ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ಮಡಿವಾಳರೇ ಸಂಘಟಿತರಾಗಿ: ಶಿವಯೋಗಾನಂದಪುರಿ ಸ್ವಾಮೀಜಿ ಸಲಹೆ

ಹಿಂದುಳಿದ ವರ್ಗಗಳಲ್ಲಿಯೇ ತೀರಾ ಹಿಂದುಳಿದಿರುವ ಮಡಿವಾಳ ಸಮಾಜದವರು ಸಂಘಟಿತರಾಗಿ ಸರ್ಕಾರದ ಸೌಲಭ್ಯ ಪಡೆದುಕೊಳ್ಳುವಂತೆ ಮಾಚಿದೇವ ಗುರುಪೀಠ ವಿಶ್ವಸ್ಥ ಸಮಿತಿಯ ಮಾಚಿದೇವ ಶಿವಯೋಗಾ ನಂದಪುರಿ ಸ್ವಾಮೀಜಿ ಕರೆ ನೀಡಿದರು...

ಮಡಿವಾಳ ಮಾಚಿದೇವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗಣ್ಯರಿಗಾಗಿ ಕಾಯುತ್ತಿರುವ ನಾರಿಯರು.
Updated On : 11 Oct 2015, 11:33 am

ಬೆಂಗಳೂರು: ಹಿಂದುಳಿದ ವರ್ಗಗಳಲ್ಲಿಯೇ ತೀರಾ ಹಿಂದುಳಿದಿರುವ ಮಡಿವಾಳ ಸಮಾಜದವರು ಸಂಘಟಿತರಾಗಿ ಸರ್ಕಾರದ ಸೌಲಭ್ಯ ಪಡೆದುಕೊಳ್ಳುವಂತೆ ಮಾಚಿದೇವ ಗುರುಪೀಠ ವಿಶ್ವಸ್ಥ ಸಮಿತಿಯ ಮಾಚಿದೇವ ಶಿವಯೋಗಾ ನಂದಪುರಿ ಸ್ವಾಮೀಜಿ ಕರೆ ನೀಡಿದರು.

ಕರ್ನಾಟಕ ರಾಜ್ಯ ಮಡಿವಾಳರ ಕ್ಷೇಮಾಭಿವೃದ್ಧಿ ಸಂಘವು ರಾಜಾಜಿನಗರದ ಡಾ.ರಾಜ್‍ಕುಮಾರ್ ಕಲಾಕ್ಷೇತ್ರದಲ್ಲಿ ಶನಿವಾರ ಆಯೋಜಿಸಿದ್ದ ರಾಜ್ಯಮಟ್ಟದ ಮಡಿವಾಳ ಮಾಚಿದೇವ ಪ್ರಶಸ್ತಿ ಪ್ರದಾನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ದೇವತಾ ಕಾರ್ಯದಲ್ಲಿ ಮಡಿವಾಳರು ಮುಂದೆ ಇರುತ್ತಾರೆ. ಆದರೆ, ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿದ್ದಾರೆ. ಈ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಮಡಿವಾಳ ಸಂಘವು ರಾಜ್ಯಾದ್ಯಂತ ಸಂಘಟನೆ ಮಾಡಿ ಒಗ್ಗೂಡಿಸಬೇಕು. ಅಧ್ಯಕ್ಷರು ಯಾರೇ ಆಗಲಿ ಸಂಘಟನೆ ಒಂದೇ ಆಗಿರಬೇಕು.

ಸಾತ್ವಿಕ ಭಾವದೊಂದಿಗೆ ಸಾಮೂಹಿಕವಾಗಿ ಹೋಗಬೇಕು. ಒಬ್ಬರ ಕಾಲನ್ನು ಒಬ್ಬರು ಎಳೆಯಬೇಡಿ. ಹಣಕ್ಕಾಗಿ ಕೈಚಾಚಬೇಡಿ, ಸನ್ಮಾನವನ್ನೂ ಮಾಡಬೇಡಿ. ನಮ್ಮ ಸಮಾಜದ ಉತ್ಸಾಹಿ ಯುವಪೀಳಿಗೆಯನ್ನು ಗುರುತಿಸಿ ಅವರನ್ನು ಶೈಕ್ಷಣಿಕವಾಗಿ ಮುಂದೆ ತರಲು ಪ್ರಯತ್ನಿಸಿ ಎಂದು ಶ್ರೀಗಳು ಕಿವಿಮಾತು ಹೇಳಿದರು.

ಆಸೆ ಆಯಸ್ಸನ್ನು ಕೊಲ್ಲುತ್ತದೆ. ಹನ್ನೆರಡನೇ ಶತಮಾನದಲ್ಲಿದ್ದ ಮಡಿವಾಳ ಮಾಚಿದೇವ ಶರಣರು ವಚನಗಳ ಮೂಲಕ ಸಾರವನ್ನು ಸಾರಿದ್ದಾರೆ. ಅವರನ್ನು ಜಾತಿಯಿಂದ ಪೂಜಿಸದೆ, ಅವರ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತಾಗ-ಬೇಕು. ಮಲ್ಲೇಶ್ವರಂ ಶಾಸಕ ಅಶ್ವತ್ಥನಾರಾಯಣ ಅವರು ದೋಭಿಘಾಟ್‍ನಲ್ಲಿ ಯಂತ್ರ-ಗಳನ್ನು ಅಳವಡಿಸಿ 200 ಜನರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಅವರಂತೆಯೇ ಇತರೆ ಶಾಸಕರು ಕಾರ್ಯಪ್ರವೃತ್ತರಾಗಿ ಮಡಿವಾಳ ಜನಾಂಗದವರ ನೆರವಿಗೆ ಬರಬೇಕು ಎಂದು ಅಭಿಪ್ರಾಯಪಟ್ಟರು.

ಶಾಸಕ ಡಾ.ಸಿ.ಎನ್. ಅಶ್ವತ್ಥನಾರಾಯಣ ಮಾತನಾಡಿ, ಆರು ವರ್ಷಗಳ ಹಿಂದೆ ತಮ್ಮ ಕ್ಷೇತ್ರದ ದೋಭಿಘಾಟ್‍ನಲ್ಲಿ ಯಂತ್ರಗಳನ್ನು ಅಳವಡಿಸಲಾಯಿತು. ಮಡಿವಾಳರ ಸಂಘ ಇದುವರೆಗೆ ಒಂದೇ ಒಂದು ದೂರು ಇಲ್ಲದಂತೆ ಕಾರ್ಯನಿರ್ವಹಿಸುತ್ತಿದೆ. ಈಗ ನನ್ನ ಕಾರ್ಯ ಸಾರ್ಥಕ ಎನಿಸಿದೆ ಎಂದರು.

ಮೂಡಬಿದಿರೆ ಕ್ಷೇತ್ರ ಕರಿಂಜೆಯ ಮುಕ್ತಾನಂದ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಅಂಗವಿಕಲರ ಅಧಿನಿಯಮ ಆಯುಕ್ತ ಕೆ.ಎಸ್.ರಾಜಣ್ಣ, ಕರ್ನಾಟಕ ರಾಜ್ಯ ಮಡಿವಾಳರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ನಂಜಪ್ಪ, ಪಾಲಿಕೆ ಸದಸ್ಯೆ ಸವಿತಾ ಕೃಷ್ಣಪ್ಪ, ಮುಖಂಡರಾದ ಮಂಜುನಾಥರಾಜು, ವೆಂಕಟರಮಣ, ಶಿವರಾಜಮೂರ್ತಿ, ರಾಜಕುಮಾರ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement