ಬೆಂಗಳೂರು: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು 2015-16ನೇ ಸಾಲಿನ `ಕರ್ನಾಟಕ ಕಲಾಶ್ರೀ' ಪ್ರಶಸ್ತಿ ಪಟ್ಟಿ ಪ್ರಕಟಿಸಿದೆ. ಗೌರವ ಪ್ರಶಸ್ತಿಗೆ ಸುಗಮ ಸಂಗೀತ ಕ್ಷೇತ್ರದಿಂದ ಬೆಂಗಳೂರಿನ ಎಂ.ಕೆ. ಜಯಶ್ರೀ, ಕಥಾ ಕೀರ್ತನ ಕ್ಷೇತ್ರದಿಂದ ಕೊಪ್ಪಳದ ಶಿವರಾಜ ಶಾಸ್ತ್ರಿಗೆ ಈ ವರ್ಷದ ಗೌರವ ಪ್ರಶಸ್ತಿ ಸಂದಿದೆ. ಪ್ರದಾನ ಸಮಾರಂಭ ಡಿ.19 ರಂದು ನಡೆಯಲಿದೆ ಎಂದು ರಿಜಿಸ್ಟ್ರಾರ್ ಟಿ.ಜಿ. ನರಸಿಂಹಮೂರ್ತಿ ತಿಳಿಸಿದ್ದಾರೆ.
ಕರ್ನಾಟಕ ಕಲಾಶ್ರೀ' ಪ್ರಶಸಿ ಪುರಸ್ಕೃತರು:
ಕರ್ನಾಟಕ ಸಂಗೀತ ವಿಭಾಗದಲ್ಲಿ ಬೆಂಗಳೂರಿನ ಗುಡಿಬಂಡೆ ಕುಮಾರಸ್ವಾಮಿ ಹಾಡುಗಾರಿಕೆ, ಮೈಸೂರಿನ ರಾಜಲಕ್ಷ್ಮಿ ಶ್ರೀಧರ್ -ಹಾಡುಗಾರಿಕೆ, ಮಂಗಳೂರಿನ ಎಂ.ಆರ್. ಸಾಯಿನಾಥ್, ಚಿಕ್ಕಬಳ್ಳಾಪುರದ ವಿರೂಪಸಂದ್ರ ಗೋಪಾಲಕೃಷ್ಣಾಚಾರ್, ಹಿಂದೂಸ್ತಾನಿ ಸಂಗೀತ ವಿಭಾಗದಲ್ಲಿ ಶಿವಮೊಗ್ಗ ದ ಹುಮಾಯಾನ್ ಹರ್ಲಾಪುರ-ಗಾಯನ, ಶಿರಸಿಯ ಆರ್.ವಿ. ಹೆಗಡೆ-ರುದ್ರವೀಣೆ, ಬಾಗಲಕೋಟೆಯ ವಾದಿರಾಜ್ ನಿಂಬರಗಿ-ವಯೋಲಿನ್, ರಾಯಚೂರಿನ ಈರಣ್ಣ ಜಾಲಿಬೆಂಚಿ-ತಬಲಾ, ನೃತ್ಯ ವಿಭಾಗದಲ್ಲಿ ಚಾಮರಾಜ ನಗರದ ಉಷಾ ವೇಣುಗೋಪಾಲ್, ಬೆಂಗಳೂರಿನ ಎ.ಎನ್.ಸುಧೀರ್‍ಕುಮಾರ್, ಬೆಂಗಳೂರಿನ ರಮಾ ಜಗನ್ನಾಥ್-ನೃತ್ಯಕ್ಕೆ ಗಾಯನ, ಸುಗಮ ಸಂಗೀತ ವಿಭಾಗದಲ್ಲಿ ಮೈಸೂರಿನ ಜಿ.ಪುಷ್ಪಲತಾ, ಕಥಾಕೀರ್ತನದಲ್ಲಿ ತುಮಕೂರಿನ ಎನ್.ಕೆ.ಮೋಹನ್, ಗಮಕ ವಿಭಾಗದಲ್ಲಿ ಬೆಂಗಳೂರಿನ ಎ.ವಿ. ಪ್ರಸನ್ನ, ನಿರ್ಮಲ ಪ್ರಸನ್ನ, ಮೈಸೂರಿನ ಕೃಷ್ಣಗಿರಿ ರಾಮಚಂದ್ರ ಹಾಗೂ ಸಂಘ ಸಂಸ್ಥೆ ಪ್ರಶಸ್ತಿಗೆ ಬೆಂಗಳೂರಿನ ಶ್ರೀರಾಮ ಲಲಿತ ಕಲಾ ಮಂದಿರ ಆಯ್ಕೆಯಾಗಿದೆ.