆ ಇದ್ದ ಕಾರಣ, ಆಕೆಯನ್ನು ವೇಶ್ಯೆ ಎಂದು ತಪ್ಪಾಗಿ ಅರ್ಥೈಸಿ ಅತ್ಯಾಚಾರ ನಡೆಸಿದ್ದಾಗಿ ಆರೋಪಿಗಳು ಪೊಲೀಸರ ವಿಚಾರಣೆ ವೇಳೆ ಆರೋಪಿಗಳಾದ ಸುನೀಲ್ ಹಾಗೂ ಯೋಗೇಶ್ ಹೇಳಿಕೆ ನೀಡಿದ್ದಾರೆಂದು ಮೂಲಗಳಿಂದ ತಿಳಿದು ಬಂದಿದೆ.

ಅ.3ರಂದು ಟೆಂಪೊ ಟ್ರಾವೆಲರ್‍ನಲ್ಲಿ ಹೊಸೂರು ಹೆದ್ದಾರಿಯಲ್ಲಿ ಬಾಡಿಗೆ ಮುಗಿಸಿಕೊಂಡು ರಾತ್ರಿ 9.30ಗಂಟೆಗೆ ವಾಪಸ್ ಮನೆಗೆ ಬರುತ್ತಿದ್ದಾಗ ಬೊಮ್ಮನಹಳ್ಳಿ ಜಂಕ್ಷನ್‍ನಲ್ಲಿ ಇಬ್ಬರು ಯುವತಿಯರು ಕೈ ಚಾಚಿದರು. ಟಿಟಿ ನಿಲ್ಲಿಸಿದಾಗ ಯುವತಿ ಹತ್ತಿದ್ದಳು. ವಾಹನದಲ್ಲಿ ಯಾರೂ ಇರಲಿಲ್ಲ. ಅಲ್ಲದೇ, ಆಕೆ ಧರಿಸಿದ್ದ ಬಟ್ಟೆಯಿಂದ ಪ್ರಚೋದನೆಗೆ ಒಳಗಾಗಿದ್ದೆವು. ಆಗ ಡ್ರೈವಿಂಗ್ ಮಾಡುತ್ತಿದ್ದ ನಾನು (ಸುನೀಲ್), ಪಕ್ಕದ ಸೀಟ್‍ನಲ್ಲಿ ಕುಳಿತಿದ್ದ ಯೋಗೇಶ್‍ನನ್ನು ಕರೆದು ಯುವತಿಗೆ ಬೆದರಿಸಿ ಬೆಲೆ ಬಾಳುವ ವಸ್ತುಗಳನ್ನು ಕಿತ್ತುಕೊಳ್ಳುವಂತೆ ಹೇಳಿದೆ.

ಆತ ಚಾಕು ತೋರಿಸಿ ಹೆದರಿಸಿದಾಗ ಭಯದಿಂದ ಪ್ರತಿರೋಧ ವ್ಯಕ್ತಪಡಿಸಿದಳು. ಆಗ ಮುಷ್ಠಿಯಿಂದ ಮುಖಕ್ಕೆ ಗುದ್ದಿ ಜೀವ ಬೆದರಿವೊಡ್ಡಿದ್ದೇವೆ. ಆಗ ಪ್ರತಿರೋಧ ವ್ಯಕ್ತಪಡಿಸಲಿಲ್ಲ.
ಹಾಗಾಗಿ ಆಕೆಯನ್ನು ವೇಶ್ಯೆವೆಂದು ತಪ್ಪಾಗಿ ಅರ್ಥೈಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಮಾಡಿದ್ದೇವೆ. ಬಳಿಕ ಪೊಲೀಸರಿಗೆ ಮತ್ತು ಪಾಲಕರಿಗೆ ಕರೆ ಮಾಡುತ್ತಾಳೆ ಎಂಬ ಕಾರಣಕ್ಕೆ ಮೊಬೈಲ್ ನಿಂದ ಸಿಮ್ ಕಾರ್ಡ್ ತೆಗೆದು ವಾಪಸ್ ಕೊಟ್ಟು ಪೇಯಿಂಗ್ ಗೆಸ್ಟ್ ಬಳಿ ಬಿಟ್ಟಿದ್ದಾಗಿ ಸುನೀಲ್ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾದ ಬಳಿಕವಷ್ಟೇ ಯುವತಿ ವ್ಯೆಶ್ಯೆಯಲ್ಲ ಎಂದು ಅವರಿಗೆ ತಿಳಿದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

SIR ವೇಳೆ ಡಿಲೀಟ್ ಆಗಿರುವ 13.3 ಕೋಟಿ ಮತದಾರರ ಪತ್ತೆಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ನೇಮಕ!

'ಸ್ಪಾದಲ್ಲಿ ಅಕ್ರಮ ಚಟುವಟಿಕೆ' ಎಂದು ಆರೋಪಿಸಿ ದಾಂಧಲೆ; 5 ಲಕ್ಷ ರೂ ಗೆ ಬೇಡಿಕೆ, 1 ಲಕ್ಷ ವಸೂಲಿ! ಶಾಕಿಂಗ್ ಘಟನೆ

'ಇತಿಹಾಸ ನಿಮ್ಮನ್ನು ಇನ್ನಷ್ಟು ಗೌರವದಿಂದ ನೆನಪಿಸಿಕೊಳ್ಳಲಿದೆ'; Agarkarಗೆ ಗೇಟ್ ಪಾಸ್`, ಗಂಭೀರ್‌ ಭಾವುಕ ಸಂದೇಶ!

Bigg Boss Kannada: ಟಾಸ್ಕ್ ವೇಳೆ ಕುಸಿದು ಬಿದ್ದ ನಟಿ ಸಂಗೀತಾ ಭಟ್; ಆರೋಗ್ಯದಲ್ಲಿ ಏರುಪೇರು! ವಿಡಿಯೋ ವೈರಲ್