ಪ್ರತಿಭಟನಾ ನಿರತ ನರ್ಸ್ ಗಳ ಜತೆ ಸಂವಾದ ಮಾಡುತ್ತಿರುವ ಮಾನವ ಹಕ್ಕು ಆಯೋಗದ ಅಧ್ಯಕ್ಷೆ (ಕೃಪೆ ಕೆಪಿಎನ್) 
ಜಿಲ್ಲಾ ಸುದ್ದಿ

ನರ್ಸ್‍ಗಳಿಗೆ ವಜಾ ಕಾಯಂ

ಕಾಯಮಾತಿಗೆ ಆಗ್ರಹಿಸಿ ಕಿಮ್ಸ್ ಆಸ್ಪತ್ರೆ ನರ್ಸ್‍ಗಳು ನಡೆಸುತ್ತಿದ್ದ ಪ್ರತಿಭಟನೆಗೆ ಹೊಸ ತಿರುವು ಪಡೆದುಕೊಂಡಿದ್ದು, 2010ರಿಂದ ಗುತ್ತಿಗೆ ಆಧಾರದ...

 ಬೆಂಗಳೂರು: ಕಾಯಮಾತಿಗೆ ಆಗ್ರಹಿಸಿ ಕಿಮ್ಸ್  ಆಸ್ಪತ್ರೆ ನರ್ಸ್‍ಗಳು ನಡೆಸುತ್ತಿದ್ದ ಪ್ರತಿಭಟನೆಗೆ ಹೊಸ ತಿರುವು ಪಡೆದುಕೊಂಡಿದ್ದು, 2010ರಿಂದ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ನರ್ಸ್‍ಗಳನ್ನು ವಜಾಗೊಳಿಸಿ ಕಿಮ್ಸ್  ಆಸ್ಪತ್ರೆ ಆಡಳಿತ ಶುಕ್ರವಾರಆದೇಶ ಹೊರಡಿಸಿದೆ. ಇದರೊಂದಿಗೆ ಕಿಮ್ಸ್  ಆಸ್ಪತ್ರೆ ಆವರಣದಲ್ಲಿಆಹೋ ರಾತ್ರಿ ನಡೆಸುತ್ತಿದ್ದ ನರ್ಸ್‍ಗಳ ಪ್ರತಿಭಟನೆಗೆ ಬೆಲೆಕೊಡದ ಆಡಳಿತ ಮಂಡಳಿ 150ಕ್ಕೂ ಅಧಿಕ ನರ್ಸ್‍ಗಳನ್ನು ವಜಾಗೊಳಿಸಿರುವುದರಿಂದ
ಪ್ರತಿಭಟನೆ ಇನ್ನಷ್ಟು ತೀವ್ರ ಸ್ವರೂಪ ಪಡೆದುಕೊಳ್ಳುವ ಲಕ್ಷಣಗಳು ಕಾಣಿಸುತ್ತಿವೆ. ಸೇವೆ ಕಾಯಂ ಹಾಗೂ ಸಂಬಳ ಹೆಚ್ಚಳಕ್ಕೆ ಆಗ್ರಹಿಸಿ ನೂರಾರು ನರ್ಸ್‍ಗಳು ಕಳೆದ ಇಪ್ಪತ್ತು ದಿನಗಳಿಂದ
ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವರ್ಷದಿಂದ ಜಾರಿಗೆ ಬರುವಂತೆ ಕಾಯಮಾತಿ ಮಾಡಲಾಗುತ್ತದೆ ಎಂದು ಒಕ್ಕಲಿಗರ ಸಂಘದ ಅಧ್ಯಕ್ಷ ಅಪ್ಪಾಜಿಗೌಡ ಅವರು ನರ್ಸ್‍ಗಳಿಗೆ ಭರವಸೆ ನೀಡಿದ್ದರು. ಆದರೆ,ಇದಕ್ಕೊಪ್ಪದ ನರ್ಸ್‍ಗಳು ತಾವು ಸೇವೆಗೆ ಸೇರಿದಾಗಿನಿಂದ ಜಾರಿಗೆ ಬರುವಂತೆ ಕಾಯಮಾತಿ ವಮಾಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ಮುಂದುವರಿಸಿದ್ದರು. ಅಪ್ಪಾಜಿಗೌಡ ಅವರಿಗೆ ಬಾಗಿನ ನೀಡುವುದು, ಮುತ್ತಿಗೆ ಹಾಕುವುದು ಮಾಡುವ ಮೂಲಕ ಮುಖಭಂಗ ಮಾಡಿದ್ದರು. ಈ ಬಗ್ಗೆ ಕನ್ನಡಪ್ರಭದೊಂದಿಗೆ ಮಾತನಾಡಿದ, ಕಿಮ್ಸ್  ಆಸ್ಪತ್ರೆ ಕಂಪ್ಯೂಟರ್ ಆಪರೇಟರ್ ಪ್ರವೀಣ್, ಕಿಮ್ಸ್  ಆಸ್ಪತ್ರೆ ನಷ್ಟದಲ್ಲಿ ನಡೆಯುತ್ತಿದ್ದು ನಸ್ರ್ ಗಳನ್ನು ಕಾಯಮಾತಿ ಮಾಡಿಕೊಳ್ಳಲು ಆಗುವುದಿಲ್ಲ ಎಂದು ಅಪ್ಪಾಜಿಗೌಡರು ಹೇಳುತ್ತಿದ್ದಾರೆ.
ಆದರೆ, ನಷ್ಟಕ್ಕೆ ಕಾರಣವಾಗಿರುವವರು ಅವರೇ ಆಗಿದ್ದಾರೆ. ಈ ವಿಚಾರವನ್ನು ಹೇಳಿದ್ದಕ್ಕೆ ಅಮಾನತುಗೊಳಿಸಲಾಗಿದೆ. ಆದರೆ, ಪ್ರತಿಭಟನೆಯನ್ನು ಇಲ್ಲಿಗೆ ನಿಲ್ಲಿಸುವುದಿಲ್ಲ. ನಮ್ಮ ನ್ಯಾಯಯುತಬೇಡಿಕೆ ಈಡೇರಿಕೆಗೆ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿವೆ. ಹೀಗಾಗಿ, ಪ್ರತಿಭಟನೆ ಮುಂದುವರಿಸುವುದಾಗಿ ಹೇಳಿದರು. ಆಡಳಿತ ಮಂಡಳಿಯ ಕ್ರಮವನ್ನು ತೀವ್ರವಾಗಿ ಖಂಡಿಸಿರುವ ನರ್ಸ್‍ಗಳು ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ಮುಂದಾಗಿದ್ದಾರೆ. ಪೋಷಕರು ಕೂಡ ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿ ದ್ದು, ಮುಂದೆ ಕಿಮ್ಸ್  ಆವರಣದಲ್ಲಿ ಕುಟುಂಬ ಸಮೇತರಾಗಿ ಪ್ರತಿಭಟನೆ ನಡೆಸುವ ಹಾಗೂ ಕಾನೂನು ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದಾರೆ. ಧರಣಿನಿರತರನ್ನು ವಜಾಗೊಳಿಸಿರುವ ಕುರಿತು ಪ್ರತಿಕ್ರಿಯಿಸಿದ ಕಿಮ್ಸ್  ಆಡಳಿತ ಮಂಡಳಿ ಹಾಗೂ ಒಕ್ಕಲಿಗರ ಸಂಘದ ಅಧ್ಯಕ್ಷ ಅಪ್ಪಾಜಿಗೌಡ, ನರ್ಸ್‍ಗಳ ಮನವೊಲಿಕೆಗೆ ಹಲವು ಬಾರಿ ಪ್ರಯತ್ನ ಮಾಡಲಾಯಿತು. ಆದರೆ, ಅವರು ಮನವಿಗೆ ಸಕಾರಾತ್ಮಕಾಗಿ ಸ್ಪಂದಿಸದೆ ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ. ಮಾನವೀಯತೆ ದೃಷ್ಟಿಯಿಂದ ವೇತನ ಹೆಚ್ಚಳ ಮಾಡಲಾಗಿದೆ. ಆದರೂ, ಪ್ರತಿಭಟನೆ ಮುಂದುವರಿಸುವ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ವಜಾಗೊಳಿಸಲಾಗಿದೆ ಎಂದು ಹೇಳಿದರು. 
ನಷ್ಟದ ನೆವ: ಆಸ್ಪತ್ರೆಯ ಆದಾಯಕ್ಕಿಂತ ವೆಚ್ಚವೇ ಅಧಿಕವಿದೆ. ಬರುವ ಆದಾಯದಲ್ಲಿಯೇ ಆಸ್ಪತ್ರೆಯನ್ನು ಹೇಗೊ ಸರಿದೂಗಿಸಿಕೊಂಡು ಹೋಗಲಾಗುತ್ತಿದೆ. ಕಿಮ್ಸ್ ಆಸ್ಪತ್ರೆಯ ವರಮಾನ ವರ್ಷಕ್ಕೆ ರು.95 ಕೋಟಿ. ಆದರೆ, ಖರ್ಚು ರು.110 ಕೋಟಿ. ಆದಾಯಕ್ಕಿಂತ ಖರ್ಚು ಹೆಚ್ಚಾಗಿದ್ದು ಆಸ್ಪತ್ರೆಯ ಆರ್ಥಿಕ ಸ್ಥಿತಿ ಸರಿ ಇಲ್ಲ. ಇನ್ನು 720 ಹಾಸಿಗೆ ಇರುವ ಆಸ್ಪತ್ರೆಗೆ ಎಂಸಿಐ ನಿಯಮಗಳ ಪ್ರಕಾರ ಬೇಕಾಗಿರುವುದು 350 ನರ್ಸ್‍ಗಳು. ಆದರೆ, ಕಿಮ್ಸ್ ನಲ್ಲಿ 670 ನರ್ಸ್‍ಗಳಿದ್ದಾರೆ. ಈ ಪೈಕಿ 480 ಕಾಯಂ ನರ್ಸ್‍ಗಳಿದ್ದಾರೆ. ಅದರಲ್ಲಿ 184 ನರ್ಸ್ ಗಳು ಗುತ್ತಿಗೆ ಆಧಾರದ ಮೇಲೆ ನೇಮಕವಾದವರು. 3 ವರ್ಷ ಸೇವೆ ಪೂರೈಸಿದವರಿಗೆ ರು.7 ಸಾವಿರ ಇದ್ದ ವೇತನವನ್ನು ರು.10,500 ಕ್ಕೆ ಹೆಚ್ಚಿಸಲಾಗಿದೆ. 184 ನರ್ಸ್‍ಗಳನ್ನು ಕಾಯಂಗೊಳಿಸಿದರೆ ಕಿಮ್ಸ್ ಗೆ ಆರ್ಥಿಕ ಹೊರೆಯಾಗಲಿದೆ ಎಂದು ಅಪ್ಪಾಜಿಗೌಡ ಸುದ್ದಿಗಾರರಿಗೆ ತಿಳಿಸಿದರು.
ಆಯೋಗದಿಂದ ನೋಟಿಸ್
ಕಿಮ್ಸ್ ನಲ್ಲಿ ಕಳೆದ ಒಂದೂವರೆ ವರ್ಷದಿಂದ ರಜೆಗಳನ್ನು ರದ್ದುಪಡಿಸಿ ದ್ದಲ್ಲದೇ ಕೆಲಸದಿಂದ ವಜಾಗೊಳಿಸುವ ಸಂಘದ ನಿರ್ದೇಶಕರು ಬೆದರಿಕೆ ಹಾಕಿದ್ದಾಗಿ ನೊಂದವರು ರಾಜ್ಯ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ. ಈ ಹಿನ್ನೆಲೆ ಅರ್ಜಿದಾರರ ಸಮಸ್ಯೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಂಡು, ವರದಿಯನ್ನು ಅತಿ ಜರೂರಾಗಿ ಆಯೋಗಕ್ಕೆ ಕಳುಹಿಸಿಕೊಡಬೇಕೆಂದು ಕಿಮ್ಸ್  ಆಡಳಿತಮಂಡಳಿಗೆ ಮಹಿಳಾ ಆಯೋಗ ತುರ್ತು ನೋಟಿಸ್ ಜಾರಿ ಮಾಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

Afghan-Pak War: 'ಅಲ್ಲಾ ಕಾಪಾಡು' ಅಫ್ಘಾನ್ ಪ್ರತೀಕಾರದ ದಾಳಿ; ಆಗಸದೆತ್ತರಕ್ಕೆ ಚಿಮ್ಮಿದ ಪಾಕ್ ಸೈನಿಕರ ಶವಗಳು, ಗಡಿಯಿಂದ ಕಾಲ್ಕಿತ್ತ ಸೇನೆ, Video

'ಆಕೆ ಮಧ್ಯರಾತ್ರಿ 12.30ಕ್ಕೆ ಹೇಗೆ ಹೊರಬಂದಳು?': ಗ್ಯಾಂಗ್ ರೇಪ್ ಕುರಿತು ಮಮತಾ ಬ್ಯಾನರ್ಜಿ ಹೇಳಿಕೆ

ಹಾಸನಾಂಬ ದರ್ಶನಕ್ಕೆ ಭಕ್ತರ ಸಂಖ್ಯೆ ಹೆಚ್ಚಳ: ಎರಡೇ ದಿನಗಳಲ್ಲಿ ರೂ. 2.24 ಕೋಟಿ ಆದಾಯ, ಆರು ಸಿಬ್ಬಂದಿ ಅಮಾನತು!

ಸರ್ಕಾರಿ ಸಂಸ್ಥೆಗಳು, ಸಾರ್ವಜನಿಕ ಸ್ಥಳಗಳಲ್ಲಿ RSS ಚಟುವಟಿಕೆಗಳನ್ನು ನಿಷೇಧಿಸಿ: ಮುಖ್ಯಮಂತ್ರಿಗೆ ಪ್ರಿಯಾಂಕ್ ಖರ್ಗೆ ಪತ್ರ

SCROLL FOR NEXT