ಬೆಂಗಳೂರು: ಬಳ್ಳಾರಿಯಲ್ಲಿ ಅಕ್ರಮ ಗಣಿಕಾರಿಕೆ ಹಾಗೂ ಅದಿರು ಸಾಗಣೆ ಪ್ರಕರಣದಿಂದ ಅಸೋಸಿಯೇಟೆಡ್ ಮೈನಿಂಗ್(ಎಎಂಸಿ)ಕಂಪನಿ ಮಾಲೀಕರೂ ಆದ ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ಅವರ ಪತ್ನಿ ಲಕ್ಷ್ಮೀ ಅರುಣಾ ಅವರನ್ನು ಸಿಬಿಐ ವಿಶೇಷ ನ್ಯಾಯಾಲಯ ಪ್ರಕರಣದಿಂದ ಮುಕ್ತಗೊಳಿಸಿದೆ.
ಲಕ್ಷ್ಮೀ ಅರುಣಾ ಅವರು ಎಎಂಸಿ ಕಂಪನಿ ಮಾಲೀಕರು ಮಾತ್ರ. ಆದರೆ, ಕಂಪನಿ ನಡೆಸಿದ ಅಕ್ರಮ ಗಣಿಗಾರಿಕೆ ಹಾಗೂ ಅಕ್ರಮ ಅದಿರು ಸಾಗಣೆ ಚಟುವಟಿಕೆಗಳಲ್ಲಿ ಭಾಗವಹಿಸಿಲ್ಲ.
ಸಿಬಿಐ ಸಲ್ಲಿಸಿದ ದೋಷಾರೋಪ ಪಟ್ಟಿಯಲ್ಲಿ ಲಕ್ಷ್ಮೀ ಅವರು ಅಕ್ರಮ ಗಣಿಕಾರಿಗೆ ನಡೆಸಿದ ಆರೋಪವನ್ನು ಸಾಬೀತು ಪಡಿಸುವ ಸಾಕ್ಷಾಧಾರಗಳು ಇಲ್ಲ. ಹೀಗಾಗಿ ಅವರ ವಿರುದ್ಧ ವಿಚಾರಣೆ ನಡೆಸುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿತ್ತು.